ಪಸಲ್ ಬಿಮಾ ಯೋಜನೆಯಡಿ ಬೆಳೆಗಳ ನೋಂದಾಯಿಸಿ
ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಪಸಲ್ ಬಿಮಾ ಯೋಜನೆಯಡಿ ಕೃಷಿ ಇಲಾಖೆಯ 2023 ಮುಂಗಾರಿನ ಬೆಳೆಗಳಿಗೆ ರೈತರು ನೋಂದಣಿ ಮಾಡಿಸಿ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ರಂಗನಾಥ್ ಹೇಳಿದರು. ಅಲಸಂದೆ (ಮಳೆಯಾಶ್ರೀತ), ನೆಲಗಡಲೆ (ಶೇಂಗಾ) (ನೀರಾವರಿ), ಕೆಂಪು ಮೆಣಸಿನಕಾಯಿ (ನೀರಾವರಿ), ಕೆಂಪುಮೆಣಸಿನಕಾಯಿ (ಮಳೆಯಾಶ್ರಿತ), ಟೊಮೆಟೋ (ಅನಿರ್ದಿಷ್ಟ) ಜುಲೈ 15ಕ್ಕೆ ಕೊನೆಯ ದಿನ.
ಶಿರಾ: ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಪಸಲ್ ಬಿಮಾ ಯೋಜನೆಯಡಿ ಕೃಷಿ ಇಲಾಖೆಯ 2023 ಮುಂಗಾರಿನ ಬೆಳೆಗಳಿಗೆ ರೈತರು ನೋಂದಣಿ ಮಾಡಿಸಿ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ರಂಗನಾಥ್ ಹೇಳಿದರು. ಅಲಸಂದೆ (ಮಳೆಯಾಶ್ರೀತ), ನೆಲಗಡಲೆ (ಶೇಂಗಾ) (ನೀರಾವರಿ), ಕೆಂಪು ಮೆಣಸಿನಕಾಯಿ (ನೀರಾವರಿ), ಕೆಂಪುಮೆಣಸಿನಕಾಯಿ (ಮಳೆಯಾಶ್ರಿತ), ಟೊಮೆಟೋ (ಅನಿರ್ದಿಷ್ಟ) ಜುಲೈ 15ಕ್ಕೆ ಕೊನೆಯ ದಿನ.
ಮುಸುಕಿನಜೋಳ (ನೀರಾವರಿ), ಮುಸುಕಿನಜೋಳ (ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ಈರುಳ್ಳಿ (ನೀರಾವರಿ), ಈರುಳ್ಳಿ (ಮಳೆಯಾಶ್ರಿತ), ಸಜ್ಜೆ (ಮಳೆಯಾಶ್ರಿತ), ಸೂರ್ಯಕಾಂತಿ(ನೀರಾವರಿ), ಸೂಯಾಕಾಂತಿ (ಮಳೆಯಾಶ್ರಿತ) ಜುಲೈ 31 ಕೊನೆ ದಿನ. ನೆಲಗಡಲೆ (ಶೇಂಗಾ) ಮಳೆಯಾಶ್ರಿತ, ಹುರುಳಿ (ಮಳೆಯಾಶ್ರಿತ), ರಾಗಿ (ನೀರಾವರಿ), ಭತ್ತ (ನೀರಾವರಿ), ರಾಗಿ (ಮಳೆಯಾಶ್ರಿತ), ಸಾವೆ (ಮಳೆಯಾಶ್ರಿತ) ಆಗಸ್ಟ್ 18 ಕೊನೆಯ ದಿನವಾಗಿದೆ. ರೈತರು ಹತ್ತಿರ ಇರುವ ವಾಣಿಜ್ಯ, ಗ್ರಾಮೀಣ, ಸಹಕಾರ ಬ್ಯಾಂಕಿನಲ್ಲಿ ಅಥವಾ, ಸಿ.ಎಸ್.ಸಿ ಸೆಂಟರ್, ಗ್ರಾಮಾ ಓನ್, ಕರ್ನಾಟಕ ಓನ್‌ಗಳಲ್ಲಿ ನೋಂದಣಿ ಮಾಡಬಹುದು ಎಂದು ತಿಳಿಸಿದ್ದಾರೆ.
ಬೆಳೆ ವಿಮೆ ನೀಡುವಲ್ಲಿಯೂ ತಾರತಮ್ಯ
ಚಿತ್ರದುರ್ಗ (ಜು.11): ದೇಶದ ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಮ್ಮ ಕನಸಿನ ಯೋಜನೆಯಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ (Fasal Bima Yojana ) ರೈತರಿಗೆ ಬೆಳೆ ವಿಮೆ ವಿತರಿಸಲಾಗ್ತಿದೆ. ಆದ್ರೆ ಕೆಲ ಊರಿನಲ್ಲಿ ರೈತರಿಗೆ ತಲುಪಬೇಕಾದ ಬೆಳೆ ವಿಮೆ ಹಣವೇ ತಲುಪುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕ್ತಿದ್ದಾರೆ.
ಇದಕ್ಕೆ ನಿದರ್ಶನ ಎಂಬಂತೆ ಮೊದಲೇ ಬರದನಾಡು ಎಂದು ಕುಖ್ಯಾತಿ ಹಣೆಪಟ್ಟಿ ಪಡೆದಿರೋ ಚಿತ್ರದುರ್ಗ ಜಿಲ್ಲೆಯ ರೈತರು ಸೇರ್ಪಡೆ ಆಗಿದ್ದಾರೆ. ಚಳ್ಳಕೆರೆ ತಾಲೂಕಿನ N.ಮಹದೇವಪುರ ಗ್ರಾಮದ ರೈತರು ತಮ್ಮ ಬೆಳೆ ವಿಮೆ ಇನ್ಸೂರೆನ್ಸ್ ಚಾಚೂ ತಪ್ಪದೇ ಕಟ್ಟುತ್ತಿದ್ದರು ಅವರಿಗೆ ಬೆಳೆ ವಿಮೆ ಮಾತ್ರ ಸಿಕ್ಕಿಲ್ಲ. ಇಡೀ ಗ್ರಾಮದಲ್ಲಿ ಸುಮಾರು 1000ಕ್ಕೂ ಅಧಿಕ ಮಂದಿ ರೈತರು ಬೆಳೆ ವಿಮೆ ಇನ್ಸೂರೆನ್ಸ್ ಪಾವತಿ ಮಾಡ್ತಿದ್ದಾರೆ. ಇನ್ಸೂರೆನ್ಸ್ ಪಾವತಿ ಮಾಡುವುದು ತಡವಾದಲ್ಲಿ ಅಧಿಕಾರಿಗಳು ರೈತರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಳ್ತಾರೆ. ಅದೇ ಅಧಿಕಾರಿಗಳು ರೈತರಿಗೆ ಸಮಸ್ಯೆ ಆದಾಗ ಅವರ ಕಷ್ಟಕ್ಕೆ ಬೇಗನೇ ಸ್ಪಂದಿಸಲ್ಲ ಯಾಕೆ ಎಂಬುದು N.ಮಹದೇವಪುರ ಗ್ರಾಮದ ರೈತರ ಪ್ರಶ್ನೆಯಾಗಿದೆ.
ಫಸಲ್ ಬಿಮಾ ಯೋಜನೆ ಬೆಳೆ ವಿಮೆ ನೋಂದಣಿಗೆ ಜು. 31 ಕೊನೆಯ ದಿನ
ಆದರೆ ಕೆಲ ರೈತರಿಗೆ ಮಾತ್ರ ಬೆಳೆ ವಿಮೆ ಜಮಾ ಆಗಿರುವುದು ಇನ್ಸೂರೆನ್ಸ್ ಕಟ್ಟಿದ ಇನ್ನುಳಿದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಅಧಿಕಾರಿಗಳು ಸೂಕ್ತ ಮಾಹಿತಿ ಕೂಡ ನೀಡದೇ ಈ ರೀತಿ ಬೆಳೆ ವಿಮೆ ನೀಡುವಲ್ಲಿ ತಾರತಮ್ಯ ಮಾಡ್ತಿರೋದಕ್ಕೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕ್ತಿದ್ದಾರೆ. ಇದನ್ನೆಲ್ಲ ಮೆಲ್ನೋಟಕ್ಕೆ ಕಂಡ ರೈತರು ಅಧಿಕಾರಿಗಳೇ ಶಾಮೀಲಾಗಿ ನಿರ್ಲಕ್ಷ್ಯ ವಹಿಸಿರುವ ಕಾರಣ ನಮ್ಮಂತಹ ಕೆಲ ರೈತರಿಗೆ ಬೆಳೆ ವಿಮೆ ಸಿಗ್ತಿಲ್ಲ ಎಂದು ಕೃಷಿ ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಕೃಷಿ ಅಧಿಕಾರಿಗಳ ಕೆಲವರ ಮಧ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಿಂದ ನಮ್ಮ ಗ್ರಾಮದ ಸುಮಾರು ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡನೇ ಮದುವೆ ಕಾನೂನು ಬಾಹಿರವಾಗಿದ್ರೂ ಜೀವನಾಂಶ ಪಡೆಯಲು ಪತ್ನಿ, ಮಕ್ಕಳು ಅರ್ಹ:
ಹಾಗಾಗಿ ಈ ಕೂಡಲೇ ಬೆಳೆ ವಿಮೆ ತಾರತಮ್ಯಗೆ ಕಾರಣಗಳು ಏನು? ಕೃಷಿ ಅಧಿಕಾರಿಗಳ ನಡೆ ಏನು? ಎಂಬುದನ್ನೂ ಮಾನ್ಯ ಜಿಲ್ಲಾಧಿಕಾರಿಗಳೇ ಖುದ್ದು ತನಿಖೆ ನಡೆಸಿ ರೈತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕಿದೆ. ಈ ಪ್ರಕರಣ ಸಾಕಷ್ಟು ರೈತರ ಜೀವನಾಂಶಕ್ಕೆ ಕೃಷಿ ಯೋಗ್ಯವಾದುದಾಗಿದ್ದು, ಸಮಗ್ರ ತನಿಖೆ ನಡೆಸಿ ರೈತರಿಗೆ ಶೀಘ್ರವೇ ಬೆಳೆ ವಿಮೆ ವಿತರಿಸಿ ನಿರ್ಲಕ್ಷ್ಯ ತೋರಿದ ಹಾಗೂ ಒಳ ಒಪ್ಪಂದ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡರು.