ಮಳೆ ಕೊರ​ತೆ: ಕುಡಿವ ನೀರಿಗೆ ಹಾಹಾ​ಕಾರ ಸಾಧ್ಯತೆ..!

ಮಂಚನಬೆಲೆ, ಎತ್ತಿ​ನ​ಮನೆ ಗುಲಗಂಜಿ ಗುಡ್ಡ ಜಲಾಶಯಗಳಿಂದ ಕುಡಿವ ನೀರು, ಇಗ್ಗ​ಲೂರು, ಕಣ್ವ ಬ್ಯಾರೇಜ್‌, ಹಾರೋ​ಬೆಲೆ, ಬೈರ​ಮಂಗಲ ಜಲಾ​ಶಯ ನೀರು ಕೃಷಿಗೆ ಸೀಮಿತ, ರಾಮನಗರ ಜಿಲ್ಲೆ​ಯಲ್ಲಿ ವಾಡಿ​ಕೆ​ಗಿಂತ ಕಡಿ​ಮೆ​ ಮಳೆ. 
 

Likely Faces Drinking Water Problem in Ramanagara Due to Lack of Rain grg

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ಜೂ.11):  ಪೂರ್ವ ಮುಂಗಾರು ಮಳೆ ಸಮ​ರ್ಪ​ಕ​ವಾಗಿ ಬೀಳ​ದಿ​ದ್ದರೆ ಕೃಷಿ ಚಟು​ವ​ಟಿಕೆ ಮಾತ್ರ​ವ​ಲ್ಲದೆ ಜನ​ರಿಗೆ ಕುಡಿ​ಯುವ ನೀರಿನ ಪೂರೈ​ಕೆಗೂ ಹಾಹಾ​ಕಾರ ಎದು​ರಾ​ಗುವ ಸಾಧ್ಯ​ತೆ​ಗ​ಳಿವೆ. ಕಳೆ​ದೆ​ರಡು ತಿಂಗ​ಳಿದ ಸುರಿದ ಮಳೆ ಎಲ್ಲ ಭಾಗ​ದಲ್ಲೂ ಸಮ​ರ್ಪ​ಕ​ವಾಗಿ ಹಂಚಿ​ಕೆ​ಯಾ​ಗಿಲ್ಲ. ಹೀಗಾಗಿ ಮುಂಗಾರು ಮಳೆ ಮೇಲೆ ರೈತರ ಚಿತ್ತ ಹರಿ​ದಿದ್ದು, ಆ ಮಳೆ ಆಶಾ​ದಾ​ಯ​ಕ​ವಾಗಿ ಬಿದ್ದಲ್ಲಿ ರೈತರು ಬಿತ್ತ​ನೆಗೆ ಭೂಮಿ​ಯನ್ನು ಹದ​ಗೊ​ಳಿ​ಸಿ​ಕೊ​ಳ್ಳಲು ಅನು​ಕೂ​ಲ​ವಾ​ಗ​ಲಿದೆ.

ಮುಂಗಾರು ಕೊರ​ತೆ​ಯಿಂದ ಜಿಲ್ಲೆಯ ಹಲ​ವೆಡೆ ರೈತರು ಭೂಮಿ​ಯನ್ನು ಉಳುಮೆ ಮಾಡಲು ಸಾಧ್ಯ​ವಾ​ಗಿಲ್ಲ. ಬಿತ್ತನೆ ಬೀಜ, ಗೊಬ್ಬ​ರ​ವನ್ನು ಸಂಗ್ರ​ಹಿ​ಸಿ​ಕೊಂಡು ಮುಂಗಾರು ಮಳೆ​ಯತ್ತ ದೃಷ್ಟಿನೆಟ್ಟಿ​ದ್ದಾರೆ. ಜಿಲ್ಲೆ​ಯಲ್ಲಿ 98,425 ಹೆಕ್ಟೇರ್‌ ಬಿತ್ತನೆ ಪ್ರದೇ​ಶ​ವಿದ್ದು, ಇದ​ರಲ್ಲಿ ಮಳೆ​ಯಾ​ಶ್ರಿತ ಪ್ರದೇ​ಶವೇ ಅಧಿ​ಕ​ವಾ​ಗಿದೆ. ಈಗ 1062 ಹೆಕ್ಟೇರ್‌ ಪ್ರದೇ​ಶದ ಪೈಕಿ 860 ಹೆಕ್ಟೇರ್‌ನಲ್ಲಿ ಎಳ್ಳು, 282ರ ಪೈಕಿ 138 ಹೆಕ್ಟೇರ್‌ನಲ್ಲಿ ಮುಸು​ಕಿನ ಜೋಳ ಬಿತ್ತನೆ ಮಾಡ​ಲಾ​ಗಿ​ದೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಭೀಕರ ಕಾರು ಅಪಘಾತ: ಚಾಲಕ ಸಾವು, ಮೂವರ ಸ್ಥಿತಿ ಗಂಭೀರ

ಏಪ್ರಿಲ್‌ ತಿಂಗ​ಳಲ್ಲಿ 46.3 ಮಿಲಿ ಮೀಟರ್‌ ವಾಡಿಕೆ ಮಳೆ​ಯಾ​ಗಿದ್ದು, 20.9 ಮಿಲಿ ಮೀಟರ್‌ ವಾಸ್ತವ ಮಳೆ​ಯಾ​ಗಿದೆ. ಮೇ ತಿಂಗ​ಳಲ್ಲಿ 108.9 ಮಿಲಿ ಮೀಟರ್‌ ವಾಡಿಕೆ ಮಳೆಯಾಗಿದ್ದು, 176.2 ಮಿಲಿ ಮೀಟರ್‌ ವಾಸ್ತವ ಮಳೆ​ಯಾ​ಗಿದೆ. ಜೂನ್‌ 1ರಿಂದ 8ರವ​ರೆಗೆ 31 ಮಿಲಿ ಮೀಟರ್‌ ವಾಡಿಕೆ ಮಳೆ​ಯಾ​ಗಿದ್ದು, 8 ಮಿಲಿ ಮೀಟರ್‌ ಮಳೆ​ಯಾ​ಗಿದೆ. ಆದ​ರೆ, ಈ ಮಳೆ​ಯಿಂದ ರೈತರ ಬೆಳೆಗೆ ಅಷ್ಟೇನೂ ಪ್ರಯೋ​ಜ​ನ​ವಾ​ಗಿ​ಲ್ಲ.

ಜಲಾ​ಶ​ಯಗಳ ನೀರು ಕೃಷಿಗೆ ಪೂರ​ಕ :

ಮತ್ತೊಂದೆಡೆ ಜಿಲ್ಲೆ​ಯಲ್ಲಿ ಪ್ರಮುಖವಾಗಿ ಆರು ಸಣ್ಣ ಜಲಾಶಯಗಳ ಪೈಕಿ ಮಂಚನಬೆಲೆ, ವೈಜಿ ಗುಡ್ಡ ( ಎತ್ತಿ​ನ​ಮನೆ ಗುಲಗಂಜಿ ಗುಡ್ಡ )ಜಲಾಶಯಗಳು ಮಾತ್ರ ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಣ್ವ ಜಲಾಶಯ, ಎತ್ತಿ​ನ​ಮನೆ ಗುಲಗಂಜಿ ಜಲಾಶಯ, ಎಚ್‌.ಡಿ.ದೇವೇಗೌಡ ಬ್ಯಾರೇಜ…, ಮಂಚನಬೆಲೆ ಡ್ಯಾಂ, ಬೈರಮಂಗಲ ಜಲಾಶಯ, ಹಾರೋಬೆಲೆ ಡ್ಯಾಂಗಳು ಜಿಲ್ಲೆಯ ಪ್ರಮುಖ ಜಲಾಶಯಗಳಾಗಿ ಗುರುತಿ​ಸಿ​ಕೊಂಡಿವೆ.

ಇವುಗಳ ಪೈಕಿ ಮಂಚನಬೆಲೆ ಮತ್ತು ಎತ್ತಿ​ನ​ಮ​ನೆ ಗುಲಗಂಜಿ ಗುಡ್ಡ ಜಲಾಶಯಗಳು ಮಾತ್ರ ಕುಡಿಯುವ ನೀರನ್ನು ಪೂರೈಸುತ್ತಿವೆ. ಉಳಿದ ನಾಲ್ಕು ಜಲಾಶಯಗಳು ತುಂಬಿ ಹೊರ ಹೋಗುವ ನೀರು ಕೃಷಿಗೆ ಪೂರಕವಾಗಿ ನದಿ, ಹಳ್ಳಗಳ ರೂಪದಲ್ಲಿ ಹರಿದು ಗ್ರಾಮೀಣ ಭಾಗದ ಕುಡಿಯುವ ನೀರಿನ ಜೀವಸೆಲೆ ಅಂತರ್ಜಲ ವೃದ್ಧಿಸುವಲ್ಲಿ ಪೂರಕವಾಗಿವೆ. ಪ್ರತಿವರ್ಷ ಜೂನ್‌ ತಿಂಗಳು ಬಂತೆಂದರೆ ಜಲಾಶಯಗಳು ತುಂಬಿ ತುಳುಕುವುದನ್ನು ನೋಡಲು ಆನಂದವಾಗುತ್ತಿತ್ತು. ಆದರೆ, ಕಳೆದ ವರ್ಷ ಸುರಿದ ಅಕಾಲಿಕ ಮಳೆಯಿಂದ ಜಲಾಶಯಕ್ಕೆ ಹರಿದು ಬಂದಿದ್ದ ನೀರೆ ಈ ವರ್ಷದ ಬೇಸಿಗೆಯನ್ನು ತಣಿಸಲು ನೆರವಾಗಿದೆ.

ಜಿಲ್ಲೆಯಲ್ಲಿ ವಾಡಿಕೆ ಮಳೆ ಬೀಳದೆ ಜಲಾಶಯಗಳಲ್ಲಿ ನೀರಿನ ಮಟ್ಟದಿನೇದಿನೇ ಕುಸಿಯು​ತ್ತಿದೆ. ಇದೀಗ ಮಂಚನಬೆಲೆ ಜಲಾಶಯದಲ್ಲಿ ನೀರಿನ ಮಟ್ಟಕಡಿಮೆಯಾಗುತ್ತಿದೆ. ಸತ್ತೇ​ಗಾ​ಲ​ದಿಂದ ಇಗ್ಗಲೂರು, ಕಣ್ವ ಜಲಾಶಯದ ಮೂಲಕ ಎತ್ತಿ​ನ​ಮನೆ ಗುಲಗಂಜಿ ಗುಡ್ಡ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ನಡೆದಿದ್ದು, ತುಸು ನೀರು ಜಲಾಶಯಕ್ಕೆ ಬಂದಿದೆ. ಆದರೂ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ನಿರ್ವಹಣೆಯಲ್ಲಿ ಅಧಿಕಾರಿಗಳು ಎಡವಿದ್ದಾರೆಂದು ಹೇಳಲಾಗುತ್ತಿದೆ.
ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವೇ ಮಂಚನಬೆಲೆ ಜಲಾಶಯವಾಗಿದೆ. ಈ ವ್ಯವಸ್ಥೆ ಇಲ್ಲದಿದ್ದರೆ ಬಯಲುಸೀಮೆ ಮಾಗಡಿ ಪಟ್ಟಣದ ಜನರ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ಇದೀಗ ಪ್ರತಿನಿತ್ಯ ನೀರು ಪೂರೈಕೆಯಾಗುತ್ತಿದ್ದು, ಮಳೆಗಾಲದ ಕೊರತೆಯಾದರೆ ಜಲಾಶಯ ಬರಿ​ದಾ​ಗುವ ಆತಂಕ ಎದುರಾಗಿದೆ.

ಇನ್ನು ಮಾಗಡಿ ತಾಲೂಕಿನ 36 ಹಳ್ಳಿಗಳಿಗೆ ಎತ್ತಿ​ನ​ಮನೆ ಗುಲಗಂಜಿ ಗುಡ್ಡ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಆದರೆ ನಿರ್ವಹಣೆ ಕೊರತೆ ಕಾಣುತ್ತಿದ್ದು, ಕೆಲವಡೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಸಮಸ್ಯೆ ಇಂದಿಗೂ ಆ ಭಾಗದ ಜನರನ್ನು ಕಾಡುತ್ತಿದೆ.

Ramanagara: ಒಂದೇ ವಾರದ ಅಂತರ, ಒಂದೇ ಜಾಗದಲ್ಲಿ ಎರಡು ಚಿರತೆ ಸೆರೆ

ಮಳೆ​ಯಾ​ಗದ ಕಾರಣ ತೇವಾಂಶ ಕೊರತೆ

ಜೂನ್‌ - ಜುಲೈ ಮಾಹೆ​ಯಲ್ಲಿ ಮತ್ತು ನಂತರ ಮುಂಗಾರು ಬೆಳೆ​ಗ​ಳಾದ ಬತ್ತ, ರಾಗಿ, ದ್ವಿದಳಧಾನ್ಯ, ಎಣ್ಣೆ​ಕಾಳು ಹಾಗೂ ಇತರೆ ಬೆಳೆ​ಗಳು ಬಿತ್ತ​ನೆ​ಯಾ​ಗ​ಲಿವೆ. ಪ್ರಸ್ತುತ ಜಿಲ್ಲೆ​ಯಾ​ದ್ಯಂತ ವಾಡಿ​ಕೆ​ಯಂತೆ ಮಳೆ​ಯಾ​ಗದ ಕಾರಣ ತೇವಾಂಶ ಕೊರ​ತೆ​ಯಿಂದ ​ಪೂರ್ವ ಹಂಗಾ​ಮಿ​ನಲ್ಲಿ ಮಳೆ​ಯಾ​ಶ್ರಿತ ಪ್ರದೇ​ಶ​ಗ​ಳಲ್ಲಿ ಬಿತ್ತ​ನೆ​ಯಾ​ಗಿ​ರುವ ಬೆಳೆ​ಗಳ ಬೆಳ​ವ​ಣಿಗೆ ಕುಂಠಿ​ತ​ವಾ​ಗಿದ್ದು, ಮಳೆ ನೀರಿನ ಅವ​ಶ್ಯ​ಕತೆ ಎದು​ರಾ​ಗಿದೆ. ಮುಂದಿನ ಮೂರು ನಾಲ್ಕು ದಿನ​ಗ​ಳಲ್ಲಿ ಮಳೆ​ಯಾ​ಗ​ದಿ​ದ್ದರೆ ಮಳೆ​ಯಾ​ಶ್ರಿತ ಪ್ರದೇ​ಶ​ದಲ್ಲಿ ಬಿತ್ತ​ನೆ​ಯಾ​ಗಿ​ರುವ ಪೂರ್ವ ಮುಂಗಾರು ಬೆಳೆ​ಗಳು ಕೈ ಸೇರದೆ ಹೋಗ​ಬ​ಹುದು. ರೈತರು ಸಾಲ ಮಾಡಿ ಬೆಳೆದ ಬೆಳೆ​ಗ​ಳಿಂದ ಯಾವುದೇ ಪ್ರಯೋ​ಜನ ಇಲ್ಲ​ದಂತಾ​ಗು​ತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬಾರ​ದಂತಾ​ಗು​ತ್ತದೆ.

ಜಲಾ​ಶ​ಯದ ಹೆಸರು ಗರಿಷ್ಠ ಮಟ್ಟ ಇಂದಿನ ಮಟ್ಟ ನೀರಿನ ಸಂಗ್ರಹ ಸಾಮ​ರ್ಥ್ಯ ಇಂದಿನ ನೀರಿನ ಮಟ್ಟ

ಇಗ್ಗ​ಲೂರು 18.5 ಅಡಿ 18 ಅಡಿ 0.18 ಟಿಎಂಸಿ 0.17 ಟಿಎಂಸಿ
ಕಣ್ವ 32.9 ಅಡಿ 26.1 ಅಡಿ 0.8 ಟಿಎಂಸಿ 0.5 ಟಿಎಂಸಿ
ಹಾರೋ​ಬೆಲೆ 60 ಅಡಿ 59.04 ಅಡಿ 1.579 ಟಿಎಂಸಿ 1.487 ಟಿಎಂಸಿ
ಮಂಚ​ನ​ಬೆಲೆ 83 ಅಡಿ 76 ಅಡಿ 1.22 ಟಿಎಂಸಿ 0.931 ಟಿಎಂಸಿ
ವೈಜಿ ಗುಡ್ಡ 100 ಅಡಿ 96 ಅಡಿ .1 ಟಿಎಂಸಿ .05 ಟಿಎಂಸಿ

Latest Videos
Follow Us:
Download App:
  • android
  • ios