ಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾಮುಕನಿಗೆ 11 ವರ್ಷ ಜೈಲು ಶಿಕ್ಷೆ
ಅಪರಾಧಿಗೆ 11 ವರ್ಷ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ದಂಡ| ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಿಸಟ್ಟಿಕೊಪ್ಪ ಗ್ರಾಮದ ಫಕ್ಕೀರೇಶ ವಾಲಿಕಾರ ಎಂಬುವವನೇ ಶಿಕ್ಷೆಗೊಳಗಾದ ಅಪರಾಧಿ| 2015 ಜುಲೈ 14ರಂದು ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಫಕ್ಕೀರೇಶ ವಾಲಿಕಾರ|
ಮುಂಡಗೋಡ(ಡಿ.10): ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 11 ವರ್ಷ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಿಸಟ್ಟಿಕೊಪ್ಪ ಗ್ರಾಮದ ಫಕ್ಕೀರೇಶ ವಾಲಿಕಾರ ಎಂಬುವವನೇ ಶಿಕ್ಷೆಗೊಳಗಾದ ಅಪರಾಧಿ. 2015 ಜುಲೈ 14ರಂದು ತಾಲೂಕಿನ ಪಾಳಾ ಗ್ರಾಮದಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಬಗ್ಗೆ ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಮುಂಡಗೋಡ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಎಸ್.ಸಿ. ಪಾಟೀಲ ತನಿಖೆ ನಡೆಸಿ ಆರೋಪಿತನ ಮೇಲೆ ದೋಷಾರೊಪಣೆ ಪತ್ರ ಸಲ್ಲಿಸಿದ್ದರು.
ಯಲ್ಲಾಪುರ ಪೊಲೀಸರಿಗೀಗ ಎಮ್ಮೆ ಕಾಯುವ ಕೆಲಸ..!
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಧೀಶ ಶಿವಾಜಿ ನಾಲ್ವಾಡೆ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಸುಭಾಷ ಖೈರನ್ ವಾದ ಮಂಡಿಸಿದ್ದರು.