ಕೂಡ್ಲಿಗಿ(ಸೆ.04): ಮದುವೆಯಾಗುವುದಾಗಿ ನಂಬಿಸಿ ಯುವತಿ ಅತ್ಯಾಚಾರವೆಸಗಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಂಡಾವೊಂದರಲ್ಲಿ ಜರುಗಿದೆ. ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 

ಸಂತ್ರಸ್ತೆಯ ಯುವತಿಯ ತಂದೆ ತಾಯಿ ಇಬ್ಬರು ತೀರಿಕೊಂಡಿದ್ದು, ಸಂಬಂಧಿಕರ ಮನೆಯಲ್ಲಿ ಯುವತಿ ವಾಸವಾಗಿದ್ದಳು. ಅದೇ ತಾಂಡಾದ ಯುವಕ ರಾಜ ನಾಯ್ಕ(26) ಎಂಬ ಅರೋಪಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದೊಂದು ವರ್ಷದಿಂದ ನಿರಂತರವಾಗಿ ಅತ್ಯಚಾರವೆಸಗಿದ್ದಾನೆ. 

ಸರಿ​ಯಾದ ಚಿಕಿತ್ಸೆ ಸಿಗು​ತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಸೋಂಕಿತ ಸಾವು

ನೊಂದ ಯುವತಿ ತಾಲೂಕಿನ ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪಿಎಸ್‌ಐ ನಾಗರಾಜ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.