ಫಾಝಿಲ್, ಮಸೂದ್ ಹತ್ಯೆ ಆರೋಪಿಗಳ 'ಆಸ್ತಿ ಮುಟ್ಟುಗೋಲು' ಯಾಕಿಲ್ಲ?: ಎಡಿಜಿಪಿಗೆ ಖಾದರ್ ಪತ್ರ!

ಆಸ್ತಿ ಮುಟ್ಟುಗೋಲು ಅಂಥ ಒಂದೇ ಕೇಸಿಗೆ ಸೀಮಿತ‌ ಮಾಡ್ತಾ ಇದಾರೆ.‌ ಉನ್ನತ ಮಟ್ಟದ ಅಧಿಕಾರಿಗಳು ಕೋಮು ಹತ್ಯೆಯನ್ನು ಸಮಾನವಾಗಿ ನೋಡಬೇಕು: ಖಾದರ್‌

UT Khader Letter to ADGP Alok Kumar on Fazil and Masood Murder Case grg

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಆ.18):  ಆಸ್ತಿ ಮುಟ್ಟುಗೋಲು ವಿಚಾರದಲ್ಲಿ ಪೊಲೀಸ್ ಇಲಾಖೆ ಧ್ವಂಧ್ವ ನೀತಿಗೆ ಕಾಂಗ್ರೆಸ್‌ ನಾಯಕ ಯು.ಟಿ. ಖಾದರ್ ಕಿಡಿ ಕಾರಿದ್ದು, ಫಾಝಿಲ್, ಮಸೂದ್ ವಿಚಾರದಲ್ಲಿ ಪೊಲೀಸರ ಮೌನಕ್ಕೆ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಡಿಜಿಪಿ‌ ಅಲೋಕ್ ಕುಮಾರ್‌ಗೆ ಪತ್ರ ಬರೆದು ಯು.ಟಿ.ಖಾದರ್ ಪ್ರಶ್ನೆ ಎತ್ತಿದ್ದಾರೆ. ದ.ಕ‌ ಜಿಲ್ಲೆಯಲ್ಲಿ ಕೋಮು ಗಲಭೆ ತಡೆಯಲು ಪೊಲೀಸರ ‌ಕ್ರಮ ಶ್ಲಾಘನೀಯ. ಪ್ರವೀಣ್ ಕೊಲೆ ಆರೋಪಿಗಳ ಆಸ್ತಿ ಮುಟ್ಟುಗೋಲು ಹೇಳಿಕೆ ಸ್ವಾಗತಾರ್ಹ. ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮಕ್ಕೆ ಸಮಾಜದ ಎಲ್ಲರ ಬೆಂಬಲ ಇದೆ. ಆದರೆ ಕೋಮುದ್ವೇಷಕ್ಕೆ ಬಲಿಯಾದ ಫಾಝಿಲ್, ಮಸೂದ್ ವಿಚಾರದಲ್ಲಿ ಯಾಕಿಲ್ಲ? ಈ ಎರಡು ಕೇಸ್‌ನ‌‌ ಆರೋಪಿಗಳ ಆಸ್ತಿ ಮುಟ್ಟುಗೋಲು ವಿಚಾರದಲ್ಲಿ ಮೌನ ಯಾಕೆ? ಅನುಮಾನ ಬಗೆ ಹರಿಸಿ, ಸೂಕ್ತ ಉತ್ತರ ಕೊಡಿ ಅಂತ ಖಾದರ್ ಪ್ರಶ್ನೆ ಮಾಡಿದ್ದಾರೆ. ಆಸ್ತಿಮುಟ್ಟುಗೋಲು ಹೇಳಿಕೆ ಬೆನ್ನಲ್ಲೇ ಎಡಿಜಿಪಿಗೆ ಪತ್ರ ಬರೆದು ಉತ್ತರ ಕೇಳಿದ್ದಾರೆ ವಿಪಕ್ಷ ಉಪನಾಯಕ ಯು.ಟಿ.ಖಾದರ್.

ಕೊಲೆ ಆಗಿದ್ದು ಮೂವರು ಯುವಕರು, ಪರಿಹಾರ ಮಾತ್ರ ಒಬ್ಬರಿಗೆ: ಖಾದರ್‌

'ಹೊಸ ಕಾನೂನು ತಂದು ಆಸ್ತಿ ಮುಟ್ಟುಗೋಲು, ಬುಲ್ಡೋಜರ್ ಎಲ್ಲವನ್ನೂ ಸೇರಿಸಲಿ'

ಎಡಿಜಿಪಿಗೆ ಪತ್ರ ಬರೆದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ‌. ಉತ್ತರ ಪ್ರದೇಶ ಅಥವಾ ಯಾವುದೇ ಮಾದರಿ ಬರಲು ರಾಜ್ಯದಲ್ಲಿ ಕಾನೂನು ತರಬೇಕು. ರಾಜಕಾರಣಿಗಳು ಬಾಯಲ್ಲಿ ಹೇಳಿದ್ದನ್ನ ಅಧಿಕಾರಿಗಳು ತರಲು ಆಗಲ್ಲ. ರಾಜ್ಯ ಸರ್ಕಾರಕ್ಕೆ ನೈಜ ಬದ್ದತೆ ಇದ್ದರೆ ಒಂದು ಕಾನೂನು ತರಲಿ. ಕೋಮು ಗಲಭೆ ನಿಯಂತ್ರಣ ಕಾಯ್ದೆ ರಾಜ್ಯದಲ್ಲಿ ಜಾರಿಗೆ ‌ತರಲಿ. ಆ ಕಾನೂನು ತಂದು ಆಸ್ತಿ ಮುಟ್ಟುಗೋಲು, ಬುಲ್ಡೋಜರ್ ಎಲ್ಲವನ್ನೂ ಸೇರಿಸಲಿ. ಆ ಕಾನೂನು ತಂದು ಅದನ್ನ ಅಸೆಂಬ್ಲಿಯಲ್ಲಿ ಮಂಡನೆ ಮಾಡಲಿ. ಅಸೆಂಬ್ಲಿ ಕೂಡ ಬೇಡ, ಹಿಂದೆ ತಂದಂತೆ ಆಧ್ಯಾದೇಶ ಮಾಡಿ ತರಲಿ. ಆಗ ಮಾತ್ರ ಅಧಿಕಾರಿಗಳಿಗೆ ಆ ಕಾನೂನಿನ ಜಾರಿಗೆ‌ ತರಲು ಆಗುತ್ತದೆ. ಕಾನೂನು ತರದೇ ಅಧಿಕಾರಿಗಳಿಗೆ ಜನರು ಬೈಯ್ಯುವ ಹಾಗೆ ಮಾಡಬೇಡಿ. ಜಿಲ್ಲೆಯ ಮೂರು ಹತ್ಯೆ ‌ಕೇಸ್ ನ್ಯಾಯಕ್ಕೆ ತ್ವರಿತ ಕೋರ್ಟ್ ಸ್ಥಾಪಿಸಲಿ. ಜಿಲ್ಲೆಯ ಮೂರು ಕೇಸ್ ಆರೋಪಿಗಳ ಪತ್ತೆ ಮತ್ತು ಕ್ರಮದ ಬಗ್ಗೆ ಶ್ಲಾಘಿಸ್ತೇನೆ.‌ ಕೃತ್ಯಗಳು ಆದಾಗ ರಾಜಕೀಯ ನಾಯಕರು‌ ಒಂದೊಂದು ಹೇಳಿಕೆ ಕೊಡೋದು ಸಹಜ. ಆದರೆ ಪೊಲೀಸರು ಕೂಡ ಅಂಥದ್ದೇ ಹೇಳಿಕೆ ನೀಡೋದು ಸರಿಯಲ್ಲ ಅಂತ ತಿಳಿಸಿದ್ದಾರೆ. 

UT Khader Letter to ADGP Alok Kumar on Fazil and Masood Murder Case grg

ಪಾಟೀಲ್‌ ಆತ್ಮ​ಹತ್ಯೆ ತನಿಖೆ, ಮಹಿ​ಳೆ​ಯ​ರಿಗೆ ದ್ರೋಹ: ಯು.ಟಿ. ಖಾದ​ರ್‌

ಆಸ್ತಿ ಮುಟ್ಟುಗೋಲು ಅಂಥ ಒಂದೇ ಕೇಸಿಗೆ ಸೀಮಿತ‌ ಮಾಡ್ತಾ ಇದಾರೆ.‌ ಉನ್ನತ ಮಟ್ಟದ ಅಧಿಕಾರಿಗಳು ಕೋಮು ಹತ್ಯೆಯನ್ನು ಸಮಾನವಾಗಿ ನೋಡಬೇಕು. ಒಂದೇ ಕೇಸ್‌ನಲ್ಲಿ ಆಸ್ತಿ ಮುಟ್ಟುಗೋಲು ಅಂತ ಹೇಳಿ, ಉಳಿದ ಕೇಸಲ್ಲಿ ಮೌನ ಇದಾರೆ. ಹೀಗಾಗಿ ಶಾಸಕನಾಗಿ ನಾನು ಅವರಲ್ಲಿ ಲಿಖಿತ ಸ್ಪಷ್ಟನೆ ಕೇಳಿದ್ದೇನೆ ಅಂತ ಹೇಳಿದ್ದಾರೆ. 

ಪ್ರವೀಣ್ ‌ಹತ್ಯೆ ಆರೋಪಿಗಳ ‌ಆಸ್ತಿ ಮುಟ್ಟುಗೋಲು ಸ್ವಾಗತಿಸ್ತೇನೆ. ಅದೇ ರೀತಿ ಕೋಮುದ್ವೇಷದಿಂದ ಹತ್ಯೆಯಾದ ಫಾಝಿಲ್ ಕೇಸ್ ನಲ್ಲೂ ಇದು ಅನ್ವಯವಾಗಲಿ. ಎಲ್ಲಾ ಆರೋಪಿಗಳಿಗೂ ಭಯ ಬರಬೇಕು, ಯಾರಿಗೂ ಮುಂದೆ ಧೈರ್ಯ ಬರಬಾರದು. ಜನರಿಗೆ ಸಂಶಯ ಬರುವ ರೀತಿ ಇಲಾಖೆ ನಡೆದುಕೊಳ್ಳಬಾರದು. ಯಾವ ಆಧಾರದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ‌ ಅನ್ನೋದನ್ನ ತಿಳಿಸಲಿ. ಸಿಎಂ ಮತ್ತು ಗೃಹ ಸಚಿವರು ರಾಜಕೀಯ ಪ್ರೇರಿತ ಹೇಳಿಕೆ ನೀಡಬಹುದು. ಆದರೆ ಪೊಲೀಸ್ ಅಧಿಕಾರಿಗಳು ನ್ಯಾಯಯುತ ಕ್ರಮ ತೆಗೆದುಕೊಳ್ಳಲಿ ಅಂತ ಆಗ್ರಹಿಸಿದ್ದಾರೆ. 
 

Latest Videos
Follow Us:
Download App:
  • android
  • ios