ಕೆನಾಲ್ ಕಾಮಗಾರಿಯಿಂದ ಮುಂದಿನ ಪೀಳಿಗೆಗೆ ನೀರು ಸಿಗಲ್ಲ: ಶಾಸಕ ಎಂ.ಟಿ.ಕೃಷ್ಣಪ್ಪ
ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಗುಳ್ಳೆನರಿ ಇದ್ದಂತೆ, ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ತಾಲೂಕಿನ ಡಿ ರಾಂಪುರ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳದಲ್ಲಿ ಸಾವಿರಾರು ರೈತರನ್ನು ಉದ್ದೇಶಿಸಿ ಮಾತನಾಡಿದರು.
ಗುಬ್ಬಿ (ಮೇ.17): ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಗುಳ್ಳೆನರಿ ಇದ್ದಂತೆ, ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ತಾಲೂಕಿನ ಡಿ ರಾಂಪುರ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳದಲ್ಲಿ ಸಾವಿರಾರು ರೈತರನ್ನು ಉದ್ದೇಶಿಸಿ ಮಾತನಾಡಿದರು. ಈ ಯೋಜನೆಯನ್ನು ಪಕ್ಷಾತೀತವಾಗಿ ವಿರೋಧಿಸಬೇಕು. ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ರಾಮನಗರಕ್ಕೆ ಬಿಟ್ಟರೆ ರೈತರು ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಂತಾಗುತ್ತದೆ. ಮುಂದಿನ ನಮ್ಮ ಮಕ್ಕಳಿಗೆ ಒಂದು ಹನಿ ನೀರು ಸಿಗದಂತಾಗುತ್ತದೆ ಎಂದರು.
ಪೈಪ್‌ಲೈನ್ ನಡೆಯುತ್ತಿರುವ ಜಾಗವು ತಗ್ಗು ಪ್ರದೇಶದಲ್ಲಿದ್ದು, 20 ಅಡಿ ಆಳದಲ್ಲಿ ಅಳವಡಿಸುವುದರಿಂದ ಮುಂದೆ ತುಮಕೂರು ಜಿಲ್ಲಾ ಭಾಗದ ರೈತರಿಗೆ ಬಹಳ ತೊಂದರೆಯಾಗುತ್ತದೆ. ಜಿಲ್ಲೆಗೆ ನಿಗದಿಯಾಗಿರುವ 24.5 ಟಿಎಂಸಿ ನೀರನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದು ಎಷ್ಟರಮಟ್ಟಿಗೆ ಸರಿ. ಇದನ್ನು ವಿರೋಧಿಸಿ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದರೂ, ಕಾಮಗಾರಿ ಪ್ರಾರಂಭಿಸಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ರವಿಚಂದ್ರನ್ ಕರಿಕೋಟು ಹಾಕಿದಾಗಲೆಲ್ಲ ಗೆದ್ದಿದ್ದಾರೆ: ನಿರ್ದೇಶಕ ಗುರುರಾಜ್ ಕುಲಕರ್ಣಿ
ತುಮಕೂರು ಗ್ರಾಮಾಂತರ ಸುರೇಶ್ ಗೌಡ ಮಾತನಾಡಿ, ತುಮಕೂರು ಶಾಖಾ ನಾಲೆಯ 70 ಕಿ.ಮೀ ನಿಂದ 167 ಕಿ,ಮೀ ವರೆಗೆ ಕಾಲುವೆಯಲ್ಲಿಯೇ ನೀರು ಹರಿಸಲು ಸಾಧ್ಯವಿದ್ದರೂ ಉದ್ದೇಶಪೂರ್ವಕವಾಗಿ ಜಲ ಸಂಪನ್ಮೂಲ ಸಚಿವರು ಜಿಲ್ಲೆಗೆ ಅನ್ಯಾಯ ಎಸಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಎಕ್ಸ್‌ಪ್ರೆಸ್ ಕಾಲುವೆ ಮೂಲಕ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಅದಕ್ಕಾಗಿ ಉಗ್ರ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು. ಎಕ್ಸ್‌ಪ್ರೆಸ್ ಕಾಲುವೆ ಸಿದ್ದಗೊಂಡಲ್ಲಿ ಗುಬ್ಬಿ, ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಸುಮಾರು 23 ಕುಡಿಯುವ ನೀರಿನ ಯೋಜನೆಗಳು ಮತ್ತು ಸುಮಾರು 23 ಅಚ್ಚುಕಟ್ಟು ಪ್ರದೇಶಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಹೇಳಿದರು.
ತುರುವೇಕೆರೆ ಮಾಜಿ ಶಾಸಕ ಮಸಾಲ್ ಮಸಾಲೆ ಜಯರಾಂ ಮಾತನಾಡಿ, ಹೇಮಾವತಿ ನಾಲೆಯ ವಿಚಾರವನ್ನೇ ಇಟ್ಟುಕೊಂಡು ಅನೇಕರು ರಾಜಕೀಯ ಮಾಡುತ್ತಿದ್ದಾರೆ. ಆದರೆ ತಾಲೂಕಿನ ಹಿತವನ್ನು ಕಡೆಗಣಿಸಿ ಎಕ್ಸ್‌ಪ್ರೆಸ್ ಕಾಲುವೆ ಮೂಲಕ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು. ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, ಜೂ. 5ರಂದು ರೈತರು ಹಾಗೂ ಸಾರ್ವಜನಿಕರ ಸಭೆ ಕರೆದು ತೆಗೆದಿರುವ ನಾಲೆಯನ್ನು ಜೆಸಿಬಿ ಮುಖಾಂತರ ಮುಚ್ಚಲಾಗುವುದು. ಇದರ ಬಗ್ಗೆ ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ನನ್ನ ಕಣ್ಣುಗಳನ್ನು ಉಪೇಂದ್ರ ಮೆಚ್ಚಿದ್ದರು: A ಸಿನಿಮಾ ನಟಿ ಚಾಂದಿನಿ
ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿಯ ಕಾರದ ಮಠದ ವೀರಬಸವೇಶ್ವರ ಸ್ವಾಮೀಜಿ, ಗೋಡೆಕೆರೆ ಮಠದ ಮೃತ್ಯುಂಜಯ ಮಹಾಸ್ವಾಮೀಜಿ, ದೊಡ್ಡಗುಣಿಯ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮಿಜಿ, ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಜ್ಞಾನಾನಂದ ಮಹಾಸ್ವಾಮಿಜಿ, ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡರಾದ ದಿಲೀಪ್ ಕುಮಾರ್, ಬಿಎಸ್ ನಾಗರಾಜು,ಕಳ್ಳಿ ಪಾಳ್ಯ ಲೋಕೇಶ್, ಶಾಂತಕುಮಾರ್, ಯೋಗಾನಂದ ಮೂರ್ತಿ,ಅನಿಲ್ ಕುಮಾರ್, ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್, ನಿಂಗಪ್ಪ, ಲೋಕೇಶ್ವರ್, ಎನ್ .ಸಿ .ಪ್ರಕಾಶ್, ಪಂಚಾಕ್ಷರಿ, ಪ್ರಭಾಕರ್, ಮಹಾಲಕ್ಷ್ಮಿ ಪೀಠದ ಗುರುಗಳು ಹಾಗೂ ಆಚಾರ್ ಸಂಘದ ಪೀಠದ ಭದ್ರಕಾಳೇಶ್ವರ ಗುರುಗಳು, ಮಾಜಿ ಶಾಸಕ ಎಂ ಡಿ ಲಕ್ಷ್ಮಿ ನಾರಾಯಣ್, ರೈತ ಸಂಘ ತಾಲೂಕ ಅಧ್ಯಕ್ಷ ವೆಂಕಟೇಗೌಡ ಇದ್ದರು.