ಯೋಗೇಶಗೌಡ ಗೌಡ ಹತ್ಯೆ ಪ್ರಕರಣ: ಮತ್ತಷ್ಟು ಕೈ ಮುಖಂಡರಿಗೆ ಬಂಧನ ಭೀತಿ!
2016ರಲ್ಲಿ ನಡೆದಿದ್ದ ಯೋಗೇಶಗೌಡ ಹತ್ಯೆ ಪ್ರಕರಣ| ನಾಗರಾಜ ಗೌರಿ ಸೇರಿ ಹಲವರ ವಿಚಾರಣೆ ನಡೆದಿತ್ತು| ಅವರಲ್ಲೀಗ ತಾವೆಲ್ಲಿ ಅರೆಸ್ಟ್ ಆಗ್ತೇವೆ ಎಂಬ ಭಯ ಶುರು| ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಬರೋಬ್ಬರಿ 590 ಜನರನ್ನು ವಿಚಾರಣೆಗೊಳಪಡಿಸಿದ ಸಿಬಿಐ|
ಹುಬ್ಬಳ್ಳಿ(ನ.06): ಜಿಪಂ ಸದಸ್ಯ ಯೋಗೇಶಗೌಡ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ತಂಡ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದಂತೆ ಇತ್ತ ಪ್ರಕರಣದ ವಿಚಾರಣೆ ಎದುರಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳಲ್ಲಿ ತಾವೂ ಅರೆಸ್ಟ್ ಆಗುವ ಭೀತಿ ಎದುರಾಗಿದೆ.
ಹೌದು! 2016ರಲ್ಲಿ ನಡೆದಿದ್ದ ಯೋಗೇಶಗೌಡ ಹತ್ಯೆ ಪ್ರಕರಣ ಬರೀ ವಿನಯ ಕುಲಕರ್ಣಿ ಅವರಿಗಷ್ಟೇ ಅಲ್ಲ. ಆಗ ಸಂಧಾನಕ್ಕೆ ಯತ್ನಿಸಿದ, ಸಹಕಾರ ನೀಡಿದ ಎಲ್ಲ ಮುಖಂಡರಿಗೂ ಉರುಳಾಗಿ ಪರಿಣಮಿಸಿದಂತಾಗಿದೆ ಈ ಪ್ರಕರಣ.
ವಿನಯ್ ಕುಲಕರ್ಣಿ ಅರೆಸ್ಟ್: ಯೋಗೇಶ್ ಗೌಡ ಸ್ನೇಹಿತ ಬಿಚ್ಚಿಟ್ಟ ಷಡ್ಯಂತ್ರ
ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಬರೋಬ್ಬರಿ 590 ಜನರನ್ನು ಸಿಬಿಐ ವಿಚಾರಣೆಗೊಳಪಡಿಸಿದೆ. ಅದರಲ್ಲಿ ಮುಖ್ಯವಾಗಿ ವಿನಯ್ ಆಪ್ತರಾಗಿರುವ ಕಾಂಗ್ರೆಸ್ ಮುಖಂಡರಾದ ನಾಗರಾಜ ಗೌರಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ತುಳಜಪ್ಪ ಸುಲ್ಪಿ, ಚೆನ್ನಕೇಶವ ಟಿಂಗರೀಕರ ಸೇರಿದಂತೆ ಹಲವು ಮುಖಂಡರು, ಪೊಲೀಸ್ ಅಧಿಕಾರಿಗಳು ವಿಚಾರಣೆ ಎದುರಿಸಿದ್ದಾರೆ. ಇದೀಗ ಈ ಎಲ್ಲರಿಗೂ ಬಂಧನ ಭೀತಿ ಎದುರಾಗಿದೆ. ಯಾರಾರಯರನ್ನು ಬಂಧಿಸುತ್ತದೆಯೋ? ಈ ಪ್ರಕರಣ ಮತ್ತೆಲ್ಲಿಗೆ ಹೋಗುತ್ತದೆಯೋ ಎಂಬ ಆತಂಕ ಕೈಮುಖಂಡರಲ್ಲಿ ಶುರುವಾಗಿದೆ.