'ಹೈದರಾಬಾದ್ ಕಾಮುಕರ ಎನ್‌ಕೌಂಟರ್ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ‌‌'

ಹರಿಯಾಣ, ಮಹಾರಾಷ್ಟ್ರದಲ್ಲಿ ಸಮೀಕ್ಷೆ ಏನಾಯ್ತು| ಎಲ್ಲವೂ ತಲೆಕೆಳಗಾಯ್ತು, ಆದ್ದರಿಂದ ನಾನು ಸಮೀಕ್ಷೆ ನಂಬಲಿಕ್ಕೆ ಹೋಗಲ್ಲ| ಡಿಸೆಂಬರ್ 9ಕ್ಕೆ ರಿಸಲ್ಟ್ ಬರುತ್ತೆ. ಜನರು ಏನು ತೀರ್ಪು ಕೊಡ್ತಾರೆ ಎಂಬುದು ಗೊತ್ತಾಗುತ್ತದೆ ಎಂದ ಸಿದ್ದರಾಮಯ್ಯ| ಸಮೀಕ್ಷೆಗಳೆಲ್ಲ ಸತ್ಯವಾಗಿಬಿಟ್ಟಿದ್ದಾವಾ?ಅಂದಾಜು ಮಾಡ್ತಾರಷ್ಟೇ|

Former CM Siddaramaiah Talks Over Hyderabad Encounter

ಬಾಗಲಕೋಟೆ(ಡಿ.06): ಹೈದರಾಬಾದ್ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ ಪ್ರಕರಣ ಆರೋಪಿಗಳ ಎನ್ ಕೌಂಟರ್ ವಿಚಾರದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ‌‌, ಎನ್ ಕೌಂಟರ್ ಆಗಿದೆ ಅನ್ನೋದು ಅಷ್ಟೆ ಗೊತ್ತು, ಗೊತ್ತಿಲ್ಲದೇ ಹೇಗೆ ರಿಯಾಕ್ಟ್ ಮಾಡೋದು‌‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಶುಕ್ರವಾರ ಜಿಲ್ಲೆಯ ಬಾದಾಮಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಪರಾಧಿಗಳು ತಪ್ಪಿಸಿಕೊಂಡು ಹೋಗ್ತಿದ್ರಾ,ಕದ್ದು ಹೋಗ್ತಿದ್ರಾ ಅನ್ನೋದು ನನಗೆ ಏನು ಗೊತ್ತಿಲ್ಲದೆ ಹೇಗೆ ನಾನು ಪ್ರತಿಕ್ರಿಯೆ ನೀಡಲಿ ಏನ್ ಕೌಂಟರ್ ಹೇಗಾಯ್ತು, ಯಾಕಾಯ್ತು,ಯಾರು ಮಾಡಿದ್ರು, ಎನ್ ಕೌಂಟರ್ ಗೆ ಕಾರಣಗಳೇನು ಅಂತ ಗೊತ್ತಿರಬೇಕಲ್ಲ ಎಂದು ತಿಳಿಸಿದ್ದಾರೆ. 

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಡಾಕ್ಟರ್ ನೇಮಕ ವಿಚಾರ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಶ್ರೀರಾಮುಲು ಟ್ವೀಟ್ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರು ಟ್ವೀಟ್ ಮಾಡಿದ್ರೆ ಮಾಡಿಕೊಳ್ಳುತ್ತಾರೆ. ನಾನು ಅದಕ್ಕೆ ಬೇರೆ ಉತ್ತರಿಸಲು ಹೋಗಲ್ಲ ಎಂದು ತಿಳಿಸಿದ್ದಾರೆ.

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಬೈ ಎಲೆಕ್ಷನ್ ಚುನಾವಣೋತ್ತರ ಸಮೀಕ್ಷೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹರಿಯಾಣ, ಮಹಾರಾಷ್ಟ್ರದಲ್ಲಿ ಸಮೀಕ್ಷೆ ಏನಾಯ್ತು, ಎಲ್ಲವೂ ತಲೆಕೆಳಗಾಯ್ತು, ಆದ್ದರಿಂದ ನಾನು ಸಮೀಕ್ಷೆ ನಂಬಲಿಕ್ಕೆ ಹೋಗಲ್ಲ. ಡಿಸೆಂಬರ್ 9ಕ್ಕೆ ರಿಸಲ್ಟ್ ಬರುತ್ತೆ. ಜನರು ಏನು ತೀರ್ಪು ಕೊಡ್ತಾರೆ ಎಂಬುದು ಗೊತ್ತಾಗುತ್ತದೆ. ಸಮೀಕ್ಷೆಗಳೆಲ್ಲ ಸತ್ಯವಾಗಿಬಿಟ್ಟಿದ್ದಾವಾ?ಅಂದಾಜು ಮಾಡ್ತಾರಷ್ಟೇ ಎಂದು ಹೇಳಿದ್ದಾರೆ.

ಉಪಚುನಾವಣೆಯ ಬಳಿಕ ಮತ್ತೆ ನಾನೆಲ್ಲೂ ಮುಖ್ಯಮಂತ್ರಿ ಆಗ್ತೀನಿ ಅಂತ ಹೇಳಿಲ್ಲ. ಬೈ ಎಲೆಕ್ಷನ್ ಬಳಿಕ ನಮಗೆ ಮೆಜಾರಿಟಿ ಬರುತ್ತದೆ. ಇದರಿಂದ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದಷ್ಟೇ ಹೇಳಿದ್ದೀನಿ ಎಂದು ಸ್ಪಷ್ಟಪಡಿಸಿದ್ದಾರೆ. 

ಸಿದ್ದರಾಮಯ್ಯ ಖಾಯಂ ವಿಪಕ್ಷ ನಾಯಕ ಎಂದ ಸಿಎಂ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು‌ ನೀಡಿದ ಅವರು, ಯಡಿಯೂರಪ್ಪನದ್ದು ಫೂಲೀಶ್ ಆರ್ಗಿಮೆಂಟ್ ಮಾಡ್ತಾರೆ, ಅವರಿಗೆ ಕಾಮನ್ ನಾಲೆಡ್ಜ್ ಬೇಡವಾ ? ಪ್ರಜಾಪ್ರಭುತ್ವದಲ್ಲಿ ಯಾರು ಸಿಎಂ ಆಗಲಿ ವಿಪಕ್ಷ ನಾಯಕರಾಗಲಿ ಆಗಿರೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ಒಮ್ಮೆ ಅಧಿಕಾರ ‌‌ನೀಡ್ತಾರೆ‌,ಒಮ್ಮೆ ಕೆಳಗಿಳಸ್ತಾರೆ. ಹೀಗಾಗಿ ಸಿಎಂ ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಹೇಳಿದ್ದಾರೆ. 
ಸಿದ್ದರಾಮಯ್ಯ ಅಲ್ಲ ಯಾರೇ ಅದರೂ ಸಾಯೋವರೆಗೂ ಸಿಎಂ ಆಗಲಿ, ವಿಪಕ್ಷ ನಾಯಕನಾಗಿ ಆಗಿ ಆಗಲಿ ಇರೋಕಾಗಲ್ಲ ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios