Asianet Suvarna News Asianet Suvarna News

ಹೂಗುಚ್ಛ, ಕೊರೋನಾ ರೂಲ್ಸ್ ಗೆ ಕ್ಯಾರೇ ಎನ್ನದ  ಸಿಎಂ ತವರಿನ ಇನ್ಸ್ ಪೆಕ್ಟರ್ !

* ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಇನ್ಸ್ ಪೆಕ್ಟರ್
*ಸಿಎಂ ತವರು ಜಿಲ್ಲೆಯಲ್ಲೇ  ನಿಯಮಕ್ಕೆ ಕಿಮ್ಮತ್ತು ಇಲ್ಲ
* ಬೆಂಬಲಿಗರೊಂದಿಗೆ ಠಾಣೆಯಲ್ಲೇ ಜನ್ಮದಿನ ಆಚರಣೆ ಮಾಡಿಕೊಂಡ ಅಧಿಕಾರಿ

Haveri Bankapura inspector birthday celebration in police station mah
Author
Bengaluru, First Published Aug 12, 2021, 6:45 PM IST
  • Facebook
  • Twitter
  • Whatsapp

ಹಾವೇರಿ (ಆ. 12) ಈ ಟೈಮ ನಲ್ಲಿ ಇದೆಲ್ಲಾ  ಬೇಕಿತ್ತಾ ಪೋಲಿಸ್ ಸಾಹೆಬ್ರೆ?  ಸಿಎಂ ಆದೇಶ ಉಲ್ಲಂಘನೆ ಮಾಡಿದ ಪಿಎಸ್ ಐ  ವಿರುದ್ಧ ಜನಾಕ್ರೋಶ ಕೇಳಿ ಬಂದಿದೆ. ಸಭೆ ಹಾಗೂ ಕಾರ್ಯಕ್ರಮದಲ್ಲಿ ಹಾರ,ಹೂ ಗುಚ್ಚ ನೀಡಬಾರದು ಎಂದು ಕರ್ನಾಟಕೇ ಸರ್ಕಾರವೇ ಆದೇಶ  ನೀಡಿದೆ.

ಎಲ್ಲರೂ ಕೋವೀಡ್ ನಿಯಮ ಪಾಲನೆ ಮಾಡಬೇಕು  ಎಂದು ತಿಳಿಸಲಾಗಿತ್ತು. ಆದರೆ ಠಾಣೆಯಲ್ಲಿ ಬರ್ತಡೆ ಆಚರಿಸಿಕೊಂಡು  ಪಿಎಸ್‌ಐ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬಂಕಾಪುರ ಠಾಣಾಧಿಕಾರಿ ಸಂತೋಷ ರೂಲ್ಸ್ ಬ್ರೇಕ್ ಮಾಡಿದ್ದಾರೆ . ಶಿಗ್ಗಾವಿ ತಾಲೂಕಿನ ಬಂಕಾಪುರ ಠಾಣೆಯ ಇನ್ಸ್ ಪೆಕ್ಟರ್ ಬರ್ತಡೇ ದೊಡ್ಡ ಮಟ್ಟದ ಚರ್ಚಗೆ ಕಾರಣವಾಗಿದೆ.

ಕೊರೋನಾ ಲಸಿಕೆ ನಿರಾಕರಿಸಿದರೆ ರೇಶನ್ ಇಲ್ಲ!

ತಮ್ಮ ಚೆಂಬರ್ ಒಳಗೆ ಅಭಿಮಾನಿಗಳೊಂದಿಗೆ ಬರ್ತಡೆ ಆಚರಿಸಿಕೊಂಡು ಪೋಟೊಗೆ ಪೋಸ್ ನೀಡಿದ್ದಾರೆ.  ಈ ವೇಳೆ ಮಾಸ್ಕ್ ಇಲ್ಲ ಸಾಮಾಜಿಕ ಅಂತರವನ್ನು ಕೇಳಲೇಬೇಡಿ ಜವಾಬ್ದಾರಿ ಅಧಿಕಾರಿಯಾಗಿ ಈ ಥರ ಮಾಡಿದ್ದು ತಪ್ಪು ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.

ಬೇರೆಯವರಿಗೆ ತಿಳಿವಳಿಕೆ  ನೀಡಬೇಕಾದ ಪೊಲೀಸ್ ಅಧಿಕಾರಿಯೇ ಈ ರೀತಿ ನಡೆದುಕೊಂಡಿದ್ದಾರೆ ಎಂದು ಟೀಕೆ ವ್ಯಕ್ತವಾಗಿದೆ. 

Follow Us:
Download App:
  • android
  • ios