ಮದುವೆಯಾಗಿ ಗಂಡನೂ ಇದ್ದಾನೆ, ಲಿವ್‌-ಇನ್ ಸಂಬಂಧವೂ ಇದೆ ಗಂಡನಿಂದ ರಕ್ಷಣೆ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಲಕ್ನೋ(ಆ.07): ಮದುವೆಯಾಗಿ ಗಂಡನ ಜೊತೆ ಸಂಸಾರ ಮಾಡುತ್ತಲೇ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯೊಬ್ಬರು ಗಂಡನಿಂದ ರಕ್ಷಣೆ ಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯ ಕೇಳಿ ಬಂದ ಮಹಿಳೆಯ ಸಮಸ್ಯೆ ಕೋರ್ಟ್ ಪರಿಹರಿಸಿದ್ದು ಹೇಗೆ ? ಕೋರ್ಟ್ ಹೇಳಿದ್ದೇನು ? ಅಹಲಾಬಾದ್‌ನಲ್ಲಿ ನಡೆದ ಘಟನೆ ಇದು.

ವಿವಾಹಿತ ಮಹಿಳೆಯೊಬ್ಬರು ತನ್ನ ಸಂಗಾತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ಉಳಿದುಕೊಂಡು ರಕ್ಷಣೆ ಬೇಕೆಂದು ಅರ್ಜಿ ಕೋರಿದ್ದು ಈ ರಕ್ಷಣೆಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಈ ದೇಶದ ಸಾಮಾಜಿಕ ರಚನೆಯನ್ನೂ ಮೀರಿ ಲೈವ್-ಇನ್-ರಿಲೇಶನ್‌ಶಿಪ್ ಇರಬಾರದು ಎನ್ನುವ ವಿಚಾರವನ್ನು ಎತ್ತಿಹಿಡಿದಿದೆ.

ಆಕೆಯ ಪಾರ್ಟ್‌ನರ್ ಜೊತೆ ಆಕೆಯ ಲೈವ್-ಇನ್ ಸಂಬಂಧವನ್ನು ನ್ಯಾಯಮೂರ್ತಿಗಳಾದ ಡಾ.ಕೌಶಾಲ್ ಜಯೇಂದ್ರ ಠಾಕರ್ ಮತ್ತು ಸುಭಾಷ್ ಚಂದ್ರ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿದೆ. ಅವರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡುವುದು ಪರೋಕ್ಷವಾಗಿ ಇಂತಹ ಅಕ್ರಮ ಸಂಬಂಧಗಳಿಗೆ ನಮ್ಮ ಸಮ್ಮತಿ ನೀಡಿದಂತಾಗುತ್ತದೆ ಎಂದು ಕೋರ್ಟ್ ಹೇಳಿದೆ.

ವೈದ್ಯೆ ಪತ್ನಿ ಸುಸೈಡ್‌ಗೆ ಕಾರಣವಾಗಿದ್ದ ಗಂಡ ಸರ್ಕಾರಿ ಕೆಲಸದಿಂದ ವಜಾ

ನ್ಯಾಯಾಲಯವು ಇತ್ತೀಚೆಗೆ ನೀಡಿದ ಆದೇಶದಲ್ಲಿ, ಈ ಪೀಠವು ಲೈವ್-ಇನ್-ರಿಲೇಶನ್‌ಶಿಪ್ ವಿರುದ್ಧವಲ್ಲ, ಆದರೆ ಅಕ್ರಮ ಸಂಬಂಧಗಳ ವಿರುದ್ಧ ಎಂದು ನಾವು ಸ್ಪಷ್ಟಪಡಿಸುತ್ತೇವೆ. 5,000 ರೂ.ಗಳ ದಂಡದ ವೆಚ್ಚದೊಂದಿಗೆ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿತು.

ವಿವಾಹಿತ ಮಹಿಳೆ ಲಿವ್-ಇನ್ ಸಂಗಾತಿಯೊಂದಿಗೆ ವಾಸಿಸುತ್ತಿದ್ದ ಕಾರಣ ತನ್ನ ಭದ್ರತೆ ಕೋರಿ ಅರ್ಜಿ ಸಲ್ಲಿಸಿದ್ದರು. ಮಹಿಳೆ ತಾನು ಅರ್ಜಿದಾರ ಲಿವ್ ಇನ್ ಸಂಗಾತಿಯನ್ನು ಮದುವೆಯಾಗಿಲ್ಲ, ಆದರೆ ಪತಿಯ ನಿರಾಸಕ್ತಿ ಮತ್ತು ಹಿಂಸೆಯ ನಡವಳಿಕೆಯಿಂದಾಗಿ ಆತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದಿದ್ದಾರೆ. ಮಹಿಳೆ ಆತನೊಂದಿಗೆ ವಾಸಿಸುತ್ತಿದ್ದಾಗಿನಿಂದ ಪತಿ ಅವರ ಶಾಂತಿಯುತ ಜೀವನಕ್ಕೆ ಅಪಾಯವನ್ನುಂಟುಮಾಡಲು ಪ್ರಯತ್ನಿಸುತ್ತಿದ್ದಾನೆ. ಅವರಿಗೆ ರಕ್ಷಣೆ ಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಅರ್ಜಿದಾರರು ತಮ್ಮನ್ನು ಯಾವುದೇ ರೀತಿಯಲ್ಲಿ ಸ್ಥಳೀಯ ಪೊಲೀಸರು ಅಥವಾ ಪತಿ ಅಥವಾ ಆತನ ಸಹಚರರು ಯಾವುದೇ ರೀತಿಯಲ್ಲಿ ಕಿರುಕುಳ ನೀಡದಂತೆ ನಿರ್ದೇಶನದಲ್ಲಿ ಕೋರಿದ್ದರು.

ಟಾಪ್ ನಟಿಯ ಮನೆಯಲ್ಲಿ ಸಿಕ್ತು ಡ್ರಗ್ಸ್, ಮದ್ಯ: ಅರೆಸ್ಟ್

ಅವರು ಯಾವ ಸಮುದಾಯ, ಜಾತಿಗೆ ಸೇರಿದವರಾಗಿರಲಿ ಒಟ್ಟಾಗಿ ಬದುಕಲು ಬಯಸುವ ಜನರಿಗೆ ರಕ್ಷಣೆ ನೀಡಲು ನಾವು ವಿರೋಧಿಯಲ್ಲ ಎಂದು ನ್ಯಾಯಾಲಯವು ತಿಳಿಸಿದೆ. ಆದರೆ ಹಿಂದೂ ವಿವಾಹ ಕಾಯಿದೆಯಡಿ ಈಗಾಗಲೇ ಮದುವೆಯಾದವರಿಗೆ ಲಿವ್‌ ಇನ್ ಪಾಲಿಸುವ ಈ ದೇಶದ ಸಾಮಾಜಿಕ ರಚನೆಯ ವ್ಯಾಪ್ತಿಯಲ್ಲಿಲ್ಲದ ಅಕ್ರಮ ಸಂಬಂಧಕ್ಕೆ ಈ ನ್ಯಾಯಾಲಯದ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದಿದೆ. ಪತಿಯೊಂದಿಗೆ ಏನಾದರೂ ಭಿನ್ನಾಭಿಪ್ರಾಯ ಹೊಂದಿದ್ದರೆ ಹಿಂದೂ ಕಾನೂನು ಆಕೆಗೆ ಅನ್ವಯಿಸದಿದ್ದಲ್ಲಿ ಸಮುದಾಯಕ್ಕೆ ಅನ್ವಯವಾಗುವ ಕಾನೂನಿನ ಪ್ರಕಾರ ಆಕೆ ಮೊದಲು ತನ್ನ ಸಂಗಾತಿಯಿಂದ ಬೇರೆಯಾಗಬೇಕು ಎಂದು ನ್ಯಾಯಾಲಯ ಹೇಳಿದೆ.