ರಾಜ್ಯ ಬಜೆಟ್ ಬಗ್ಗೆ ಮಲೆನಾಡಿನ ಜನರಲ್ಲಿ ನಿರೀಕ್ಷೆ, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯುವುದೇ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡನೇ ಬಾರಿಗೆ ಫೆಬ್ರವರಿ 17ರಂದು ರಾಜ್ಯದ ಬಜೆಟ್ ಮಂಡಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರದೊರೆಯುವುದೇ ಎಂದು ಜನರು ಕಾತರದಿಂದ ಎದುರು ನೋಡುವಂತಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.16): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡನೇ ಬಾರಿಗೆ ಫೆಬ್ರವರಿ 17ರಂದು ರಾಜ್ಯದ ಬಜೆಟ್ ಮಂಡಿಸುತ್ತಿದ್ದು, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರದೊರೆಯುವುದೇ ಎಂದು ಜನರು ಕಾತರದಿಂದ ಎದುರು ನೋಡುವಂತಾಗಿದೆ. ಜಿಲ್ಲೆಯ ಸಮಸ್ಯೆಗಳಿಗೆ ಈ ಹಿಂದಿನ ಬಜೆಟ್ನಲ್ಲಿ ಹೇಳಿಕೊಳ್ಳುವಂತಹ ಪರಿಹಾರ ದೊರೆಯದಿದ್ದರೂ, ಆಸೆಗಳು ಮಾತ್ರ ಜೀವಂತವಾಗಿವೆ. ಆಡಳಿತ ಪಕ್ಷ ಬಿಜೆಪಿ ಶಾಸಕರೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದು, ಅದರಲ್ಲೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿಯೂ ಆಗಿರುವುದರಿಂದ ಸರ್ಕಾರದಲ್ಲಿ ಇವರ ಮಾತು ನಡೆಯುತ್ತದೆ ಹಾಗಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯುವ ಆಶಯ ಒಡಮೂಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಆಡಳಿತಾವಧಿಯಲ್ಲಿ ಹೇಳಿಕೊಳ್ಳುವಂತಹ ಅನುದಾನ ಬಜೆಟ್ನಲ್ಲಿ ಸಿಕ್ಕಿರಲಿಲ್ಲ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಆ ಸಮುದಾಯದ ಬಸವರಾಜಬೊಮ್ಮಾಯಿಗೆ ಮುಖ್ಯಮಂತ್ರಿಪಟ್ಟ ದೊರೆತ್ತಿದ್ದು, ಚುನಾವಣೆ ಹಿನ್ನಲೆಯಲ್ಲಿ ಏನಾದರೂ ಮೋಡಿ ಮಾಡಬಹುದೇ ಎಂಬ ಪ್ರಶ್ನೆ ಎದುರಾಗಿದೆ.
ಟೆಕ್ಸ್‌ಟೈಲ್ ಪಾರ್ಕ್ :
ನಿರುದ್ಯೋಗ ನಿವಾರಣೆಗೆ ಸಹಕಾರಿಯಾಗಿರುವ ಟೆಕ್ಸ್‌ಟೈಲ್ ಪಾರ್ಕ್ ಗೆ ಈಗಾಗಲೇ ಕಡೂರು ತಾಲೂಕಿನಲ್ಲಿ ಜಾಗವನ್ನು ಮೀಸಲಿರಿಸಿದ್ದು, ಬಜೆಟ್ನಲ್ಲಿ ಅನುದಾಗ ದೊರೆತರೆ ಉದ್ಯೋಗ ಅರಸಿ ಯುವಜನರು ರಾಜಧಾನಿಯತ್ತ ಮುಖಮಾಡುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡಿದಂತಾಗುತ್ತದೆ. ಜಿಲ್ಲೆಯ ಬಿಜೆಪಿ ಶಾಸಕರು ಒಟ್ಟಾಗಿ ಹೆಚ್ಚಿನ ಅನುದಾನ ಘೋಷಣೆಗೆ ಒತ್ತಾಯಿಸಿದ್ದಾರೆಯೇ ಎಂಬುದು ಬಜೆಟ್ ಮಂಡನೆ ಬಳಿಕ ತಿಳಿಯಲಿದೆ.
Karnataka Budget 2023 LIVE updates
ದತ್ತಪೀಠ ಅಭಿವೃದ್ಧಿ ಪ್ರಾಧಿಕಾರ:
ದತ್ತಪೀಠದ ಸಮಸ್ಯೆಯನ್ನು ಅಂತೂ ಇಂತೂ ಬಿಜೆಪಿ ಸರ್ಕಾರ ಬಗೆಹರಿಸಿದೆ. ತಾತ್ಕಲಿಕವಾಗಿ ಹಿಂದೂ ಅರ್ಚಕರಿಂದ ತ್ರಿಕಾಲ ಪೂಜೆ ನಡೆಯುತ್ತಿದೆ. ಇದು ಅನೇಕ ವರ್ಷದ ಹೋರಾಟಕ್ಕೆ ಸಂದ ಜಯವೆಂದು ಸಂಘ ಪರಿವಾರದ ಸಂಘಟನೆಗಳ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇನಾಂ ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದ ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ದತ್ತಪೀಠ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಈ ನಿಟ್ಟಿನಲ್ಲಿ ಈ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು, ಬಜೆಟ್ನಲ್ಲಿ ಪ್ರಾಧಿಕಾರ ರಚನೆಯಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ.
ನೀರಾವರಿ ಯೋಜನೆ:
ಪಂಚನದಿಗಳ ಉಗಮಸ್ಥಾನವಾಗಿರುವ ಚಿಕ್ಕಮಗಳೂರು ಜಿಲ್ಲೆಗೆ ಇವುಗಳಿಂದ ಯಾವುದೇ ಉಪಯೋಗವಾಗುತ್ತಿಲ್ಲ, ಈ ನದಿಗಳಿಂದ ಬೇರೆಜಿಲ್ಲೆಯ ಜನರಿಗೆ ಪ್ರಯೋಜನವಾಗಿದೆ. ಈಗಾಗಲೇ ಬಯಲು ಮತ್ತು ಮಲೆನಾಡು ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವ ಗೋಂಧಿ,ರಣಘಟ್ಟ ನೀರಾವರಿ ಯೋಜನೆ ಜಾಲನೆ ದೊರೆತ್ತಿದ್ದು, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮಳಲೂರು ಏತನೀರಾವರಿ ಯೋಜನೆಗೆ ಬಸವರಾಜಬೊಮ್ಮಾಯಿ ಮಂಡಿಸಲಿರುವ ಬಜೆಟ್ನಲ್ಲಿ ಮುಕ್ತಿದೊರೆವುದೇ ಎಂಬ ಆಶಯ ಆ ಭಾಗದ ರೈತರದ್ದಾಗಿದೆ.
ಫೆ.17ರಂದು ಬಿಜೆಪಿ ಸರ್ಕಾರದ ಕೊನೆ ಬಜೆಟ್: ಎಲೆಕ್ಷನ್ ಬಂಪರ್ ನಿರೀಕ್ಷೆ
ಸಹಕಾರ ಸಾರಿಗೆ ಪುನಶ್ಚೇತನ:
ಕಾರ್ಮಿಕರೇ ಹುಟ್ಟು ಹಾಕಿದ ಸಹಕಾರ ಸಾರಿಗೆ ಸಂಸ್ಥೆ ದೇಶದಲ್ಲೆ ಪ್ರಸಿದ್ಧಿ ಪಡೆದುಕೊಂಡಿತ್ತು. ಕೊಪ್ಪ ತಾಲೂಕಿಗೆ ಹೊರರಾಜ್ಯ ಮತ್ತು ದೇಶದವರು ಭೇಟಿನೀಡಿ ಮಾಹಿತಿ ಪಡೆದುಕೊಂಡಿದ್ದರು. ಈ ಸಂಸ್ಥೆಗೆ ಬಗ್ಗೆ ಅನೇಕರು ಪ್ರಬಂಧ ಮಂಡಿಸಿ ಪಿಎಚ್ಡಿಯನ್ನೂ ಪಡೆದುಕೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ಸಹಕಾರ ಸಾರಿಗೆಸಂಸ್ಥೆ ವಿದ್ಯಾರ್ಥಿಗಳು ಮತ್ತು ವಯೋವೃದ್ಧಿಗೆ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಪಾಸ್ ವಿತರಿಸಿತ್ತು. ಬರುಬರುತ್ತಾ ಸಂಸ್ಥೆ ಆದಾಯ ಕುಸಿತಗೊಂಡು ಕೊನೆಗೆ ಬಾಗಿಲು ಮುಚ್ಚುವ ಪರಿಸ್ಥಿತಿ ಬಂತು.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಬಳಿ ತೆರಳಿ ಸಹಕಾರ ಸಾರಿಗೆ ಪುನಶ್ಚೇತನಕ್ಕೆ ಸಹಕರಿ ಸಲು ಕೋರಲಾಗಿತ್ತು. ಈ ಬಜೆಟ್ನಲ್ಲಿ ಪುನಶ್ಚೇತನಕ್ಕೆ ತೆರಿಗೆ ವಿನಾಯಿತಿ ನೀಡಿ,ಅಪೆಕ್ಸ್ಬ್ಯಾಂಕಿನಿಂದ ಸಾಲಸೌಲಭ್ಯ ಒದಗಿಸಲು ಅವಕಾಶಮಾಡಿಕೊಡಲಾಗುವುದೇ ಎಂಬುದನ್ನು ನೋಡಬೇಕಿದೆ.
ಸಿಎಂ ಬೊಮ್ಮಾಯಿ ಬಜೆಟ್‌ನತ್ತ ಬೆಟ್ಟದಷ್ಟುನಿರೀಕ್ಷೆ: ಸಿಗುವುದೇ ಧಾರವಾಡಕ್ಕೆ ವಿಶೇಷ ಅನುದಾನ?
ಮಿನಿವಿಮಾನ ನಿಲ್ದಾಣ:
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಿದ್ದು, ಮಿನಿವಿಮಾನ ನಿಲ್ದಾಣ, ಏರ್ಸ್ಟ್ರಿಪ್ ನಿರ್ಮಾಣಕ್ಕೆ ಬಜೆಟ್ನಲ್ಲಿ ಒತ್ತು ನೀಡಲಾಗುವುದೇ? ನಗರಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿಗಳು ಮುಂದಿನ ವರ್ಷ ಮಿನಿವಿಮಾನದಲ್ಲಿ ಬಂದಿಳಿಯುವಂತೆ ಮಾಡಬೇಕು. ಅದಕ್ಕಾಗಿ ಅನುದಾನ ನೀಡುತ್ತಿದ್ದು, ಅಗತ್ಯ ಭೂಮಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಜಿಲ್ಲೆಯ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೇಶಿಯ ಮತ್ತು ವಿದೇಶಿಯರು ಆಗಮನಕ್ಕೆ ಆನುಕೂಲಮಾಡಿಕೊಡುವ ನಿಟ್ಟಿನಲ್ಲಿ ಈ ಹಿನ್ನಲೆಯಲ್ಲಿ ಅನುದಾನ ಕಾಯ್ದಿರಿಸುವರೇ ಎಂಬುದನ್ನು ನೋಡಬೇಕಿದೆ.