ಕಾರವಾರ: ಕಣ್ಮರೆ ಆಗುತ್ತಿರುವ ಮಾವಿನಕುರ್ವೆ ಬೀಗದ ಕೈ

ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜತೆಗೆ ನಂಬಿಕೆಯ ವಸ್ತುವಾಗಿದ್ದ ಮಾವಿನಕುರ್ವೆ ಬೀಗ ಎಂದೇ ಇಂದಿಗೂ ಪ್ರಸಿದ್ಧಿ ಉಳಿಸಿಕೊಂಡಿರುವ ಬೀಗ ಆಧುನಿಕ ಕಾಲಘಟ್ಟದಲ್ಲಿನ ವಿಭಿನ್ನ ಮಾದರಿಯ ಬೀಗಗಳ ಎದುರು ಸ್ಥಾನ ಗಿಟ್ಟಿಸಿಕೊಳ್ಳಲಾಗದೇ ಇತಿಹಾಸ ಪುಟ ಸೇರುವಂತಾಗಿದೆ.

The disappearing Mavinakurve lock in honnavar at uttara kannada rav

ಹೊನ್ನಾವರ (ಆ.7) :  ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜತೆಗೆ ನಂಬಿಕೆಯ ವಸ್ತುವಾಗಿದ್ದ ಮಾವಿನಕುರ್ವೆ ಬೀಗ ಎಂದೇ ಇಂದಿಗೂ ಪ್ರಸಿದ್ಧಿ ಉಳಿಸಿಕೊಂಡಿರುವ ಬೀಗ ಆಧುನಿಕ ಕಾಲಘಟ್ಟದಲ್ಲಿನ ವಿಭಿನ್ನ ಮಾದರಿಯ ಬೀಗಗಳ ಎದುರು ಸ್ಥಾನ ಗಿಟ್ಟಿಸಿಕೊಳ್ಳಲಾಗದೇ ಇತಿಹಾಸ ಪುಟ ಸೇರುವಂತಾಗಿದೆ.

ಪ್ರತಿ ಊರು ಒಂದಿಲ್ಲೊಂದು ವಿಶೇಷತೆಯ ಕಾರಣದಿಂದ ಪ್ರಸಿದ್ಧಿ ಪಡೆದುಕೊಂಡಿರುತ್ತದೆ. ಧಾರ್ಮಿಕ, ಬೇಸಾಯ, ಕೃಷಿ, ಕಲೆ, ಸಾಹಿತ್ಯ, ಕುಶಲಕರ್ಮಿ, ತಿಂಡಿ ತಿನಿಸು, ಕಲಾಕೃತಿ ಹೀಗೆ ವಿವಿಧ ಕಾರಣದಿಂದ ವಿಭಿನ್ನವಾಗಿ ಗುರುತಿಸಿಕೊಂಡಿರುತ್ತದೆ. ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ಕುಲಕಸುಬು ಹೊಂದಿದವರು ತಯಾರಿ ಮಾಡುತ್ತಿದ್ದ ಅತ್ಯಂತ ಗುಣಮಟ್ಟದ ಕೆಲವೊಂದು ಸಾಧನ ಇಂದು ಪ್ರಚಾರ ಹಾಗೂ ಬೇಡಿಕೆಯ ಕೊರತೆಯಿಂದ ಮರೆಯಾಗುತ್ತಿದೆ.

ಅಯೋಧ್ಯೆ ರಾಮ ಮಂದಿರಕ್ಕೆ 400 ಕೇಜಿ ತೂಕದ ಬೀಗ ಉಡುಗೊರೆ ಕೊಟ್ಟ ಭಕ್ತ

ಒಂದು ಕಾಲದಲ್ಲಿ ಯಾವುದೇ ವಿಶೇಷ ಯಂತ್ರ ಸಾಧನಗಳ ಅವಲಂಬನೆ ಇಲ್ಲದೇ ಕೈಯಿಂದಲೇ ತಯಾರಿಸಿದ ಮಾವಿನಕುರ್ವೆ ಬೀಗ ಎಲ್ಲರ ಗಮನ ಸೆಳೆದಿತ್ತು. ಗಜಗಾತ್ರದ ಬೀಗ, ಚಿಕ್ಕಬೀಗ ಹೀಗೆ ವಿವಿಧ ಆಕೃತಿಯ ಬೀಗಗಳು ಎಲ್ಲರ ಮನೆಯಲ್ಲೂ ಬಳಕೆಯಾಗುತ್ತಿತ್ತು. ಅವಶ್ಯಕತೆಗೆ ತಕ್ಕಂತೆ 1-5 ಲಿವರ್‌ಗಳ ಬೀಗ ತಯಾರಿಕೆಯಲ್ಲಿ ಇಲ್ಲಿಯ ಜನರು ಪರಿಣತರಾಗಿದ್ದರು. ಬೀಗದೊಳಗೆ ಬೀಗ, ಹಲವು ಬಾರಿ ತಿರುಗಿಸಿದರೆ, ಎಡಬಲಕ್ಕೆ ನಿರ್ದಿಷ್ಟಸುತ್ತು ತಿರುಗಿಸಿದರೆ ತೆರೆದುಕೊಳ್ಳುವ ಬೀಗ... ಹೀಗೆ ಹಲವು ವೈಶಿಷ್ಟ್ಯಗಳ ಬೀಗ ತಯಾರಾಗುತ್ತಿದ್ದವು. ‘ಮನೆಗೆ ಮಾವಿನಕುರ್ವೆ ಬೀಗ ಹಾಕಿದ್ದೇನೆ, ಯಾವ ಕಳ್ಳನಿಂದಲೂ ಮುರಿಯಲು ಸಾಧ್ಯವಿಲ್ಲ’ ಎಂದು ಹೆಮ್ಮೆಯಿಂದ, ನಂಬಿಕೆಯಿಂದ ಹೇಳಿಕೊಳ್ಳುವಷ್ಟರ ಮಟ್ಟಿಗೆ ಜನಮನದಲ್ಲಿ ಸ್ಥಾನ ಪಡೆದಿತ್ತು. ಅಷ್ಟೊಂದು ವ್ಯವಸ್ಥಿತವಾಗಿ, ಶಕ್ತಿಯುತವಾದ ಬೀಗಗಳು ಇಲ್ಲಿ ತಯಾರಾಗುತ್ತಿದ್ದವು.

ಕೆಲವೇ ವರ್ಷಗಳಲ್ಲಿ ವಿಶ್ವ ನಕ್ಷೆಯಿಂದ ಕಣ್ಮರೆಯಾಗಲಿವೆ ಈ ತಾಣಗಳು… ಭಾರತವೂ ಈ ಲಿಸ್ಟಲ್ಲಿದೆ

ಕಬ್ಬಿಣದ ತಗಡು ತಂದು, ಅವುಗಳನ್ನು ಕತ್ತರಿಸಿ, ಒಳಗಡೆ ದಪ್ಪ ತಗಡಿನ ಸ್ಟ್ರಿಂಗ್‌ನಂತಹ ತಗಡು ಕೂರಿಸಿ, ಅದರ ಅಳತೆಯಂತೆ ಚಾವಿ ತಯಾರಿಸಿ ಹೊರಗಡೆ ಬೆಸೆಯುವುದು ಶ್ರಮದಾಯಕ ಕೆಲಸವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಾವಿನಕುರ್ವೆ ವಿಶ್ವಕರ್ಮರು ಒಬ್ಬೊಬ್ಬರಾಗಿ ಬೇರೆ ವೃತ್ತಿ ಆಯ್ದುಕೊಂಡರು. ಆದರೂ ಕೆಲವರು ಬೀಗ ತಯಾರಿಕೆ ಮುಂದುವರಿಸಿದ್ದಾರೆ. ಅವರಿಗೆ ಸರ್ಕಾರದ ಸಹಾಯಧನ, ಕಡಿಮೆ ಬಡ್ಡಿಯಲ್ಲಿ ಆಧುನಿಕ ಉಪಕರಣಗಳನ್ನು ಕೊಡಿಸುವವರಿಲ್ಲ. ಬೇರೆ ಕೆಲಸ ಮಾಡುತ್ತ ಬಿಡುವಿನಲ್ಲಿ ಮಾವಿನಕುರ್ವೆ ಚಾವಿಯ ಪರಂಪರೆಯನ್ನು ಉಳಿಸಿದ್ದಾರೆ. ಇಂತಹ ಅಪರೂಪದ ಕಸಬುಗಳಿಗೆ, ತಯಾರಾಗುವ ವಸ್ತುಗಳಿಗೆ ಸೂಕ್ತವಾದ ಮಾರುಕಟ್ಟೆಯು ಒದಗಿ ಬಂದಲ್ಲಿ ‘ಒಲ್ಡ್‌ ಇಸ್‌ ಗೊಲ್ಡ…’ ಎಂದು ಇನ್ನಷ್ಟೂಜನಪ್ರಿಯತೆಗೆ ಕಾರಣವಾಗಬಲ್ಲದು.

Latest Videos
Follow Us:
Download App:
  • android
  • ios