ಕೊಪ್ಪಳ(ಜ.18): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿ ಮೆಹಬೂಬ್‌ ಸಿಂಧನೂರ ಮೇಲೆ ಆರೋಪ ಸಾಬೀತಾಗಿದ್ದು, ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ ಶಂಕರ ಎಂ. ಜಾಲವಾದಿ ಶಿಕ್ಷೆ ವಿಧಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕರಾದ ಗೌರಮ್ಮ ಎಲ್‌. ದೇಸಾಯಿ ತಿಳಿಸಿದ್ದಾರೆ.

ಈ ಪ್ರಕರಣದ ಆರೋಪಿ ಮೆಹಬೂಬಸಾಬ್‌ ಸಿಂಧನೂರ (ಕುಷ್ಟಗಿ) ಈತನು ದೂರುದಾರರ ಅಪ್ರಾಪ್ತ ವಯಸ್ಸಿನ ಮಗಳು ತಮ್ಮ ಮನೆಯಲ್ಲಿದ್ದಾಗ ಮದುವೆಯಾಗುವುದಾಗಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಬೆಂಗಳೂರಿನ ಚಿಕ್ಕ ಬಾಣಸವಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಕಟ್ಟಡ ನಿರ್ಮಾಣದ ಶೆಡ್ಡಿನಲ್ಲಿ ತಂಗಿದ್ದು, ಅಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿರುವ ಆರೋಪ ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆತನ ವಿರುದ್ಧ ಕುಷ್ಟಗಿ ಸಿಪಿಐ ಸುರೇಶ ತಳವಾರ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಅಪ್ರಾಪ್ತೆ ಮೇಲೆ ಅತ್ಯಾ​ಚಾ​ರ: ಕಾಮುಕನಿಗೆ 11 ವರ್ಷ ಜೈಲು ಶಿಕ್ಷೆ

ಮೆಹಬೂಬಸಾಬ್‌ ಸಿಂಧನೂರ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು 10 ವರ್ಷಗಳ ಜೈಲು ಶಿಕ್ಷೆ ಹಾಗೂ 35,000 ದಂಡ ವಿಧಿಸಿ, ದಂಡದ ಮೊತ್ತದಲ್ಲಿ 20,000ಗಳನ್ನು ಬಾಧಿತ ಬಾಲಕಿಗೆ ನೀಡುವಂತೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಶಂಕರ ಎಂ. ಜಾಲವಾದಿ ತೀರ್ಪು ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಗೌರಮ್ಮ ಎಲ್‌. ದೇಸಾಯಿ ವಾದ ಮಂಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.