Asianet Suvarna News Asianet Suvarna News

ಲಸಿಕೆ ಪರಿಣಾಮದ ಬಗ್ಗೆ ಸಂಶೋಧನೆ: ಬಾಲಚಂದ್ರ

ಕಾಲು ಬಾಯಿ ಜ್ವರ ಮತ್ತು ಚರ್ಮಗಂಟು ರೋಗಕ್ಕೆ ಏಕಕಾಲಕ್ಕೆ ಲಸಿಕೆ ನೀಡಿರುವುದರಿಂದ ಜಾನುವಾರಗಳ ಮೇಲೆ ಆಗಿರುವ ಪರಿಣಾಮದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದು ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್‌.ಎಸ್‌.ಬಾಲಚಂದ್ರ ತಿಳಿಸಿದರು.

Research on vaccine effect  Balachandra snr
Author
First Published Jan 9, 2023, 5:39 AM IST

 ತುಮಕೂರು (ಜ. 09 ):  ಕಾಲು ಬಾಯಿ ಜ್ವರ ಮತ್ತು ಚರ್ಮಗಂಟು ರೋಗಕ್ಕೆ ಏಕಕಾಲಕ್ಕೆ ಲಸಿಕೆ ನೀಡಿರುವುದರಿಂದ ಜಾನುವಾರಗಳ ಮೇಲೆ ಆಗಿರುವ ಪರಿಣಾಮದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದು ಪಶುಪಾಲನಾ ಮತ್ತು ವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್‌.ಎಸ್‌.ಬಾಲಚಂದ್ರ ತಿಳಿಸಿದರು.

ತುಮಕೂರಿನಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಈ ಸಂಬಂಧ ಪಶುವೈದ್ಯರಲ್ಲಿಯೂ ಗೊಂದಲ ನಿರ್ಮಾಣವಾಗಿದೆ. ಪಶು ವೈದ್ಯರು ಚರ್ಮಗಂಟು ರೋಗದ ಬಗ್ಗೆ ಅರಿವು ಹೊಂದಬೇಕಿದೆ. ಬಡ ರೈತರ ಹಿತವನ್ನು ಕಾಯುವ ದೃಷ್ಟಿಯಿಂದ ಪಶುವೈದ್ಯಾಧಿಕಾರಿಗಳು ಕಾರ್ಯಭಾರದ ಒತ್ತಡದ ನಡುವೆಯೂ ಅವರ ಸೇವೆಗೆ ಒತ್ತು ನೀಡಬೇಕು. ತಾಂತ್ರಿಕ ಕಾರ್ಯಾಗಾರಗಳು ಪಶು ವೈದ್ಯರಿಗೆ ಅವಶ್ಯಕವಾಗಿದ್ದು, ಇಂತಹ ಕಾರ್ಯಾಗಾರಗಳಲ್ಲಿ ಬಹುತೇಕರು ಪಾಲ್ಗೊಳ್ಳಲು ಆಗುತ್ತಿಲ್ಲ ಎಂದರೆ ಅದಕ್ಕೆ ಇರುವ ಕೆಲಸದ ಒತ್ತಡ ಕಾರಣ ಎಂದು ಹೇಳಿದರು.

ಕಳೆದ ಇಪ್ಪತ್ತು ವರ್ಷಗಳಿಂದ ಪಶು ವೈದ್ಯರಿಗೆ ಅಧಿಕ ರಜೆಯನ್ನು ಮಂಜೂರು ಮಾಡಬೇಕೆಂಬ ಬೇಡಿಕೆಗೆ ಮಾನ್ಯತೆ ಸಿಗುತ್ತಿಲ್ಲ. ನಮ್ಮ ಸಂಘದ ಪದಾಧಿಕಾರಿಗಳಾಗುವವರು ವೈದ್ಯರ ಸಮಸ್ಯೆಗೆ ಸ್ಪಂದಿಸಬೇಕೆಂದು ಕರೆ ನೀಡಿದರು. 365 ದಿನಗಳು ಕೆಲಸ ಮಾಡುವ ಪಶುವೈದ್ಯಾಧಿಕಾರಿಗಳಿದ್ದರೂ, ನಮ್ಮ ಇಲಾಖೆ ಇನ್ನು ಡಿಜಿಟಲೀಕರಣಗೊಳ್ಳುತ್ತಿಲ್ಲ. ಸಿಬ್ಬಂದಿ ಕೊರತೆ ನಡೆಯೂ ವೃತ್ತಿಪರವಾಗಿ ಕೆಲಸ ಮಾಡುತ್ತಿದ್ದು, ಪಶುವೈದ್ಯಾಧಿಕಾರಿಗಳು ಬಡವರ ಸೇವೆಯನ್ನು ಮಾಡಿದಷ್ಟುಆತ್ಮತೃಪ್ತಿ ದೊರೆಯುತ್ತದೆ. ಎಲ್ಲ ಸೌಲಭ್ಯಗಳು ಬಡ ರೈತರ ಬದಲಿಗೆ ಉಳ್ಳವರು, ಬಲಾಢ್ಯ ರೈತರ ಪಾಲಾಗುವ ವಾತಾವರಣ ನಿರ್ಮಾಣವಾಗಿದ್ದು, ಬಡವರ ಸೇವೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಬಡರೈತರು, ಜಾನುವಾರು ಸಾಗಾಣಿಕೆದಾರರು ಫುಡ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಆರ್ಥಿಕ ಸಬಲತೆ ಸಾಧ್ಯವಾಗುತ್ತದೆ. ನರೇಗಾ ಯೋಜನೆಯಡಿ ಸಿಗುವ ಯೋಜನೆಗಳನ್ನು ರೈತರಿಗೆ ತಲುಪಿಸಬೇಕೆಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವೈ.ಜಿ.ಕಾಂತರಾಜು, ಹಿರಿಯ ಪಶು ವೈದ್ಯಾಧಿಕಾರಿ ಡಾ.ಮಂಜುನಾಥ್‌ ಎಸ್‌.ಪಿ, ಡಾ.ನಿಖಿತ್‌.ಎಂ.ಎಸ್‌, ಉಪಾಧ್ಯಕ್ಷ ಡಾ.ಜಿ.ಗಿರೀಶ್‌ ಬಾಬು ರೆಡ್ಡಿ, ಪ್ರಧಾನ ಕಾರ್ಯದರ್ಶಿ ಡಾ.ಪುರುಷೋತ್ತಮ್‌ ಎಸ್‌.ಬಿ, ಜಂಟಿ ಕಾರ್ಯದರ್ಶಿ ಡಾ.ಮಂಜುನಾಥ್‌.ಜೆ, ಡಾ.ವಿನೋದ್‌ ಕುಮಾರ್‌.ವಿ, ಡಾ.ಎಚ್‌.ಶಶಿಕಲಾ ಸೇರಿದಂತೆ ವಿವಿಧ ತಾಲ್ಲೂಕಿಗಳಿಂದ ಆಗಮಿಸಿದ್ದ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಪಶು ವೈದ್ಯಾಧಿಕಾರಿಗಳಿಗೆ ಬೇಕಿರುವ ತಾಂತ್ರಿಕ ಪರಿಣಿತಿಯನ್ನು ಹೊಂದಬೇಕಿದೆ. ಚರ್ಮಗಂಟು ರೋಗದಿಂದ ಇಲಾಖೆ ಮೇಲೆ ಒತ್ತಡವುಂಟಾಗಿದ್ದು, ರೈತರಿಗೆ ಅನುಕೂಲವಾಗಲು ಕಾರ್ಯಾಗಾರ ನಡೆಸಲಾಗುತ್ತಿದ್ದು, ಸಂಪೂರ್ಣವಾಗಿ ಮನನ ಮಾಡಿಕೊಂಡು, ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ 15000 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, 937 ರಾಸುಗಳು ಸಾವನ್ನಪ್ಪಿವೆ, ಸಾವನ್ನಪ್ಪಿರುವ ರಾಸುಗಳ ರೈತರಿಗೆ ಸರ್ಕಾರ ನೀಡಿರುವ ಪರಿಹಾರವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುವುದು.

ಡಾ.ಜಿ.ವಿ.ಜಯಣ್ಣ ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ

ಹಸುವಿನ ತುಪ್ಪದಿಂದ ಭಾರಿ ಪ್ರಭಾವ

ಶುದ್ಧ ಹಸುವಿನ ತುಪ್ಪ ಭಾರತೀಯ ಅಡುಗೆ ಮನೆಯಲ್ಲಿ ಪ್ರಮುಖ ಜಾಗ ಪಡೆದಿರುತ್ತದೆ. ಶುದ್ಧ ಹಸುವಿನ ತುಪ್ಪವನ್ನು ಜನರು ಅನೇಕ ಅಡುಗೆಗೆ ಬಳಕೆ ಮಾಡ್ತಾರೆ. ಆದ್ರೆ ಈ ಶುದ್ಧ ಹಸುವಿನ ತುಪ್ಪ ಶೀತ, ಕಟ್ಟಿದ ಮೂಗು ಸೇರಿದಂತೆ ಅನೇಕ ಸಮಸ್ಯೆ ಔಷಧಿ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಸುವಿನ ತುಪ್ಪದ ಕೆಲ ಹನಿಯನ್ನು ಮೂಗಿಗೆ ಬಿಡುವುದ್ರಿಂದ ಅನೇಕ ರೋಗಗಳಿಂದ ನಾವು ಮುಕ್ತಿ ಪಡೆಯಬಹುದು. ನಾವಿಂದು ಹಸುವಿನ ತುಪ್ಪವನ್ನು ಮೂಗಿಗೆ ಬಿಡುವುದು ಹೇಗೆ ಮತ್ತು ಅದ್ರಿಂದ ಯಾವೆಲ್ಲ ರೋಗ ವಾಸಿಯಾಗುತ್ತೆ ಎಂಬುದನ್ನು ಹೇಳ್ತೆವೆ.

ಹಸು (Cow) ವಿನ ತುಪ್ಪ (Ghee) ವನ್ನು ಮೂಗಿ (Nose) ಗೆ ಬಿಡುವ ವಿಧಾನ : ತುಪ್ಪವನ್ನು ಮೂಗಿಗೆ ಬಿಡುವ ಚಿಕಿತ್ಸೆಯನ್ನು ನಾಸ್ಯ ಎಂದು ಕರೆಯಲಾಗುತ್ತದೆ. ಆಯುರ್ವೇದ (Ayurveda) ದಲ್ಲಿ ಈ ಚಿಕಿತ್ಸೆ ಹೆಚ್ಚು ಮಹತ್ವ ಪಡೆದಿದೆ. ದೇಹದಿಂದ ಅನೇಕ ಸೋಂಕುಗಳನ್ನು ದೂರವಿಡುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ. 

ಹಸುವಿನ ತುಪ್ಪದ ಎರಡು ಹನಿಗಳನ್ನು ಬೆಳಿಗ್ಗೆ ಅಥವಾ ರಾತ್ರಿ ಮೂಗಿಗೆ ಹಾಕುವುದು ಪ್ರಯೋಜನಕಾರಿ. ತುಪ್ಪ ದ್ರವರೂಪದಲ್ಲಿರಲಿ. ಹಾಗೆಯೇ ಉಗುರು ಬೆಚ್ಚಗಿರಲಿ. ಹತ್ತಿ ಅಥವಾ ಡ್ರಾಪ್ಪರ್ ಇಲ್ಲವೆ ಬೆರಳಿನ ಸಹಾಯದಿಂದ ನೀವು ತುಪ್ಪವನ್ನು ಮೂಗಿನೊಳಗೆ ಸೇರಿಸಬೇಕು. ತಲೆಯನ್ನು ಮೇಲ್ಮುಖವಾಗಿಟ್ಟುಕೊಂಡು ತುಪ್ಪವನ್ನು ಹಾಕಿ. ತುಪ್ಪ ಹಾಕಿದ 15 ನಿಮಿಷ ಹಾಗೆಯೇ ಬಿಡಿ. ತುಪ್ಪ ಮೆದುಳಿಗೆ ಹೋಗಬೇಕು. ನೀವು ಮಲಗಿಕೊಂಡು ತುಪ್ಪ ಹಾಕಿಕೊಳ್ಳುವುದು ಉತ್ತಮ. ತುಪ್ಪವನ್ನು ಏಕೆ ಮೂಗಿಗೆ ಹಾಕಬೇಕೆಂದ್ರೆ, ನೀವು ಮೂಗಿನ ಹೊಳ್ಳೆಗಳಿಗೆ ತುಪ್ಪವನ್ನು ಹಾಕಿದಾಗ ಅದು ಮೊದಲು ನಿಮ್ಮ ಮೆದುಳಿಗೆ ಹೋಗುತ್ತದೆ. ನಂತರ ಕಣ್ಣುಗಳಿಗೆ, ನಂತರ ಕಿವಿಗೆ ಹೋಗುತ್ತದೆ. ಇದ್ರಿಂದ ಕಟ್ಟಿದ ಮೂಗಿನ ಸಮಸ್ಯೆ ಕಡಿಮೆಯಾಗುತ್ತದೆ.

Follow Us:
Download App:
  • android
  • ios