ಘೋಷಿತ ಕೊಳಚೆ ಪ್ರದೇಶಗಳಿಗೆ ಮೂಲ ಸೌಲಭ್ಯ ಕಲ್ಪಿಸಿ
ಘೋಷಿತ ಕೊಳಚೆ ಪ್ರದೇಶಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ನಗರಪಾಲಿಕೆಯಿಂದ ಕಲ್ಪಿಸಿಕೊಡಲು ಆಯುಕ್ತರು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ತುಮಕೂರು: ಘೋಷಿತ ಕೊಳಚೆ ಪ್ರದೇಶಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ನಗರಪಾಲಿಕೆಯಿಂದ ಕಲ್ಪಿಸಿಕೊಡಲು ಆಯುಕ್ತರು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಲಂ ನಿವಾಸಿಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ನಗರದ ವಾರ್ಡ್ ನಂಬರ್ 34 ರ ಎಳ್ಳರಬಂಡೆ ಮತ್ತು ಸತ್ಯಮಂಗಲ ಕೊಳಚೆ ಪ್ರದೇಶಗಳು ಸೇರಿದಂತೆ ಶಿರಾ ನಗರದ ರಬ್‌ನಗರ, ಕೋಟೆ ಸ್ಲಂ, ಶಿವಾಜಿ ನಗರ ಭಾಗ-2 ಸ್ಲಂಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆ 1973ರ ಕಲಂ-3ರಡಿಯಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಸ್ಲಂ ಸಮಿತಿ ಅಧ್ಯಕ್ಷ ಎ. ನರಸಿಂಹಮೂರ್ತಿ ಮಾತನಾಡಿ ದಿಬ್ಬೂರು ದೇವರಾಜ್ ಅರಸು ಬಡಾವಣೆಯಲ್ಲಿ ವಾಸಿಸುವ ಕುಟುಂಬಗಳಿಗೆ ಹಂಚಿಕೆ ಪತ್ರಗಳನ್ನು ನೀಡಿಲ್ಲ. ಸರಿಯಾದ ಸೌಲಭ್ಯಗಳಿಲ್ಲದಿರುವುದರಿಂದ ಜನರು ಮನೆ ಖಾಲಿ ಮಾಡುತ್ತಿದ್ದಾರೆ. ಇದಕ್ಕಾಗಿ ನಗರ ಪಾಲಿಕೆ ಹಸ್ತಾಂತರ ಪಡೆದುಕೊಂಡು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ದಿಬ್ಬೂರು ದೇವರಾಜ್ ಅರಸು ಬಡಾವಣೆ, ಸ್ಲಂ ನಿವಾಸಿಗಳ ನಿರಂತರ ಹೋರಾಟದಿಂದ 17 ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಹಿಂದಿನ ಜಿಲ್ಲಾಧಿಕಾರಿಗಳು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದು ವಿಶೇಷ ಪ್ರವರ್ಗದಲ್ಲಿರುವ 400 ಒಂಟಿ ಮಹಿಳೆಯರಿಗೆ ನಿವೇಶನ ಅಥವಾ ವಸತಿ ನೀಡಲು ಭೂಮಿ ಮೀಸಲಿಡಲು ಹಿಂದಿನ ಸಭೆಯಲ್ಲಿ ತೀರ್ಮಾನವಾಗಿದೆ.
ಚುನವಾಣೆ ಮುಂಚಿತವಾಗಿ 14 ಕೊಳಚೆ ಪ್ರದೇಶಗಳಲ್ಲಿ 1350 ಕುಟುಂಬಗಳನ್ನು ಸಮೀಕ್ಷೆ ಮಾಡಿದಾಗ ಹಕ್ಕುಪತ್ರಗಳಿಲ್ಲದ 183 ಕುಟುಂಬಗಳಿಗೆ ಅರ್ಹ ಕುಟುಂಬಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಹಕ್ಕುಪತ್ರ ನೀಡಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ದರ್ಶನ್ ಅವರು ಜಿಲ್ಲಾ ಕೊಳಗೇರಿ ಸಮಿತಿ ನೀಡಿರುವ 400 ನಿವೇಶನ ರಹಿತರ ಪಟ್ಟಿಯಲ್ಲಿ 72 ಫಲಾನುಭವಿಗಳು ಡಿಮ್ಯಾಂಡ್ ಸಮೀಕ್ಷೆಯಲ್ಲಿ ನೊಂದಣಿಯಾಗಿರುತ್ತಾರೆ. ಉಳಿದ 328 ಫÜಲಾನುಭವಿಗಳನ್ನು ತಂತ್ರಾಂಶ ಲಭ್ಯವಾದ ಕೂಡಲೇ ನೊಂದಣಿ ಮಾಡಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿಕೊಡಲು ಕ್ರಮವಹಿಸಲಾಗುವುದು ಎಂದರು.
ಮಳೆಯಿಂದ ಹಾನಿಯಾಗುವ ಕೊಳಚೆ ಪ್ರದೇಶಗಳಿಗೆ ರಕ್ಷಣೆ ನೀಡುವ ಅಥವಾ ಪುನರ್ ವಸತಿಗೊಳಿಸಲು ಕ್ರಮವಹಿಸಲಾಗುವುದು. ಪ್ರಸ್ತುತ ಪಾಲಿಕೆ ಬಜೆಟ್‌ನಲ್ಲಿ ಪಿಎಂಎವೈ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವ ಫಲಾನುಭವಿಗಳಿಗೆ ಸಾಂಕೇತಿಕ ಪ್ರಮಾಣದ ಫಲಾನುಭವಿ ಶುಲ್ಕವನ್ನು ನೇರವಾಗಿ ಸ್ಲಂ ಬೋರ್ಡ್‌ಗೆ ಪಾವತಿಸಲು ಹಣ ಮೀಸಲಿಡಲಾಗುವುದು ಎಂದರು.
ಪದಾಧಿಕಾರಿಗಳಾದ ಅರುಣ್, ಮಾತನಾಡಿ ಪಿಎಂಎವೈ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವ ಸ್ಲಂ ಜನರಿಗೆ ನಗರ ಪಾಲಿಕೆಯಿಂದ ವಂತಿಕೆ ಪಾವತಿಸುವಂತೆ ಆಗ್ರಹಿಸಿದರು. ಗುಲ್ನಾಜ್ ಮತ್ತುಗಂಗಮ್ಮ ಮಾತನಾಡಿ ಎಸ್.ಎನ್ ಪಾಳ್ಯ ಹಾಗೂ ಭಾರತಿ ನಗರ ಕೊಳಚೆ ಪ್ರದೇಶಗಳಿಗೆ ಮಳೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಿ ಕೊಡಲು ಮನವಿ ಮಾಡಿದರು. ಕೋಡಿಹಳ್ಳದ 30 ಕುಟುಂಬಗಳಿಗೆ ತುರ್ತಾಗಿ ಪುನರ್ವಸತಿ ಕಲ್ಪಿಸುವಂತೆ ಮಂಜುನಾಥ್, ವೆಂಕಟೇಶ್ ಒತ್ತಾಯಿಸಿದರು.
ಚಿಕ್ಕಗಂಗಮ್ಮ ಮತ್ತುರಾಮಕ್ಕ ಮಾತನಾಡಿ ಇಸ್ಮಾಯಿಲ್ ನಗರ ಹಂದಿಜೋಗಿಗಳನ್ನು ಅಣ್ಣೇನಹಳ್ಳಿ ಮಂಜೂರಾಗಿರುವ 4 ಎಕರೆ ಪ್ರದೇಶದಲ್ಲಿ ಸೈಟ್‌ಗಳನ್ನು ಹಂಚಿಕೆ ಮಾಡುವಂತೆ ಕೋರಿದರು.
ಮೇಲಿನ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ನಿವೇಶನ ರಹಿತರ ಸಮಸ್ಯೆ ಪರಿಹಾರವಾಗಬೇಕು, ಇತ್ತೀಚೆಗೆ ಸರ್ಕಾರ ಸೂಚಿಸಿರುವಂತೆ ಸ್ಲಂ ಬೋರ್ಡ್ ಹಕ್ಕುಪತ್ರಗಳನ್ನು ನೊಂದಾಯಿಸಿಕೊಡಬೇಕು ಸರ್ಕಾರದ ಗೃಹಜ್ಯೋತಿ ಯೋಜನೆಯನ್ನು ಕೊಳೆÜಗೇರಿಗಳಲ್ಲಿ ನೊಂದಣಿ ಮಾಡಲು ನಗರಪಾಲಿಕೆ ಬೆಸ್ಕಾಂ, ವ್ಯಾಪಕ ಜಾಗೃತಿ ಮೂಡಿಸಬೇಕು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಭೆಯಲ್ಲಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಆಂಜಿನಪ್ಪ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಲೋಕೇಶ್ವರಪ್ಪ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್, ಗ್ರೇಡ್-2 ತಹಶೀಲ್ದಾರ್, ನಗರಪಾಲಿಕೆ ಅಧಿಕಾರಿಗಳು ಹಾಗೂ ವಿವಿಧ ಸ್ಲಂಗಳ ಮುಖಂಡರಾ¨ Üಜಾಬೀರ್‌ಖಾನ್, ಶಂಕರಯ್ಯ, ಶಾರದಮ್ಮ, ದೊಡ್ಡರಂಗಪ್ಪ, ತಿರುಮಲಯ್ಯ, ಕೃಷ್ಣಮೂರ್ತಿ, ಮಂಗಳಮ್ಮ, ಸುಧಾ, ಪುಟ್ಟರಾಜು, ಅನ್ನಪೂರ್ಣಮ್ಮ,ನಾಗರತ್ನಮ್ಮ, ಧನಂಜಯ್, ಗೋವಿಂದ್,ಗಣೇಶ್, ಅಶ್ವತಪ್ಪ, ಶಾಬುದ್ಧಿನ್, ರಂಗನಾಥಪ್ಪ ಮುಂತಾದವರು ಪಾಲ್ಗೊಂಡಿದ್ದರು.
ಅಧಿಸೂಚನೆ ಹೊರಡಿಸಲು ಕ್ರಮ
ಈಗಾಗಲೇ ಕಲಂ-3 ಪ್ರಾಥಮಿಕದಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳಾದ ಎಸ್.ಎನ್ ಪಾಳ್ಯ ಮತ್ತು ಅರಳೀಮರದ ಪಾಳ್ಯ ಕಾಲೋನಿಯನ್ನು ಕಲಂ-3 ಅಂತಿಮದಲ್ಲಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಕೋಡಿಹಳ್ಳದಲ್ಲಿರುವ 30 ಕುಟುಂಬಗಳನ್ನು ಮತ್ತು ಇಸ್ಮಾಯಿಲ್ ನಗರದ ಹಂದಿಜೋಗಿ 35 ಕುಟುಂಬಗಳನ್ನು ಪುನರ್‌ವಸತಿಗೊಳಿಸಲಾಗುವುದು ಎಂದರು.