Chikkaballapura : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟಏರಿಕೆ
ಜಿಲ್ಲೆಯಲ್ಲಿ ಸತತ ಎರಡು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗೂ ಮೀರಿ ಮಳೆ ಬೀಳುತ್ತಿದ್ದು ಕಳೆದ ವರ್ಷದ ಮಳೆಗಿಂತ ಈ ವರ್ಷ ಬಿದ್ದ ಭಾರೀ ಮಳೆಯಿಂದ ಜಿಲ್ಲೆಯ ಅಂತರ್ಜಲ ಮಟ್ಟವೃದ್ಧಿ ಆಗಿರುವುದು ಕಂಡು ಬಂದಿದೆ.
ಚಿಕ್ಕಬಳ್ಳಾಪುರ(ನ.05): ಜಿಲ್ಲೆಯಲ್ಲಿ ಸತತ ಎರಡು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗೂ ಮೀರಿ ಮಳೆ ಬೀಳುತ್ತಿದ್ದು ಕಳೆದ ವರ್ಷದ ಮಳೆಗಿಂತ ಈ ವರ್ಷ ಬಿದ್ದ ಭಾರೀ ಮಳೆಯಿಂದ ಜಿಲ್ಲೆಯ ಅಂತರ್ಜಲ ಮಟ್ಟವೃದ್ಧಿ ಆಗಿರುವುದು ಕಂಡು ಬಂದಿದೆ.
ಜಿಲ್ಲೆಯಲ್ಲಿನ ಅಂತರ್ಜಲ (Ground Water ) ನಿರ್ದೇಶನಾಲಯ ತನ್ನ ಅಧ್ಯಯನ ಕೊಳವೆ ಬಾವಿಗಳ ಮೂಲಕ ನಡೆಸಿರುವ ಸ್ಥಿರ ಅಂತರ್ಜಲ ಮಟ್ಟದ ವಿವರಗಳು ಕನ್ನಡಪ್ರಭಗೆ ಲಭ್ಯವಾಗಿದ್ದು ಕಳೆದ ಬಾರಿಗಿಂತ ಈ ವರ್ಷ ಜಿಲ್ಲೆಯಲ್ಲಿ ಬಿದ್ದಿರುವ ಭರ್ಜರಿ ಮಳೆಗೆ ಅಂತರ್ಜಲ ಮಟ್ಟಹೆಚ್ಚಾಗಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸ್ಥಿರ ಅಂತರ್ಜಲ ಮಟ್ಟದ ಅಧ್ಯಯನಕ್ಕಾಗಿ ಜಿಲ್ಲಾದ್ಯಂತ 51 ಕೊಳವೆ ಬಾವಿಗಳನ್ನು ಅಳವಡಿಸಿದ್ದು ಅವುಗಳ ಅಧ್ಯಯನದ ಮೂಲಕ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟಏರುಗತಿಯಲ್ಲಿ ಸಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲಾದ್ಯಂತ ಸರಾಸರಿ ಅಂತರ್ಜಲ ಮಟ್ಟ20.32 ನಷ್ಟುಏರಿಕೆ ಕಂಡಿದೆಯೆಂದು ಅಂತರ್ಜಲ ನಿರ್ದೇಶನಾಲದಯ ಹಿರಿಯ ಭೂ ವಿಜ್ಞಾನಿ ಎಸ್.ಬೋರಪ್ಪ ತಿಳಿಸಿದರು.
ತಾಲೂಕುವಾರು ಮಾಹಿತಿ: ಜಿಲ್ಲೆಯಲ್ಲಿ ಕಳೆದ 2021 ಅಕ್ಟೋಬರ್ ತಿಂಗಳಿಂದ 2022ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಅಂತರ್ಜಲ ಮಟ್ಟಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಿಶೇಷವಾಗಿ ಈ ವರ್ಷದ ಮಳೆಗೆ ಬಾಗೇಪಲ್ಲಿ ತಾಲೂಕಿನಲ್ಲಿ 20.3 ಮೀ.ನಷ್ಟುಅಂತರ್ಜಲ ಮಟ್ಟಏರಿಕೆ ಕಂಡಿದೆ. ಅದೇ ರೀತಿ ಚಿಂತಾಮಣಿ ತಾಲೂಕಿನಲ್ಲಿ 14.13, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 25.27 ಮೀ, ಗುಡಿಬಂಡೆ ತಾಲೂಕಿನಲ್ಲಿ 8.11 ಮೀ. ಗೌರಿಬಿದನೂರು ತಾಲೂಕಿನಲ್ಲಿ 30.46 ಮೀ. ಹಾಗೂ ಶಿಡ್ಲಘಟ್ಟತಾಲೂಕಿನಲ್ಲಿ 23.77 ಮೀ.ನಷ್ಟುಅಂತರ್ಜಲ ಮಟ್ಟಏರಿಕೆ ಆಗುವ ಮೂಲಕ ಜಿಲ್ಲಾದ್ಯಂತ ಸರಾಸರಿ ಒಟ್ಟು 20.32 ರಷ್ಟುಮೀಟರ್ ಅಂತರ್ಜಲ ಏರಿಕೆಯಾಗಿದೆ.
ಜಿಲ್ಲೆಯಲ್ಲಿ 2021ನೇ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ಬಿದ್ದ ಮಳೆಯಿಂದಾಗಿ ಅಂತರ್ಜಲ ಮಟ್ಟಹೆಚ್ಚು ವೃದ್ಧಿಯಾಗಿದೆ. ಜಿಲ್ಲೆಯಲ್ಲಿನ 51 ಅಧ್ಯಯನ ಕೊಳವೆ ಬಾವಿಗಳ ಮೂಲಕ ಸ್ಥಿರ ಅಂತರ್ಜಲ ಮಟ್ಟಅಳತೆ ಮಾಡಲಾಗಿದೆ.
-ಎಸ್.ಬೋರಪ್ಪ, ಹಿರಿಯ ಭೂ ವಿಜ್ಞಾನಿ.
ಗೌರಿಬಿದನೂರಲ್ಲಿ ಒಟ್ಟು 30.46 ಮೀ. ಏರಿಕೆ
ಗುಡಿಬಂಡೆಯಲ್ಲಿ ಅತಿ ಕಡಿಮೆ 8.11 ಮೀ
ಕಳೆದ ವರ್ಷಕ್ಕಿಂತ ಈ ವರ್ಷ ಅಂತರ್ಜಲ ವೃದ್ಧಿ
ಚಿಕ್ಕಬಳ್ಳಾಪುರದಲ್ಲೂ 25.27 ಮೀ ನಷ್ಟುಹೆಚ್ಚಳ
ಸತತ ಮಳೆಯಿಂದ ರಾಮನಗರದಲ್ಲಿ ಅಂತರ್ಜಲ ಮಟ್ಟ ಏರಿಕೆ
ರಾಮನಗರ (ಸೆ.13): ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಬರದಿಂದ ಭಣಗುಡುತ್ತಿದ್ದ ಜಿಲ್ಲೆಯ ಕೆರೆಕಟ್ಟೆಗಳು ಭೂಮಿಯ ದಾಹ ನೀಗಿದ್ದು, ಭಾರಿ ಮಳೆಯಿಂದಾಗಿ ಇದೀಗ ಅಂತರ್ಜಲ ಪ್ರಮಾಣದಲ್ಲಿ ಸಹ ಗಣನೀಯ ವೃದ್ಧಿಯಾಗಿದೆ.
ಬತ್ತಿಹೋಗಿದ್ದ ಕೆರೆಗಳಿಗೆ ಜೀವಕಳೆ: ಮಳೆಯ ಕೊರತೆ ಮತ್ತು ಬಿಸಿಲ ಝಳದಿಂದಾಗಿ ಜಿಲ್ಲೆಯ ಹಲವೆಡೆ ಕೆರೆಗಳು ಬತ್ತಿಹೋಗಿದ್ದರೆ, ಇನ್ನು ಕೆಲವು ಕಡೆ ಬರಿದಾಗಿದ್ದ ಕೆರೆಗಳು ಬತ್ತಿಹೋಗುವ ಹಂತ ತಲುಪಿದ್ದವು. ಕೆಲವು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟಿತ್ತು. ಇದೇ ಪರಿಸ್ಥಿತಿ ಮುಂದುವರೆದಿದ್ದರೇ, ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗುವ ಸಂಭವವಿತ್ತು. ಆದರೆ, ವರುಣನ ಕೃಪೆಯಿಂದಾಗಿ ಒಂದು ತಿಂಗಳ ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಸುರಿದ ದಾಖಲೆಯ ಮಳೆಯಿಂದಾಗಿ ಕಳೆದ 30 ವರ್ಷಗಳಿಂದ ತುಂಬದ ಹಲವು ಕೆರೆಕಟ್ಟೆಗಳು ಇಂದು ಭರ್ತಿಯಾಗಿ ಕೋಡಿಹರಿಯುತ್ತಿದೆ.
Ramanagara: ಜನ ನೋವಿನಲ್ಲಿದ್ದರೆ ಬಿಜೆಪಿ ಸಂಭ್ರಮಾಚರಣೆ ವಿಕೃತಿ: ಸಂಸದ ಡಿ.ಕೆ.ಸುರೇಶ್
ಪಾತಾಳ ತಲುಪಿತ್ತು: ಕಳೆದ ಎರಡು ವರ್ಷ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಕಡೆ ನೀರಿಗೆ ಸಮಸ್ಯೆ ಉಂಟಾಗಿತ್ತು. ಜನ ನೀರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದರಿಂದ ಅಂತರ್ಜಲ ಪಾತಾಳ ಕಂಡಿತ್ತು. ಕಳೆದ ಎರಡು ವರ್ಷಗಳ ಕಾಲ ಇದೇ ಸಮಯದಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಾಗಿ ಬಳಕೆ ಮಾಡಿದ ಕಾರಣದಿಂದಾಗಿ ನಾಲ್ಕು ತಾಲೂಕಿನ ಪೈಕಿ ರಾಮನಗರ ಮತ್ತು ಕನಕಪುರ ತಾಲೂಕುಗಳನ್ನು ಜಿಲ್ಲಾ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳು ಅತೀ ಹೆಚ್ಚು ಅಂತರ್ಜಲ ಬಳಸುವ ತಾಲೂಕುಗಳೆಂದು ಘೋಷಣೆ ಮಾಡಿದ್ದರು.
ಇದರಿಂದಾಗಿ ಈ ಎರಡು ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿಯನ್ನು ಕಡ್ಡಾಯಗೊಳಿಸಲಾಗಿತ್ತು. ಒಂದೊಮ್ಮೆ ಅನುಮತಿ ಇಲ್ಲದೇ ಕೊಳವೆ ಬಾವಿ ಕೋರಿಸಿದ್ದೇ ಆದಲ್ಲಿ ನಿರ್ದೇಶನಾಲಯದ ಅಧಿಕಾರಿಗಳು ದಂಡವಿಧಿಸುವ ಕಾರ್ಯ ಮಾಡುತ್ತಿದ್ದರು. ಇಷ್ಟೆಲ್ಲಾ ಕಟ್ಟು ನಿಟ್ಟಿನಕಾನೂನಿನ ನಡುವೆಯು ಅತೀ ಹೆಚ್ಚು ಅಂತರ್ಜಲ ಬಳಕೆ ಮಾಡುವ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಆದರೆ, ಇತ್ತೀಚಿಗೆ ಸುರಿದ ಮಳೆಯಿಂದಾಗಿ ಇಂತಹ ಸಮಸ್ಯೆಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಲಾಗಿದ್ದು, ಜಿಲ್ಲೆಯಲ್ಲಿ ನೀರಿನ ಸಮೃದ್ಧಿ ಹೆಚ್ಚಾಗಿದೆ.
ನೆಲಕಚ್ಚಿದ ಬೆಳೆಗಳು: ಒಂದು ಕಡೆ ಅಂತರ್ಜಲ ಹೆಚ್ಚಾಗಿದ್ದರೆ, ಇನ್ನೊಂದು ಕಡೆ ಹವಾಮಾನ ವೈಪರೀತ್ಯದಿಂದಾಗಿ ಸುರಿದ ಮಳೆಗೆ ಪ್ರಮುಖ ಬೆಳೆಗಳೆಲ್ಲಾ ಬಹುತೇಕ ನೆಲಕಚ್ಚಿದೆ. ಕಷ್ಟಪಟ್ಟು ಕೃಷಿ ಮಾಡಿದ್ದ ರೈತರ ಫಸಲು ಕೈತಪ್ಪಿ ಹೋಗಿರುವುದರಿಂದ ತಲೆಮೇಲೆಕೈ ಹೊತ್ತು ಕುಳಿತ್ತಿದ್ದಾನೆ. ಇದೇ ವೇಳೆ ಕೆರೆಕಟ್ಟೆಗಳಲ್ಲಿ ಸಮೃದ್ಧವಾಗಿ ನೀರು ಹರಿಯುತ್ತಿರುವ ಕಾರಣ, ಮುಂದಿನ ದಿನಗಳಲ್ಲಿನ ನೀರಿನಕೊರತೆ ನೀಗಿರುವುದರಿಂದ ಮುಂದಿನ ದಿನಗಳಲ್ಲಿ ಸಮೃದ್ಧ ಕೃಷಿ ಮಾಡಲು ಅವಕಾಶ ಲಭಿಸಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಹಲವು ದಿನಗಳಲ್ಲಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ವರ್ಷದ ಅರ್ಧದಷ್ಟುಅಂತರ್ಜಲ ಪ್ರಮಾಣ ಈ ವರ್ಷದ ಅರ್ಧ ವರ್ಷದಲ್ಲಿ ಲಭ್ಯವಾಗಿದೆ. ಹಾಗಾಗಿ ಬತ್ತಿಯೋಗಿರುವ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿದೆ. ಇನ್ನು ಕಳೆದ ಒಂದುವಾರದಿಂದ ತಣ್ಣಗಾಗಿದ್ದ ಮಳೆಯ ಮತ್ತೆ ಆರಂಭವಾಗಿದೆ. ಒಂದೊಮ್ಮೆ ಇದೇ ರೀತಿ ಮಳೆಯ ಆರ್ಭಟ ಮುಂದುವರೆದಿದ್ದೇ ಆದಲ್ಲಿ ಅಂತರ್ಜಲ ಇನ್ನಷ್ಟುವೃದ್ಧಿಯಾಗಲಿದೆ.