Asianet Suvarna News Asianet Suvarna News

ಯಾದಗಿರಿ ಅತ್ಯಾಚಾರ ಸಂತ್ರಸ್ತೆಗೆ 3 ಲಕ್ಷ ನೆರವು

  • ಯಾದಗಿರಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
  • ಸಂತ್ರಸ್ತೆ ಎದೆಗುಂದದೆ ಸ್ವಾವಲಂಬಿ ಜೀವನ ಮುಂದುವರೆಸುವಂತೆ ಧೈರ್ಯ ತುಂಬಲಾಗಿದೆ
  •  3 ಲಕ್ಷಗಳ ಆರ್ಥಿಕ ನೆರವನ್ನೂ ನೀಡಲಾಗುವುದು ಎಂದ ಮಹಿಳಾ ಆಯೋಗದ ಅಧ್ಯಕ್ಷೆ
yadgir rape case woman commission announce 3 lakh compensation snr
Author
Bengaluru, First Published Sep 16, 2021, 7:17 AM IST
  • Facebook
  • Twitter
  • Whatsapp

ಯಾದಗಿರಿ (ಸೆ.16): ಯಾದಗಿರಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿದ್ದಾರೆ. 

ಜತೆಗೆ, ಸಂತ್ರಸ್ತೆ ಎದೆಗುಂದದೆ ಸ್ವಾವಲಂಬಿ ಜೀವನ ಮುಂದುವರೆಸುವಂತೆ ಧೈರ್ಯ ತುಂಬಲಾಗಿದೆ. ಆಕೆಗೆ 3 ಲಕ್ಷಗಳ ಆರ್ಥಿಕ ನೆರವನ್ನೂ ನೀಡಲಾಗುವುದು ಎಂದೂ ಹೇಳಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಘಟನೆಯನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ, ಸಂತ್ರಸ್ತೆಯನ್ನು ಅಧಿಕಾರಿಗಳ ತಂಡದ ಜೊತೆ ಭೇಟಿ ಮಾಡಿದ್ದೇನೆ. 

ಗ್ಯಾಂಗ್‌ ರೇಪ್‌: ಯಾದಗಿರಿಗೆ ಮಹಿಳಾ ಆಯೋಗದ ಅಧ್ಯಕ್ಷೆ

ಆಕೆ ಈ ಘಟನೆ ಒಂದೂವರೆ ವರ್ಷದ ಹಿಂದೆ ನಡೆದಿದೆ ಎಂದಿದ್ದಾಳೆ. ಆ ಸಂದರ್ಭದಲ್ಲಿ ಆಕೆಗೆ ದೂರು ನೀಡದಂತೆ ಆರೋಪಿಗಳು ಬೆದರಿಕೆ ಹಾಕಿದ್ದರು. ಹೀಗಾಗಿ, ದೂರು ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಸಂತ್ರಸ್ತೆಗೆ ಸರ್ಕಾರ 3 ಲಕ್ಷ ರು.ಗಳ ಆರ್ಥಿಕ ಸಹಾಯ ನೀಡಲಿದೆ, ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಘಟನೆ ಯಾವತ್ತು ನಡೆದಿದೆ ಎನ್ನುವುದು ಮುಖ್ಯವಲ್ಲ, ಸಂತ್ರಸ್ತೆಗೆ ನ್ಯಾಯ ಕಲ್ಪಿಸಿ ಕೊಡಬೇಕು ಎಂಬುದು ನಾಗರಿಕ ಸಮಾಜದ ಎಲ್ಲರ ಕರ್ತವ್ಯ ಎಂದರು.

Follow Us:
Download App:
  • android
  • ios