ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಕೆಟ್ಟಹೆಸರು ತರಬಾರದು: ಶಿವರಾಜ ತಂಗಡಗಿ

ಜನರಿಂದ ಆಯ್ಕೆಯಾದವರು ಜನ ಸೇವೆ, ಕ್ಷೇತ್ರ ಅಭಿವೃದ್ಧಿ ಮಾಡಬೇಕೆ ಹೊರತು ಕ್ಷೇತ್ರಕ್ಕೆ ಕೆಟ್ಟಹೆಸರು ತರಬಾರದು. ಕನಕಗಿರಿ ಕ್ಷೇತ್ರ ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಕಳಂಕಕ್ಕೀಡಾಗಿದೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌ ತಂಗಡಗಿ ಹೇಳಿದರು.

MLAs should not bring bad name to the constituency says shivaraj tangadagi at karatagi rav

ಕಾರಟಗಿ (ಫೆ.12) : ಜನರಿಂದ ಆಯ್ಕೆಯಾದವರು ಜನ ಸೇವೆ, ಕ್ಷೇತ್ರ ಅಭಿವೃದ್ಧಿ ಮಾಡಬೇಕೆ ಹೊರತು ಕ್ಷೇತ್ರಕ್ಕೆ ಕೆಟ್ಟಹೆಸರು ತರಬಾರದು. ಕನಕಗಿರಿ ಕ್ಷೇತ್ರ ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಕಳಂಕಕ್ಕೀಡಾಗಿದೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌ ತಂಗಡಗಿ ಹೇಳಿದರು.

ತಾಲೂಕಿನ ಸಿದ್ದಾಪುರ(Siddapur) ಹೋಬಳಿ ನದಿಪಾತ್ರದ ಉಳೇನೂರು ಗ್ರಾಪಂ ವ್ಯಾಪ್ತಿಯ ಉಳೇನೂರು, ಈಳಿಗನೂರು, ಈಳಿಗನೂರು ಕ್ಯಾಂಪ್‌ ಮತ್ತು ಜಮಾಪುರದಲ್ಲಿ ಶನಿವಾರ ಬ್ಲಾಕ್‌ ಕಾಂಗ್ರೆಸ್‌ ಏರ್ಪಡಿಸಿದ್ದ ‘ಮನೆ ಮನ ತಲುಪೋಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುಂಗಭದ್ರಾ ನದಿ(Tungabhadra river) ಪಾತ್ರ ಹಳ್ಳಿಗಳ ಜನರು ನಂದಿಹಳ್ಳಿಯಿಂದ ಸಿದ್ದಾಪುರಕ್ಕೆ ಹೋಗುವ ಪ್ರಮುಖ ರಸ್ತೆಗಾಗಿ ಮೂರು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಈ ರಸ್ತೆ ರಿಪೇರಿ ಮತ್ತು ಅಭಿವೃದ್ಧಿ ವಿಷಯವಾಗಿ ರಾಜ್ಯಮಟ್ಟದಲ್ಲಿ ಸುದ್ದಿ ಸಹ ಆಯಿತು. ಈ ಗ್ರಾಮೀಣ ಭಾಗದ ಯುವ ಟೆಕ್ಕಿಯೊಬ್ಬರು ರಾಜ್ಯಪಾಲರಿಂದ ಹಿಡಿದು ಸಿಎಂ, ಲೋಕೋಪಯೋಗಿ ಸಚಿವರ ತನಕ ಮನವಿ ಪತ್ರ ಬರೆದು ಇ-ಮೇಲ್‌ ಸಹ ಮಾಡಿ ರಸ್ತೆ ತಡೆ, ರಸ್ತೆಯಲ್ಲಿ ಗದ್ದೆ ಮಾಡಿ ಸಸಿ ನಾಟಿ ಮಾಡಿ ಹೋರಾಟ ನಡೆಸಿದರು. ಆದರೆ ರಾಜ್ಯ ಸರ್ಕಾರ, ಸ್ಥಳೀಯ ಶಾಸಕರು ಯಾರೂ ಜನರ ಹೋರಾಟಗಳಿಗೆ ಸ್ಪಂದಿಸಲಿಲ್ಲ. ಜನ ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

KOPPALA: ವಿಚ್ಛೇದನ ಕೋರಿದ್ದ 4 ಜೋಡಿಗಳು ಕೋರ್ಟ್ ನಲ್ಲಿ ಒಂದಾದರು

ಉಳೇನೂರು, ಈಳಿಗನೂರು, ಜಮಾಪುರ ಭಾಗಕ್ಕೆ ಮಂಜೂರಾದ ಏತ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಸಿದ್ದಾರಾಮಯ್ಯ ಅವರ ಸರ್ಕಾರದಲ್ಲಿ ಮಂಜೂರಾದ ಈ ಯೋಜನೆ ಪೂರ್ಣಗೊಳಿಸಲು ಶಾಸಕರಿಗೆ ಐದು ವರ್ಷ ಬೇಕಾಯಿತೇ? ಎಂದು ಟೀಕಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್‌ ಮಾತನಾಡಿ, ಕ್ಷೇತ್ರ ಅಭಿವೃದ್ಧಿಗೆ ವಿದ್ಯಾವಂತರು ಬೇಕಾಗಿದ್ದಾರೆಯೇ ಹೊರತು ಹೆಬ್ಬಟ್ಟಿನವರಲ್ಲ. ಜನರು ಸಹ ಈಗ ಎಚ್ಚೆತ್ತುಕೊಂಡಿದ್ದು ಯಾರು ವಿದ್ಯಾವಂತರು, ಅಭಿವೃದ್ಧಿ ದೃಷ್ಟಿಕೋನ ಉಳ್ಳವರು ಎನ್ನುವುದು ತಿಳಿದಿದೆ. ಐದು ವರ್ಷಗಳಿಂದೆ ಅಳುತ್ತ ಬಂದವರು ಈಗ ಅಧಿಕಾರದ ದರ್ಪದಲ್ಲಿ ಬಂದು ನಿಲ್ಲುತ್ತಾರೆ. ಅಂಥವರಿಂದ ಅಂತರ ಕಾಪಾಡಿಕೊಳ್ಳಿ ಎಂದರು.

ಸಂಸದ ಸಂಗಣ್ಣರಿಗೆ ಕೇಂದ್ರ ಮಂತ್ರಿಗಿರಿಯೊ? ಕೊಪ್ಪಳ ಕ್ಷೇತ್ರಕ್ಕೆ ಟಿಕೆಟ್ಟೋ?

ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶರಣೇಗೌಡ, ಕೆ. ಸಿದ್ದನಗೌಡ, ಶಿವರೆಡ್ಡಿ ನಾಯಕ, ವಿ. ಸಿದ್ದನಗೌಡ, ಬಸನಗೌಡ ಮಾಲಿ ಪಾಟೀಲ್‌, ವೆಂಕನಗೌಡ ಆದಿಮನಿ, ಬಸನಗೌಡ ನವಲಿ, ಶರಣಪ್ಪ ಕುರಬರ್‌, ಸೋಮನಾಥ ದೊಡ್ಡಮನಿ, ವೆಂಕಟೇಶ ಪೂಜಾರ, ಮಲ್ಲಿಕಾಜು ಈಳಿಗನೂರು, ವೀರೇಶ ವಕೀಲರು, ಬಸವರಾಜ ಬಡಗಿ ಇದ್ದರು.

Latest Videos
Follow Us:
Download App:
  • android
  • ios