Asianet Suvarna News Asianet Suvarna News

ತುಳಜಾಪುರದಿಂದ ಬಂದ ಗೊಂದೋಲು ಸಂಸ್ಕೃತಿ ಕರಾವಳಿಯಲ್ಲಿ ಇಂದಿಗೂ ಜೀವಂತ

ಬಡವರ ಹಬ್ಬಗಳು ಆಚರಣೆಯಲ್ಲಿ ಶ್ರೀಮಂತವಾಗಿರುತ್ತೆ. ಇಂತಹಾ ಆಚರಣೆಗಳೇ ಆ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗುತ್ತೆ. ತುಳಜಾಪುರದಿಂದ ಶತಶತಮಾನಗಳ ಹಿಂದೆ ಕರ್ನಾಟಕ ಕರಾವಳಿಗೆ ವಲಸೆ ಬಂದ ಮರಾಠಿ ಜನಾಂಗದವರ ಗೋಂದೊಲು ಹಬ್ಬವೂ ಒಂದು ವಿಶಿಷ್ಟ ಆಚರಣೆ.

gondolu culture from Tuljapur is still alive in coastal karnataka gow
Author
First Published Jan 19, 2023, 7:23 PM IST

ಉಡುಪಿ (ಜ.19): ಬಡವರ ಹಬ್ಬಗಳು ಆಚರಣೆಯಲ್ಲಿ ಶ್ರೀಮಂತವಾಗಿರುತ್ತೆ. ಇಂತಹಾ ಆಚರಣೆಗಳೇ ಆ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗುತ್ತೆ. ತುಳಜಾಪುರದಿಂದ ಶತಶತಮಾನಗಳ ಹಿಂದೆ ಕರ್ನಾಟಕ ಕರಾವಳಿಗೆ ವಲಸೆ ಬಂದ ಮರಾಠಿ ಜನಾಂಗದವರ ಗೋಂದೊಲು ಹಬ್ಬವೂ ಒಂದು ವಿಶಿಷ್ಟ ಆಚರಣೆ, ತುಳುನಾಡ ಸಂಸ್ಕೃತಿಯೊಂದಿಗೆ ಬೆರೆತು ಹೋಗಿರುವ ಗೋಂದೊಲು ಹಬ್ಬದ ಒಂದು ಝಲಕ್ ನೋಡಿ. ನಾಗಸ್ವರದ ಲಯಕ್ಕೆ ಕುಪ್ಪಳಿಸಿ ಹೆಜ್ಜೆ ಹಾಕುವ ವೇಷಧಾರಿಗಳು, ಜೊತೆಯಾಗಿ ಕುಣಿಯುವ ಭಕ್ತವರ್ಗ. ಇವೆರು ದುರ್ಗಾ ದೇವಿಯ ಆರಾಧಕರು. ಕರಾವಳಿ ಭಾಗದಲ್ಲಿ ನಡೆಯುವ ಈ ಆಚರಣೆಯನ್ನು ಗೋಂದೋಲು ಎನ್ನುತ್ತಾರೆ. 

ತುಳು ಭಾಷಿಕರ ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮರಾಠಿ ಜನಾಂಗದವರು ಇದ್ದಾರೆ.ಇವರೆಲ್ಲಾ ದೂರದ ತುಳಜಾಪುರದಿಂದ ಸಾವಿರ ವರ್ಷಗಳ ಹಿಂದೆಯೇ ವಲಸೆ ಬಂದವರು, ಊರು ಬಿಟ್ಟು ಬಂದವರು ತಮ್ಮ ಜೊತೆಗೆ ಶ್ರೀಮಂತ ಜನಪದ ಸಂಸ್ಕೃತಿಯನ್ನು ಹೊತ್ತು ತಂದಿದ್ದಾರೆ, ಅದು ಇವತ್ತಿಗೂ ಜೀವಂತವಾಗಿದೆ ಅನ್ನೋದೇ ಸೋಜಿಗ. 

ಇಂದಿಗೂ ಮಳೆಗಾಲಕ್ಕೆ ಮುನ್ನ ಮರಾಠಿ ಜನಾಂಗದ ಗದ್ದುಗೆಗಳಲ್ಲಿ, ಮನೆಗಳಲ್ಲಿ ಈ ಗೋಂದೋಲು ಆಚರಣೆ ನಡೆಯುತ್ತೆ.ಗದ್ದುಗೆಗಳಲ್ಲಿ ಸಾಮೂಹಿಕ ಸ್ವರೂಪದ ಆರಾಧನೆ ನಡೆದರೆ, ಹರಕೆ ಹೊತ್ತವರು ಮನೆಮನೆಗಳಲ್ಲಿ ಗೋಂದೊಲು ಏರ್ಪಡಿಸುತ್ತಾರೆ.

Magh Masa 2023: ಈ ಮಾಸದಲ್ಲಿಯೇ ಬರಲಿದೆ ಶಿವರಾತ್ರಿ, ವಸಂತ ಪಂಚಮಿ

ಜೀವನದ ಕಷ್ಟ ನಷ್ಟಗಳ ಸಂದರ್ಭದಲ್ಲಿ ಗೋಂದೋಲು ಹರಕೆ ಹೊರೋದು ಸಂಪ್ರದಾಯ. ಕತ್ತಲು ಕವಿಯುತ್ತಿದ್ದಂತೆ ಈ ನರ್ತನ ಸೇವೆ ಆರಂಭವಾಗುತ್ತೆ. ಸುಶ್ರಾವ್ಯ ನಾಗಸ್ವರಕ್ಕೆ ನಾನಾಬಗೆಯ ವೇಷ ತೊಟ್ಟ ಮರಾಠಿ ಕಲಾವಿದರು ಕುಣಿಯುತ್ತಾರೆ. ಕೈಯ್ಯಲಿ ಪಂಚ ದೀವಟಿಗೆಯ ಬೆಳಕನ್ನು ಹಿಡಿದು ಹರಕೆ ಹೊತ್ತವರು, ಊರ ಜನ ಸಾಥಿಯಾಗುತ್ತಾರೆ. ನರ್ತನದಿಂದ ದೇವಿಯನ್ನು ಸಂಪ್ರೀತಗೊಳಿಸುವುದು ವಿಶಿಷ್ಟ ಪದ್ಧತಿ.

Chitradurga: ಊರಿಗೂರೇ ಬರಿಗಾಲಲ್ಲಿದ್ದು ಮಾರಿಕಾಂಬಾ ಜಾತ್ರೆ ಆಚರಣೆ

ತುಳುನಾಡಿನ ಯಕ್ಷಗಾನ ಮತ್ತು ಕೋಲದ ಪ್ರಭಾವ ಈ ಆಚರಣೆಯಲ್ಲಿ ಹೇರಳವಾಗಿದ್ದರೂ , ಮರಾಠರು ತಮ್ಮತನ ಉಳಿಸಿಕೊಂಡಿದ್ದಾರೆ.ಸಂಪ್ರದಾಯಗಳ ನೆಪದಲ್ಲಾದರೂ ಕುಟುಂಬಿಕರು, ಸ್ನೇಹಿತರು ಸೇರೋದು, ದೇವರ ನೆಪದಲ್ಲಿ ಸಂಬಂದಗಳನ್ನು ಘಟ್ಟಿಗೊಳಿಸೋದು ಈ ಹಬ್ಬಗಳ ವಿಶೇಷ. ಹಾಗಾಗಿಯೇ ತಲೆಮಾರಿನಿಂದ ತಲೆಮಾರಿಗೆ ಈ ಗೋಂದೋಲು ಸಂಸ್ಕೃತಿ ಸಾಗಿ ಬಂದಿದೆ.

Follow Us:
Download App:
  • android
  • ios