ಕರೆಂಟ್ ಸಮಸ್ಯೆಯಿಂದ ಜೀನ್ಸ್ ಉದ್ಯಮ ಸಂಕಷ್ಟ: ಅತಂತ್ರ ಸ್ಥಿತಿಯಲ್ಲಿ ಕಾರ್ಮಿಕರ ಬದುಕು!
ಜೀನ್ಸ್ ಹಬ್ ಎಂದು ಪ್ರಖ್ಯಾತಿಯನ್ನು ಪಡೆದಿರೋ ಬಳ್ಳಾರಿಯಲ್ಲಿನ ಜೀನ್ಸ್ ಉದ್ಯಮ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಕಚ್ಚಾ ವಸ್ತುಗಳ ದರ, ಇಂಪೋರ್ಟ್ ಮತ್ತು ಎಕ್ಸ್ ಪೋರ್ಟ್ ದರ ಹೆಚ್ಚಾದ ಬೆನ್ನಲ್ಲೇ ಇದೀಗ ವಿದ್ಯುತ್ ಕಣ್ಣಾಮುಚ್ಚಾಲೇ ಉದ್ಯಮದಾರರಷ್ಟೆ ಅಲ್ಲದೇ ಕಾರ್ಮಿಕರ ಬದುಕನ್ನು ಕೂಡ ಸಂಕಷ್ಟಕ್ಕೀಡು ಮಾಡಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
ಬಳ್ಳಾರಿ (ಅ.19): ಜೀನ್ಸ್ ಹಬ್ ಎಂದು ಪ್ರಖ್ಯಾತಿಯನ್ನು ಪಡೆದಿರೋ ಬಳ್ಳಾರಿಯಲ್ಲಿನ ಜೀನ್ಸ್ ಉದ್ಯಮ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಕಚ್ಚಾ ವಸ್ತುಗಳ ದರ, ಇಂಪೋರ್ಟ್ ಮತ್ತು ಎಕ್ಸ್ ಪೋರ್ಟ್ ದರ ಹೆಚ್ಚಾದ ಬೆನ್ನಲ್ಲೇ ಇದೀಗ ವಿದ್ಯುತ್ ಕಣ್ಣಾಮುಚ್ಚಾಲೇ ಉದ್ಯಮದಾರರಷ್ಟೆ ಅಲ್ಲದೇ ಕಾರ್ಮಿಕರ ಬದುಕನ್ನು ಕೂಡ ಸಂಕಷ್ಟಕ್ಕೀಡು ಮಾಡಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಪರಿಣಾಮ ದಿನಕ್ಕೆ ಮೂನ್ನೂರು ರೂಪಾಯಿ ದುಡಿಯುವ ಕಾರ್ಮಿಕ ವರ್ಗದ ಆದಾಯಕ್ಕೂ ಖೋತಾ ಬಿದ್ದಿರೋ ಹಿನ್ನೆಲೆ ಜೀನ್ಸ್ ಕಾರ್ಮಿಕರು ಪರದಾಡುತ್ತಿದ್ದಾರೆ.
ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗ ಹೈರಾಣದ ಕಾರ್ಮಿಕರು: ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ಗ್ರಾಹಕರಷ್ಟೇ ಅಲ್ಲದೇ ಉದ್ಯಮದಾರರು ಹೈರಾಣಾಗ್ತಿದ್ದಾರೆ..ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ರೈತರು ಮಾತ್ರ ಸಂಕಷ್ಟ ಅನುಭವಿಸುತಿಲ್ಲ. ಸಣ್ಣ ಸಣ್ಣ ಕೈಗಾರಿಕೆಯ ಮೇಲೂ ಲೋಡ್ ಶೆಡ್ಡಿಂಗ್ ಪ್ರಭಾವ ಬೀರುತ್ತಿದೆ. ಹೌದು, ಹೀಗೆ ಕರೆಂಟ್ ಕಣ್ಣಾಮುಚ್ಚಾಲೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಯೊಬ್ಬರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮವನ್ನು ನಂಬಿಕೊಂಡು 60 ರಿಂದ 80 ಸಾವಿರ ಕುಟುಂಬಗಳು ಜೀವನ ಮಾಡುತ್ತವೆ.
ಅನ್ನದಾತರು ಬೆಳೆದ ಬೆಳೆಗಳಿಗೆ ವಾಮಾಚಾರದ ಕಾಟ: ಹೊಲಗಳಿಗೆ ತೆರಳಲು ರೈತರಿಗೆ ಭಯ!
ಜೀನ್ಸ್ ಉದ್ಯಮದ ವಿವಿಧ ವಿಭಾಗಗಳಲ್ಲಿ ಪ್ರತಿನಿತ್ಯ ಸಾವಿರಾರು ಜನರು ಕೆಲಸ ಮಾಡುತ್ತಿದ್ಧಾರೆ. ಆದ್ರೇ, ಲೋಡ್ ಶೆಡ್ಡಿಂಗ್ ನಿಂದಾಗಿ ಇದೀಗ ಅವರಿಗೆ ಕೆಲಸವೇ ಇಲ್ಲದಂತಾಗಿದೆ. ಕೆಲಸದ ವೇಳೆ ಕರೆಂಟ್ ಯಾವಾಗ ಹೋಗ್ತದೆ ಯಾವಾಗ ಬರುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ ಹೀಗಾಗಿ ಕೆಲಸಕ್ಕೆ ಬಂದ ಕಾರ್ಮಿಕರು ದಿನದ ಬಹುತೇಕ ಅವಧಿಯಲ್ಲಿ ಕೆಲಸ ವಿಲ್ಲದೇ ಖಾಲಿ ಕುಳಿತಿರೋ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಜೊತೆ ಇಲ್ಲಿ ನಿಗದಿತ ಸಂಬಳವಿರೋದಿಲ್ಲ. ಒಂದು ಪ್ಯಾಂಟ್ ಹೊಲಿದರೇ ಇಂತಿಷ್ಟು ಹಣವಿಂದು ಇರುತ್ತದೆ. ದಿನಕ್ಕೆ ಎಷ್ಟು ಪ್ಯಾಂಟ್ ಹೊಲಿಯುತ್ತಾರೋ ಅಷ್ಟು ಹಣ ಬರುತ್ತದೆ. ಹೆಚ್ಚು ಕಡಿಮೆ ದಿನಕ್ಕೆ ಮೂನ್ನೂರು ರಿಂದ ನಾಲ್ಕು ನೂರರವರೆಗೂ ದುಡಿಯುತ್ತಾರೆ ಆದ್ರೇ, ಕರೆಂಟ್ ಇಲ್ಲದ ಹಿನ್ನೆಲೆ ಎರಡರಿಂದ ಮೂನ್ನೂರು ಬಂದ್ರೇ, ಹೆಚ್ಚು ಎನ್ನುತ್ತಿದ್ಧಾರೆ ಇಲ್ಲಿಯ ಕಾರ್ಮಿಕರು.
ವಿದ್ಯುತ್ ಕಡಿತಕ್ಕೆ ಟೈಮಿಂಗ್ ಇಲ್ಲ. ಖಾಲಿ ಕುಳಿತಿರೋದಕ್ಕೆ ವೇತನವಿಲ್ಲ: ಗಣಿನಾಡು ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಆದ್ರೇ, ಕರೆಂಟ್ ಕೈಕೊಡ್ತಿರೋ ಹಿನ್ನೆಲೆ ಅದನ್ನು ನೆಚ್ಚಿಕೊಂಡ ಮಾಲೀಕರು ಕಾರ್ಮಿಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ದಿನಕ್ಕೆ ಸುಮಾರು ಐದಾರು ಘಂಟೆಗಳ ಕಾಲ್ ಕರೆಂಟ್ ಕಡಿತಗೊಳಿಸುತ್ತಿರೋ ಹಿನ್ನೆಲೆ ಜೀವನ ನಿರ್ವಹಣೆಗೆ ಬೇಕಾದಷ್ಟು ಹಣವನ್ನು ದುಡಿಯಲಾಗದೇ ಪರದಾಡುತ್ತಿದ್ದಾರೆ. ಅಲ್ಲದೇ ವಿದ್ಯತ್ ಸ್ಥಗಿತಗೊಳಿಸಲು ಸಮಯ ನಿಗದಿ ಮಾಡಿ ಬೇಕಾ ಬಿಟ್ಟಿಯಾಗಿ ಕರೆಂಟ್ ಕಟ್ ಮಾಡಿದ್ರೇ, ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ಧಾರೆ.
ಶಿವಮೊಗ್ಗ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ಗೆ ನಿರ್ಬಂಧ: ಕಾರಣವೇನು?
ಇನ್ನೂ ಸರ್ಕಾರ ಮುಂದಿನ ಬಜೆಟ್ ನಲ್ಲಿ ಬಳ್ಳಾರಿಯಲ್ಲಿ ಐದು ಸಾವಿರ ಕೋಟಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಮಾಡಲು ಚಿಂತನೆ ಮಾಡುತ್ತಿದೆ. ಇದ್ಯಾವುದು ನಮಗೆ ಬೇಡ ಮೊದಲು ಕರೆಂಟ್ ಕೊಡಿ ಎನ್ನುತ್ತಿದ್ದಾರೆ. ಇಲ್ಲಿಯ ಉದ್ಯಮದ ಮಾಲೀಕರಾದ ಮಲ್ಲಿಕಾರ್ಜುನ ಉದ್ಯಮದಾರರಷ್ಟೇ ಅಲ್ಲದೇ ಕಾರ್ಮಿಕ ವರ್ಗ ಕೂಡ ಪರದಾಡುತ್ತಿದೆ ಗ್ಯಾರಂಟಿ ನೀಡುವ ಭರದಲ್ಲಿ ಸರ್ಕಾರ ವಿದ್ಯತ್ ನಿರ್ವಹಣೆ ಮಾಡುವಲ್ಲಿ ಎಡವುತ್ತಿದೆ. ಕರೆಂಟ್ ಕಣ್ಣಾಮುಚ್ಚಾಲೇ ಕೇವಲ ರೈತರಿಗೆ ಮಾತ್ರವಲ್ಲದೇ ಇದೀಗ ಸಣ್ಣ ಸಣ್ಣ ಉದ್ಯಮದಾರರಿಗೆ ದೊಡ್ಡ ಮಟ್ಟದ ಹೊಡೆತ ನೀಡುತ್ತಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸೋ ಮೂಲಕ ರೈತರ ಜೊತೆ ಉದ್ಯಮದಾರರನ್ನು ಕಾಪಾಡಬೇಕಿದೆ.