Asianet Suvarna News Asianet Suvarna News

ಅತ್ಯಾಚಾರ ನಡೆಸಿದ್ದಾಗಿ ಹೇಳಿದ ಆಡಿಯೋ ವೈರಲ್ : ಕೇಸ್‌ಗೆ ಮೇಜರ್ ಟ್ವಿಸ್ಟ್

  • ಅನೇಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾಗಿ ವ್ಯಕ್ತಿಯೋರ್ವನ ಆಡಿಯೋ ವೈರಲ್ ಕೇಸ್
  • ಆಡಿಯೋ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಕೊಟ್ಟ ಬಳ್ಳಾರಿ ಎಸ್‌ಪಿ
Major twist to bellary Man Audio viral on Rapist gang case snr
Author
Bengaluru, First Published Sep 16, 2021, 1:23 PM IST
  • Facebook
  • Twitter
  • Whatsapp

ಬಳ್ಳಾರಿ (ಸೆ.16): ಬಳ್ಳಾರಿಯಲ್ಲಿ ಅತ್ಯಾಚಾರ ಮಾಡಿದ್ದೇವೆ ಎನ್ನುವ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದ್ದು ಇದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.  

ಮಾನಸಿಕ ಅಸ್ವಸ್ಥತನ ಹುಚ್ಚಾಟದಿಂದ ಈ ವಿಡಿಯೋ ಭಾರಿ ಸದ್ದಾಗಿದ್ದು  ಬಳ್ಳಾರಿ ಪೊಲೀಸರನ್ನೇ ಹೈರಾಣಾಗಿಸಿದೆ. 

ವೈರಲ್ ಆಗಿರೋ ಆಡಿಯೋ ಕುರಿತು ಬಳ್ಳಾರಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಹೀಗೆ ಮಾತನಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ.  

ಬಳ್ಳಾರಿಯಲ್ಲೊಂದು ರೇಪ್‌ ಗ್ಯಾಂಗ್: ಸಂಚಲನ ಹುಟ್ಟಿಸಿದ ಆಡಿಯೋ..!

ಇ ಸಂಬಂಧ ಮಾಹಿತಿ ನೀಡಿದ ಎಸ್ಪಿ ಸೈದುಲ್ ಅಡಾವತ್ ಅತ್ಯಾಚಾರ ಮಾಡಿದ್ದೇವೆ ಕೊಲೆ ಮಾಡಿದ್ದೇವೆ ಎನ್ನುವ ಆಡಿಯೋ ಭಯಾನಕ ವಾತವರಣ ಸೃಷ್ಟಿಯಾಗಿತ್ತು.  ವಿಶೇಷ ತಂಡವೊಂದನ್ನು ರಚನೆ ಮಾಡಿ ಟ್ರೇಸ್ ಮಾಡಿದ್ದೇವೆ.  ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪೇಂಟರ್ ಈ ಆಡಿಯೋ ವೈರಲ್ ಮಾಡಿದ್ದರು. ಇದರ ಅಸಲಿ ಈಗ ತಿಳಿದಿದೆ ಎಂದಿದ್ದಾರೆ. 

ಅವರು ಈವರೆಗೂ ಬಳ್ಳಾರಿಗೆ ಬಂದಿಲ್ಲ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿ ಈ ರೀತಿ ಮಾತನಾಡಿದ್ದಾರೆ. ಪದೇ ಪದೇ ಈ ರೀತಿಯ ಅಸಭ್ಯವಾಗಿ ಮಾತನಾಡುವುದೇ ವ್ಯಕ್ತಿಯ ಪ್ರವೃತ್ತಿಯಾಗಿತ್ತು ಎಂದು ಹೇಳಿದ್ದಾರೆ.

ಬಿಜಾಪುರದ ವರದಿಗಾರನಿಗೆ ಕಾಲ್ ಮಾಡಿದ್ದು, ಅಲ್ಲಿಂದಲೇ ಆಡಿಯೋ ವೈರಲ್ ಆಗಿತ್ತು. ಅದರೀಗ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆಂದು ತಿಳಿದು ಬಂದಿದೆ ಎಂದಿದ್ದಾರೆ. 

Follow Us:
Download App:
  • android
  • ios