Bengaluru: ಪೀಣ್ಯ ಫ್ಲೈಓವರ್‌ ಟೆಸ್ಟ್‌ಗೇ 9 ತಿಂಗಳು ಬೇಕು..!

*  ಕಾರು, ಬೈಕ್‌, ಆಟೋ ಸಂಚಾರಕ್ಕೆಷ್ಟೇ ಸೀಮಿತ
*  ಐಐಎಸ್ಸಿಯಿಂದ ಮೇಲ್ಸೇತುವೆ ಪರಿಶೀಲನೆ
*  ವಿವಿಧ ಪರೀಕ್ಷೆಗಾಗಿ 6ರಿಂದ 9 ತಿಂಗಳ ಅವಕಾಶ ಕೇಳಿದ ಐಐಎಸ್ಸಿ ತಜ್ಞರು
 

Peenya Flyover Test should take 9 months Says Experts grg

ಬೆಂಗಳೂರು(ಫೆ.17):  ಪೀಣ್ಯ ಮೇಲ್ಸೇತುವೆಯಲ್ಲಿ(Peenya Flyover) ಲಘು ವಾಹನ ಸಂಚಾರಕ್ಕೆ ಸಮಸ್ಯೆಯಿಲ್ಲ. ಆದರೆ ಭಾರೀ ವಾಹನಗಳ ಓಡಾಟಕ್ಕೆ ಅನುಮತಿ ಸಿಗಬೇಕೆಂದರೆ ಇನ್ನಷ್ಟು ವಿಸ್ತೃತ ಪರೀಕ್ಷೆ ನಡೆಸಬೇಕು. ಇದಕ್ಕೆ 6ರಿಂದ 9 ತಿಂಗಳು ಸಮಯಾವಕಾಶ ಬೇಕಾಗುವುದರಿಂದ ಅಲ್ಲಿಯವರೆಗೂ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ಸಿಗುವುದಿಲ್ಲ.

ಮೇಲ್ಸೇತುವೆ(Flyover) ಹೆಚ್ಚು ಭಾರವನ್ನು ತಡೆದುಕೊಳ್ಳುತ್ತದೆಯೇ, ಬಾಗಿರುವ ಕೇಬಲ್‌ಗಳನ್ನು ಸ್ಥಳಾಂತರ ಮಾಡಬೇಕೇ, ಪಿಲ್ಲರ್‌ಗಳ ಸಮಸ್ಯೆಯಿಲ್ಲವೇ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಬೇಕಿದೆ. ರಾಸಾಯನಿಕ ವಿಶ್ಲೇಷಣೆ, ನಿರ್ಮಾಣ ಮತ್ತು ವಿಫಲತೆ ಪರೀಕ್ಷೆಯನ್ನೂ(Test) ನಡೆಸಬೇಕಾಗಿದ್ದು, ಇದಕ್ಕೆ ಸಮಯಾವಕಾಶ ಬೇಕಿರುವುದರಿಂದ ಭಾರೀ ವಾಹನ ಸಂಚಾರಕ್ಕೆ ಇನ್ನೂ ತಿಂಗಳುಗಟ್ಟಲೆ ಕಾಯಬೇಕಿದೆ. ಒಂದೊಮ್ಮೆ ಕೇಬಲ್‌ ಬದಲಿಸಿದರೆ ಸಾಕೇ ಅಥವಾ ಪಿಲ್ಲರ್‌ಗಳನ್ನೇ ಬದಲಿಸಬೇಕೇ ಅಥವಾ ಪೂರ್ಣ ಪ್ರಮಾಣದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್‌ ಹಾಕಬೇಕೇ ಎಂಬ ಬಗ್ಗೆ ತಜ್ಞರ ತಂಡ ಸುಧೀರ್ಘವಾಗಿ ಪರಿಶೀಲನೆ ನಡೆಸಿ ವಿಸ್ತೃತ ವರದಿ ನೀಡಲಿದೆ.

Peenya Flyover ಸಂಚಾರಕ್ಕೆ ಸುರಕ್ಷಿತವಲ್ಲ: ಸಿಎಂ ಬೊಮ್ಮಾಯಿ

8ನೇ ಮೈಲಿ ಜಂಕ್ಷನ್‌ ಬಳಿ 102 ಮತ್ತು 103ನೇ ಪಿಲ್ಲರ್‌ಗಳ ಮಧ್ಯೆ ಸೆಗ್ಮೆಂಟ್‌ ಒಳಗಡೆ ಸಂಪರ್ಕ ಕಲ್ಪಿಸಲು 6 ಕೇಬಲ್‌ ಅಳವಡಿಸಿದ್ದು, ಇವು ಸೆಗ್ಮೆಂಟ್‌ಗಳು ಜಾರದಂತೆ ಹಿಡಿದಿಡುತ್ತವೆ. ಇದರಲ್ಲಿ 3 ಕೇಬಲ್‌(Cable) ಬಾಗಿದ್ದರಿಂದ ಸಮಸ್ಯೆ ಉಂಟಾಗಿ ಡಿ.25ರಿಂದ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಈ ಮೇಲ್ಸೇತುವೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ (Indian National Highway Authority) ನಿರ್ವಹಣೆ ಮಾಡುತ್ತಿದ್ದು, ಅಲ್ಲಿನ ಅಧಿಕಾರಿಗಳೇ ಮೊದಲು ಕೇಬಲ್‌ ಪರಿಶೀಲನೆ ನಡೆಸಿದ್ದರು. ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ (IISC)ಯನ್ನು ಎನ್‌ಎಚ್‌ಎಐ(NHAI) ಅಧಿಕಾರಿಗಳು ಸಂಪರ್ಕಿಸಿ ಮೇಲ್ಸೇತುವೆ ಪರಿಶೀಲಿಸಿ ವರದಿ ನೀಡುವಂತೆ ಕೋರಿದ್ದರು.

ಆಗ ಐಐಎಸ್‌ಸಿಯಿಂದ ಭಾರೀ ವಾಹನಗಳನ್ನು(Heavy Vehicles) ಬಳಸಿ ಫೆ.6 ಮತ್ತು 13ರಂದು ಎರಡು ಸಲ ಲೋಡ್‌ ಟೆಸ್ಟ್‌ (ಹೆಲ್ತ್‌ ಮಾನಿಟರಿಂಗ್‌) ಮಾಡಲಾಗಿತ್ತು. ಭಾರವನ್ನು ಮೇಲ್ಸೇತುವೆ ತಡೆದುಕೊಳ್ಳಲಿದೆಯೇ ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಸೆನ್ಸರ್‌ ಬಳಸಿ ಅಂಕಿ-ಅಂಶ ಸಂಗ್ರಹಿಸಲಾಗಿತ್ತು.

ವಿಸ್ತೃತ ಪರೀಕ್ಷೆಗೆ ಸಮಯ ಬೇಕು

ಮೇಲ್ಸೇತುವೆ ಕ್ಷಮತೆ ಪರೀಕ್ಷಿಸುವಂತೆ ಎನ್‌ಎಚ್‌ಎಐ ಅಧಿಕಾರಿಗಳು ಕೋರಿದ್ದರಿಂದ ಪರಿಶೀಲನೆ ನಡೆಸಲಾಯಿತು. ಭಾರೀ ವಾಹನಗಳು ಸಂಚರಿಸಬೇಕು ಎಂದಾದರೆ ಇನ್ನಷ್ಟು ವಿಸ್ತೃತ ಪರೀಕ್ಷೆ ನಡೆಸಬೇಕು. ಇದಕ್ಕೆ 6ರಿಂದ 9 ತಿಂಗಳು ಸಮಯಾವಕಾಶ ಬೇಕಾಗುತ್ತದೆ ಎಂದು ಮೇಲ್ಸೇತುವೆ ಪರಿಶೀಲನಾ ತಂಡದ ನೇತೃತ್ದ ವಹಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಚಂದ್ರಕಿಶನ್‌ ತಿಳಿಸಿದ್ದಾರೆ.

ಮೇಲ್ಸೇತುವೆ ಲಘು ವಾಹನಗಳಿಗೆ ಮುಕ್ತ

ಅಂತು ಇಂತು ಐವತ್ತು ದಿನಗಳ ಬಳಿಕ ತುಮಕೂರು ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರಿಗೆ ತುಸು ನೆಮ್ಮದಿ ಸಿಕ್ಕಿದ್ದು, ಪೀಣ್ಯ ಫ್ಲೈಓವರ್‌ನಲ್ಲಿ ಕಾರುಗಳು ಸೇರಿದಂತೆ ಲಘು ವಾಹನಗಳು ಬುಧವಾರದಿಂದ ಸಂಚಾರ ಆರಂಭಿಸಿವೆ.
ಈ ಲಘು ವಾಹನಗಳ ಓಡಾಟದಿಂದ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಅಲ್ಪ ವಿರಾಮ ಬೀಳಲಿದೆ. ಆದರೆ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಫ್ಲೈಓವರ್‌ನಲ್ಲಿ ಬಸ್ಸುಗಳು, ಹಾಗೂ ಟೆಂಪೋ ಟ್ರಾವೆಲ್ಸ್‌ (ಟಿಟಿ) ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಸಿರು ನಿಶಾನೆ ತೋರಿಲ್ಲ.

Peenya Flyover: ಕಾಮಗಾರಿ ಮುಗಿದಿದ್ದರೂ ಸಂಚಾರಕ್ಕಿಲ್ಲ ಅವಕಾಶ, ಸಾರ್ವಜನಿಕರ ಆಕ್ರೋಶ

ಎನ್‌ಎಚ್‌ಎಐ ಅನುಮತಿ ನೀಡಿದ ಹಿನ್ನಲೆಯಲ್ಲಿ ತುಮಕೂರು ರಸ್ತೆಯ ಫ್ಲೈಓವರ್‌ನಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಬಳಿಕ ಲಘು ವಾಹನಗಳು ಓಡಾಟ ಶುರು ಮಾಡಿದ್ದವು. ಮೊದಲ ಹಂತದಲ್ಲಿ ನಗರದಿಂದ ಹೊರಗೆ ಹೋಗುವ ವಾಹನಗಳಿಗೆ ಅವಕಾಶ ಕಲ್ಪಿಸಲಾಯಿತು. ನಂತರ ರಾತ್ರಿ 9ರ ಬಳಿಕ ನಗರಕ್ಕೆ ಬರುವ ವಾಹನಗಳಿಗೆ ಫ್ಲೈಓವರ್‌ನಲ್ಲಿ ತೆರಳಲು ಅನುವು ಮಾಡಿಕೊಡಲಾಯಿತು ಎಂದು ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಫ್ಲೈಓವರ್‌ ಪರಿಸ್ಥಿತಿ ಅವಲೋಕಿಸಿ ಎರಡು ಹಂತದಲ್ಲಿ ಲಘು ವಾಹನಗಳ ಓಡಾಟಕ್ಕೆ ಕ್ರಮ ಜರುಗಿಸಲಾಗಿದೆ. ಕಾರು, ದ್ವಿಚಕ್ರ ವಾಹನಗಳು ಹಾಗೂ ಆಟೋ ಸೇರಿದಂತೆ ಲಘು ವಾಹನಗಳಿಗೆ ಮಾತ್ರ ಫ್ಲೈಓವರ್‌ನಲ್ಲಿ ಸಂಚರಿಸಬಹುದು. ಆದರೆ ಬಸ್‌, ಟಿಟಿ ಹಾಗೂ ಲಾರಿ ಸೇರಿದಂತೆ ಭಾರೀ ವಾಹನಗಳು ಎಂದಿನಂತೆ ಸರ್ವೀಸ್‌ ರಸ್ತೆಯಲ್ಲಿ ಸಾಗಬೇಕಿದೆ ಎಂದು ಡಿಸಿಪಿ ಸ್ಪಷ್ಟಪಡಿಸಿದರು.
 

Latest Videos
Follow Us:
Download App:
  • android
  • ios