ಕೊಟ್ಟೂರು ಮೂಲಕ ಹೊಸಪೇಟೆ- ಬೆಂಗಳೂರು ಹೊಸೂರು ರೈಲಿಗೆ ಮನವಿ

ಬಜೆಟ್‌ನಲ್ಲಿ ಈ ಮೂಲಕ ಹೊಸ ರೈಲುಗಳನ್ನು ಓಡಿಸುವ ಕ್ರಮಗಳನ್ನು ಪ್ರಕಟಿಸುವಂತೆ ಒತ್ತಾಯ| ನಿತ್ಯ ಸಂಚರಿಸುವ ವಿಜಯಪುರ-ಯಶವಂತಪುರ ರೈಲಿಗೆ ಸಂಚರಿಸುವ ಪ್ರಯಾಣಿಕರ ಒತ್ತಡ ಕಡಿಮೆಯಾಗಲಿದೆ| ಪ್ರಯಾಣಿಕರಿಗೆ ಮತ್ತೊಂದು ರೈಲಿನ ಓಡಾಟದ ಅನುಕೂಲ ಸಿಗಲಿದೆ|

People of Kottur Demand to Union Minister Suresh Angadi Hosapete-Bengaluru Train

ಕೊಟ್ಟೂರು(ಜ.27): ಕೊಟ್ಟೂರು ರೈಲು ಮಾರ್ಗವಾಗಿ ನೂತನ ಮಾರ್ಗವಾದ ಹೊಸಪೇಟೆ-ಬೆಂಗಳೂರು-ಹೊಸೂರು(ತಮಿಳನಾಡು) ರೈಲು ಸಂಚರಿಸಲು ಮತ್ತು ಬಳ್ಳಾರಿ ದಾವಣಗೆರೆ ಡೇಮೋ ರೈಲನ್ನು ಹೊಸಪೇಟೆ-ಕೊಟ್ಟೂರು-ಹರಪನಹಳ್ಳಿ ಮಾರ್ಗವಾಗಿ ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಟ್ಟೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಕೆ.ಎಸ್‌. ಈಶ್ವರಗೌಡ ನೇತೃತ್ವದ ನಿಯೋಗ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿಯವರನ್ನು ಒತ್ತಾಯಿಸಿದೆ.

ಈ ಸಂಬಂಧ ನಿಯೋಗದ ಸದಸ್ಯರು ಬೆಳಗಾವಿಯಲ್ಲಿ ಸಚಿವ ಸುರೇಶ ಅಂಗಡಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಬರಲಿರುವ ನೂತನ ಬಜೆಟ್‌ನಲ್ಲಿ ಈ ಮೂಲಕ ಹೊಸ ರೈಲುಗಳನ್ನು ಓಡಿಸುವ ಕ್ರಮಗಳನ್ನು ಪ್ರಕಟಿಸುವಂತೆ ಒತ್ತಾಯಿಸಿದೆ. ಈ ರೈಲುಗಳು ಸಂಚರಿಸಲು ಅನುವು ಮಾಡಿ​ಕೊ​ಟ್ಟರೆ ಪ್ರಯಾಣಿಕರಿಗೆ ಅನುಕೂಲಕರವಾಗುವುದಲ್ಲದೆ ಈಗ ನಿತ್ಯ ಸಂಚರಿಸುವ ವಿಜಯಪುರ-ಯಶವಂತಪುರ ರೈಲಿಗೆ ಸಂಚರಿಸುವ ಪ್ರಯಾಣಿಕರ ಒತ್ತಡ ಕಡಿಮೆಯಾಗಲಿದೆ ಅಲ್ಲದೆ ಪ್ರಯಾಣಿಕರಿಗೆ ಮತ್ತೊಂದು ರೈಲಿನ ಓಡಾಟದ ಅನುಕೂಲವು ಸಿಗಲಿದೆ ಎಂದು ನಿಯೋಗದ ಸದಸ್ಯರು ಸಚಿವ ಅಂಗಡಿಯವರಿಗೆ ವಿವರಿಸಿದ್ದಾಗಿ ತಿಳಿ​ಸಿ​ದ​ರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊಟ್ಟೂರಿನ ತಮ್ಮ ನಿವಾಸದಲ್ಲಿ ಶನಿವಾರ ಈ ಕುರಿತು ಸುದ್ದಿಗೋಷ್ಠಿ ನಡೆ​ಸಿದ್‌ ಅವರು, ಪಟ್ಟಣ ಪಂಚಾಯಿತಿ ಸದಸ್ಯ ಕೆರು. ಈಶ್ವರಗೌಡ, ಸಚಿವ ಅಂಗಡಿಯವರು ನಿಯೋಗದ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದು ಫೆಬ್ರವರಿ ತಿಂಗಳಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ನೂತನ ರೈಲು ಮಾರ್ಗ ಸಂಚರಿಸುವುದನ್ನು ಅಧಿಕೃತವಾಗಿ ಘೋಷಣೆ ಮಾಡುವ ಖಚಿತ ಭರವಸೆಯನ್ನು ನೀಡಿದರು ಎಂದು ಅವರು ಹೇಳಿದರು.

ರೈಲ್ವೆ ಖಾತೆಯ ಕ್ಯಾಬಿನೆಟ್‌ ಸಚಿವ ಪಿಯೂಷ್ ಗೋಯಲ್‌ ಅವರಿಗೆ ಈ ವಿಷಯ ಕುರಿತು ಮತ್ತಷ್ಟು ಮನದಟ್ಟು ಮಾಡಲು ನವದೆಹಲಿಗೆ ಬರುವಂತೆ ಸಚಿವ ಅಂಗಡಿಯವರು ಸೂಚಿಸಿರುವ ಮೇರೆಗೆ ಮುಂದಿನ ಮಂಗಳವಾರ ದೆಹಲಿಗೆ ತೆರಳಲಿರುವುದಾಗಿ ಹೇಳಿದ ಈಶ್ವರಗೌಡ ಇದೀಗ ಸಂಚರಿಸುವ ವಿಜಯಪುರ-ಯಶವಂತಪುರ ರೈಲಿಗೆ ಕೊಟ್ಟೂರೇಶ್ವರ ಎಕ್ಸ್‌ಪ್ರೈಸ್‌ ರೈಲು ಹೆಸರನ್ನು ಇಡುವಂತೆ ನಿಯೋಗ ಒತ್ತಾಯಿಸಿತು ಎಂದು ಅವರು ಹೇಳಿದರು.
ಕೊಟ್ಟೂರು ಮಾರ್ಗವಾಗಿ ಗುಂತಕಲ್ಲು ದಾವಣಗೆರೆ ಹೊಸ ರೈಲು ಸಂಚಾರವನ್ನು ಆರಂಭಿಸುವಂತೆಯೂ ಸಹ ರೈಲ್ವೆ ಸಚಿವರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಕೋನಾಪುರ, ನಾಗರಾಜಗೌಡ ಮತ್ತಿತರರು ಹಾಜರಿದ್ದರು.
 

Latest Videos
Follow Us:
Download App:
  • android
  • ios