52 ವರ್ಷದ ಅರ್ಚಕನಿಂದ ಅಪ್ರಾಪ್ತೆಯ ರೇಪ್ : 14ವರ್ಷ ಕಠಿಣ ಶಿಕ್ಷೆ

52 ವರ್ಷದ ಅರ್ಚಕ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. 

Shivamogga Minor Rape Case 14 Year Jail For Priest snr

ಶಿವಮೊಗ್ಗ​ (ಅ.08): ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ 14 ವರ್ಷ ಕಠಿಣ ಶಿಕ್ಷೆ ಮತ್ತು 25 ರು. ದಂಡ ವಿಧಿಸಿ ತೀರ್ಪು ನೀಡಿದೆ.

ದೇವಸ್ಥಾನವೊಂದರ ಅರ್ಚಕನಾಗಿದ್ದ ಕುಮಾರ್‌ ಆಲಿಯಾಸ್‌ ಶಿವಕುಮಾರ್‌ ಶಿಕ್ಷೆಗೆ ಒಳಗಾದ ವ್ಯಕ್ತಿ. 2016ರಲ್ಲಿ 52 ವರ್ಷದ ಶಿವಕುಮಾರ್‌ ದೇವಸ್ಥಾನಕ್ಕೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರ ನಡೆಸಿದ್ದ ಎಂದು ದೂರು ಸಲ್ಲಿಕೆಯಾಗಿತ್ತು. 

ಪ್ರತಿ ಕೊಲೆಯ ನಂತರವೂ ಆಡಿನ ಬಲಿ ಕೊಡುತ್ತಿದ್ದ ಈ ನಟೋರಿಯಸ್ ಕಿಲ್ಲರ್..! .

ಈ ಬಗ್ಗೆ ಪೋಸ್ಕೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಸೆಷನ್‌ ನ್ಯಾಯಾಲಯ ಸೆ. 30 ರಂದು ಆರೋಪ ದೃಢಪಟ್ಟಕುರಿತು ತೀರ್ಪು ನೀಡಿ ಶಿಕ್ಷೆಯ ಪ್ರಮಾಣ ಕಾದಿರಿಸಿತ್ತು. ಅ. 6 ರಂದು ಆರೋಪಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿ ತೀರ್ಪು ನೀಡಿತು. ಇದರಂತೆ ಅಪರಾಧಿಗೆ 14 ವರ್ಷ ಕಠಿಣ ವಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಲಾಯಿತು. ವಿಶೇಷ ಸರ್ಕಾರಿ ಅಭಿಯಾಯೋಜಕರು ಕೆ. ಎಸ್‌. ಸತೀಶ್‌ ಸರ್ಕಾರದ ಪರ ವಾದ ಮಂಡಿಸಿದ್ದರು.

Latest Videos
Follow Us:
Download App:
  • android
  • ios