Asianet Suvarna News Asianet Suvarna News

ಸುಳ್ಯ : ಕೃಷಿಕರೇ ರೂಪಿಸಿದ ಅಪರೂಪದ ಅಂಗಳದ ಉದ್ಯಾನವನವಿದು

  • ತಮ್ಮ ಮನೆಯಂಗಳದಲ್ಲೇ ಅತ್ಯಾಕರ್ಷಕ ಖಾಸಗಿ ಗಾರ್ಡನ್‌ ರೂಪಿಸಿದ ಕೃಷಿಕ
  • ಮನೆಯಂಗಳವೇ ಅಕ್ಷರಶಃ ಗಾರ್ಡನ್‌ ಆಗಿದೆ
  • ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆಯ ಕೊಡಿಯಾಲ ಗ್ರಾಮದಲ್ಲಿದೆ ಸುಂದರ ಗಾರ್ಡನ್
Garden of Dakshina Kannada Sulya farmer attracts visitors and selfie lovers snr
Author
Bengaluru, First Published Jul 14, 2021, 10:38 AM IST

 ವರದಿ : ಅಗ್ನಿಹೋತ್ರಿ ರಾಘವೇಂದ್ರ

 ಮಂಗಳೂರು (ಜು.14):  ಉದ್ಯಾನವನದ ಸೊಬಗು ಸವಿಯಲು ಹೆಚ್ಚಿನವರು ಹಳ್ಳಿಯಿಂದ ನಗರದೆಡೆಗೆ ಪ್ರವಾಸಕ್ಕೆ ತೆರಳುವುದು ರೂಢಿ. ಆದರೆ ಇಲ್ಲೊಬ್ಬರು ಉದ್ಯಾನವನಕ್ಕೆಂದು ನಗರದಿಂದ ಹಳ್ಳಿಯೆಡೆಗೆ ಬರುವಂತೆ ಮಾಡಿದ್ದಾರೆ. ಅದರಲ್ಲೂ ಕೃಷಿಕರೊಬ್ಬರು ತಮ್ಮ ಮನೆಯಂಗಳದಲ್ಲೇ ಅತ್ಯಾಕರ್ಷಕ ಖಾಸಗಿ ಗಾರ್ಡನ್‌ ರೂಪಿಸಿ ಬೆರಗುಗೊಳಿಸಿದ್ದಾರೆ.

ಹೌದು, ಮನೆಯಂಗಳವೇ ಅಕ್ಷರಶಃ ಗಾರ್ಡನ್‌ ಆಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆಯ ಕೊಡಿಯಾಲ ಗ್ರಾಮದ ಕುರಿಯಾಜೆಯಲ್ಲಿ. ಇಲ್ಲಿನ ತಿರುಮಲೇಶ್ವರ ಭಟ್‌ ಅವರ ಅಂಗಳ ಗಾರ್ಡನ್‌ ರೂಪ ಪಡೆದು ಜನಾಕರ್ಷಣೆ ಕೇಂದ್ರವಾಗಿದೆ. ವಿವಿಧ ಜಾತಿಯ ಆರ್ಕೀಡ್‌ ಸಸ್ಯಗಳು, ಅಂಥೋರಿಯಂ ಗಿಡಗಳು, ಕ್ಯಾಕ್ಟಸ್‌, ಕೇಪಳ ಹೀಗೆ ಹಲವಾರು ಅಲಂಕಾರಿಕ ಗಿಡಗಳು ಇವರ ಅಂಗಳದಲ್ಲಿ ಅರಳಿ ನಿಂತು ಹಸಿರಿನಿಂದ ಕಂಗೊಳಿಸುತ್ತಿವೆ.

ನೀವು ಮಾಡುತ್ತಿರುವುದು ನಿಮಗೆ ತಿಳಿದಿರದ ಗಾರ್ಡನಿಂಗ್ ಮಿಸ್ಟೇಕ್ಸ್ !!

250ಕ್ಕೂ ಅಧಿಕ ಕ್ಯಾಕ್ಟಸ್‌: ತಿರುಮಲೇಶ್ವರ ಭಟ್‌ ಅವರು ಆಗಾಗ ನೆರೆಯ ಕೇರಳ, ಉತ್ತರ ಭಾರತ, ಮಲೇಷಿಯಾ, ಥಾಯ್ಲಾಂಡ್‌, ನೇಪಾಳಗಳಿಗೆ ಪ್ರವಾಸ ಹೋಗುತ್ತಿರುತ್ತಾರೆ. ಹೋದಾಗೆಲ್ಲ ಅಲ್ಲಿ ಕಂಡ ಸುಂದರ ಗಿಡಗಳನ್ನ ತರುತ್ತಿದ್ದರು. ಹೀಗೆ ಸಂಗ್ರಹಿಸುತ್ತಾ ಹೋದಾಗ ಇವರ ಅಂಗಳದ ಅಂದ ಹೆಚ್ಚುತ್ತಾ ಹೋಯಿತು. ಬಳಿಕ ಅಪರೂಪ ಗಾರ್ಡನ್‌ ಸ್ವರೂಪ ಪಡೆಯಿತು. ಹೀಗೆ ಸಂಗ್ರಹಿಸಿ ಇವರಲ್ಲಿ ಈಗ ಸುಮಾರು 250 ಕ್ಕೂ ಅಧಿಕ ಕ್ಯಾಕ್ಟಸ್‌ ಗಿಡಗಳಿದ್ದು, ಆಕರ್ಷಣೆಯ ಕೇಂದ್ರವಾಗಿದೆ.

Garden of Dakshina Kannada Sulya farmer attracts visitors and selfie lovers snr

ಸೆಲ್ಫಿ ಸ್ಪಾಟ್‌: ಗ್ರಾಮೀಣ ಭಾಗದಲ್ಲಿ ಇಂತದ್ದೊಂದು ಉದ್ಯಾನವನ ಎಲ್ಲೂ ಕಾಣ ಸಿಗದು. ಇಲ್ಲಿನ ಹಚ್ಚಹಸಿರಿನ ತೋಟ ನಡುವೆ ಚೊಕ್ಕ ಮಿನಿ ಉದ್ಯಾನವನ ಎಲ್ಲರ ಮನ ಸೆಳೆಯುತ್ತಿದೆ. ಫೋಟೋ ಹಾಗೂ ಸೆಲ್ಫಿಗಾಗಿ ಸುತ್ತಮುತ್ತಲಿನ ಜನರು ಆಗಾಗ ತಿರುಮಲೇಶ್ವರ ಭಟ್‌ ಅವರ ಮನಗೆ ಬರುತ್ತಿರುತ್ತಾರೆ.

ಉತ್ತಮ ಅರೋಗ್ಯ, ನೆಮ್ಮದಿ ನಿಮ್ಮದಾಗಲೂ ಕಿಚನ್ ಗಾರ್ಡನ್ ಮಾಡಿ

ತಿರುಮಲೇಶ್ವರ ಭಟ್‌ ಅವರು ಉದ್ಯಾನವನನ್ನು ಯೋಜನಾಬದ್ಧವಾಗಿ ರೂಪಿಸಿದವರಲ್ಲ. ತಮ್ಮ ಖುಷಿಗೋಸ್ಕರ ಗಿಡಗಳನ್ನು ನೆಡುತ್ತಾ ಹೋದರು. ಅದುವೇ ಈಗ ಸುಂದರ ಉದ್ಯಾನವನವಾಗಿ ಮನೆಯಂಗಳದ ಸೊಬಗು ಹೆಚ್ಚಿಸಿದ್ದು, ಆಕರ್ಷಣೆಯ ಕೇಂದ್ರವಾಗಿದೆ. ಇದಕ್ಕಾಗಿ ಭಟ್‌ ಅವರು ಕಳೆದ 20 ವರ್ಷಗಳಿಂದ ಅವಿರತವಾಗಿ ಶ್ರಮಿಸಿದ್ದಾರೆ. ಸ್ವತಃ ತಾವೇ ಗಿಡಗಳಿಗೆ ರೂಪು ನೀಡಿದ್ದಾರೆ. ಗಿಡಗಳ ಕಟಿಂಗ್‌ಗಾಗಿ ಗಾರ್ಡನ್‌ ತಜ್ಞರನ್ನು ಇವರು ಅವಲಂಭಿಸಿಲ್ಲ. ತಮಗೆ ಯಾವ ರೂಪ ಬೇಕೊ ಹಾಗೇ ಶೇಪ್‌ ನೀಡುತ್ತಾ ಹೋದರು, ಅದರಲ್ಲೇ ಖುಷಿ ಪಟ್ಟರು. ಗಾರ್ಡನ್‌ ಕೆಲಸದಲ್ಲಿ ಇವರ ಜೊತೆ ಮನೆಯವರೆಲ್ಲರೂ ಕೈಜೊಡಿಸಿದ್ದಾರೆ.

Garden of Dakshina Kannada Sulya farmer attracts visitors and selfie lovers snr

200ಕ್ಕೂ ಅಧಿಕ ಹಣ್ಣಿನ ಗಿಡಗಳು: ತಿರುಮಲೇಶ್ವರ ಅವರ ಮನೆಯಂಗಳವಷ್ಟೇ ವಿಶೇಷತೆ ಹೊಂದಿಲ್ಲ. ತೋಟವೂ ಅಷ್ಟೇ ವಿಶೇಷತೆಗಳನ್ನು ಹೊಂದಿದೆ. ರಾಂಬುಟಾನ್‌, ಮ್ಯಾಂಗೊಸ್ಟಿನ್‌, ಡುರಿಯಾನೋ, ಲಾಂಗಾನ್‌ ಹೀಗೆ ಸುಮಾರು 200ಕ್ಕೂ ಅಧಿಕ ದೇಶ ವಿದೇಶಗಳ ಅಪರೂಪದ ಹಣ್ಣುಗಳನ್ನು ಇವರು ಬೆಳೆದಿದ್ದಾರೆ. ಆದರೆ ಯಾವುದೂ ವಾಣಿಜ್ಯಿಕವಾಗಿಯಲ್ಲ, ಸ್ವಂತ ಬಳಕೆಗಾಗಿ ಬೆಳೆದು ತಿಂದಿದ್ದಾರೆ. ಸುಮಾರು 20 ಬಗೆಯ ಹಲಸು ಹಾಗೂ 20 ಬಗೆಯ ತಳಿಯ ಮಾವಿನ ಮರಗಳು ಇವರಲ್ಲಿವೆ.

ಕಿಚನ್ ಗಾರ್ಡನ್ ನಲ್ಲಿ ಸುಲಭವಾಗಿ ಬೆಳೆಸಬಹುದಾದ ತರಕಾರಿಗಳಿವು

ಇನ್ನುಳಿದಂತೆ ಅಡಕೆ ತೆಂಗು, ಬಾಳೆ, ಕಾಳುಮೆಣಸು, ರಬ್ಬರ್‌ ಬೆಳೆದಿದ್ದಾರೆ. ದೇಸಿ ಗೋಸಾಕಣೆ, ತೋಟದಲ್ಲಿ ನೀರಿಂಗಿಸುವಿಕೆ ಹೀಗೆ 8 ಎಕ್ರೆ ತೋಟದಲ್ಲಿ ಸುಸಜ್ಜಿತ ಮಾದರಿ ಕೃಷಿ ಇವರದ್ದು. ತಿರುಮಲೇಶ್ವರ ಭಟ್‌ ಅವರ ಕೃಷಿ ಸಾಧನೆಯನ್ನು ಗುರುತಿಸಿ ಕೃಷಿ ರತ್ನ, ತಾಲೂಕು ಕೃಷಿ ಪಂಡಿತ ಪ್ರಶಸ್ತಿ ಲಭಿಸಿದೆ. ಹಲವಾರು ಸನ್ಮಾನಗಳೂ ಇವರನ್ನು ಅರಸಿ ಬಂದಿವೆ.

ನಾನು ಗಾರ್ಡನ್‌ ಯೋಜನಾಬದ್ಧವಾಗಿ ರೂಪಿಸಿದವನಲ್ಲ. ಎಷ್ಟುಖರ್ಚಾಗಿದೆ ಎಂದು ಲೆಕ್ಕವನ್ನೂ ಮಾಡಿಲ್ಲ. ಗಿಡಗಳನ್ನು ಸಂಗ್ರಹಿಸುತ್ತಾ ಹೋದೆ, ಉದ್ಯಾನವನವಾಗಿದೆ. ನನ್ನ ಖುಷಿ ಗೋಸ್ಕರ ಮಾಡಿದ್ದು, ಈಗ ಸಂತಸ ತಂದಿದೆ.

- ಕುರಿಯಾಜೆ ತಿರುಮಲೇಶ್ವರ ಭಟ್‌, ಪ್ರಗತಿಪರ ಕೃಷಿಕರು.

ಚಿತ್ರಗಳು: ಆರ್. ಕೆ. ಭಟ್ ಸುಳ್ಯ ಹಾಗೂ ತಿರುಮಲೇಶ್ವರ ಭಟ್.
ವಿಡಿಯೋ: ತಿರುಮಲೇಶ್ವರ ಭಟ್.

Follow Us:
Download App:
  • android
  • ios