ಕಾಫಿ ‘ರಾಷ್ಟ್ರೀಯ ಪಾನೀಯ’ ಘೋಷಣೆಗೆ ಸಮಾವೇಶ ನಿರ್ಣಯ

ಭಾರತೀಯ ರೈತ ಪರ ಸಂಘಟನೆಗಳ ಒಕ್ಕೂಟ (ಸಿಐಎಫ್‌ಎ-ಸಿಫಾ) ಬೆಂಬಲದೊಂದಿಗೆ ಕೊಡಗಿನ ಎಲ್ಲ ಬೆಳೆಗಾರರಿಗೆ ಲಾಭದಾಯಕ ಬೆಲೆ ಹಾಗೂ ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಬೇಕೆಂದು ಹೋರಾಟ ನಡೆಸಲಾಗುವುದು. ಎಂದು ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ತಿಳಿಸಿದ್ದಾರೆ.

Conference resolution to declare coffee rashtriya paneeya rav

ಮಡಿಕೇರಿ (ಡಿ.26) : ಭಾರತೀಯ ರೈತ ಪರ ಸಂಘಟನೆಗಳ ಒಕ್ಕೂಟ (ಸಿಐಎಫ್‌ಎ-ಸಿಫಾ) ಬೆಂಬಲದೊಂದಿಗೆ ಕೊಡಗಿನ ಎಲ್ಲ ಬೆಳೆಗಾರರಿಗೆ ಲಾಭದಾಯಕ ಬೆಲೆ ಹಾಗೂ ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಬೇಕೆಂದು ಹೋರಾಟ ನಡೆಸಲಾಗುವುದು. 2024ರ ಲೋಕಸಭಾ ಚುನಾವಣೆಯೊಳಗೆ ಈ ಬಗ್ಗೆ ಘೋಷಿಸಲು ಬೆಂಗಳೂರಿನಲ್ಲಿ ನಡೆದ ಭಾರತ ದೇಶದ ಎಲ್ಲಾ ರಾಜ್ಯಗಳ ರೈತ ಪರ ಸಂಘಟನೆಗಳ ಒಕ್ಕೂಟದ ಸಮಾವೇಶದಲ್ಲಿ ನಿರ್ಣಯ ಮಂಡಿಸಲಾಗಿದೆ ಎಂದು ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಂಚಾಲಕರಾಗಿ ಭಾಗವಹಿಸಿ ಕಾಫಿ ಬೆಳೆಗಾರರ ಸಮಸ್ಯೆ ಬಗೆ ಗಮನ ಸೆಳೆಯಲಾಗಿದೆ ಎಂದು ಅವರು ತಿಳಿಸಿದರು.

ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಕಂಟಕವಾದ ಅಸ್ಸಾಂ ಕಾರ್ಮಿಕರು..!

ಸಮಾವೇಶದಲ್ಲಿ ಸಿಫಾ ರಾಷ್ಟ್ರೀಯ ಅಧ್ಯಕ್ಷ ಮಹಾರಾಷ್ಟ್ರದ ರಘುನಾಥ್‌ ದಾದಾ ಪಾಟೀಲ…, ಸಂಚಾಲಕರಾದ ತೆಲಂಗಾಣ ರಾಜ್ಯದ ಪಿ.ಚಂಗಲ್‌ ರೆಡ್ಡಿ ಕರ್ನಾಟಕ ರಾಜ್ಯದ ಸಿಫಾ ಸಂಚಾಲಕ ಸಂಕರ ನಾರಾಯಣ ರೆಡ್ಡಿ ಹಾಗೂ ವಿವಿಧ ರಾಜ್ಯಗಳ ಸಂಚಾಲಕರು ಭಾಗವಹಿಸಿದ್ದರು.

ಕಾಫಿ ಬೆಳೆ ಉತ್ಪಾದನಾ ವೆಚ್ಚ ಬಹಳಷ್ಟುಹೆಚ್ಚಾಗಿದೆ. ದೇಶದಲ್ಲಿ ಒಟ್ಟು ಕಾಫಿ ಉತ್ಪಾದನೆ ಮಾಡುವ ವಿಸ್ತೀರ್ಣ ಹಾಗೂ ಅದಕ್ಕೆ ಅನುಸಾರ ಕಾಫಿ ಉತ್ಪಾದನೆ ಸರಾಸರಿ ತೆಗೆದುಕೊಂಡರೆ ಪ್ರತಿ ಎಕರೆಗೆ 10ರಿಂದ 15 ಚೀಲ ಕಾಫಿ ಮಾತ್ರ ಬೆಳೆಯಲಾಗುತ್ತದೆ. ಇದರಿಂದ ಪ್ರತಿ ಎಕರೆಗೆ ಉತ್ಪಾದನಾ ವೆಚ್ಚ 30ರಿಂದ 40 ಸಾವಿರ ರು. ನಷ್ಟವಾಗುತ್ತಿದೆ ಎಂದು ಗಮನ ಸೆಳೆಯಲಾಗಿದೆ ಎಂದು ರವೀಂದ್ರ ತಿಳಿಸಿದರು.

ಸಮಾವೇಶದಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಕನಿಷ್ಠ 100 ಸಂಸದರೊಂದಿಗೆ ದೆಹಲಿಗೆ ತೆರಳಿ ದೇಶದ ಇತರ ಬೆಳೆಗಾರರ ಸಮಸ್ಯೆ ಹಾಗೂ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಯನ್ನು ಸಹ ಪರಿಗಣಿಸಿ ಒತ್ತಡ ಹೇರಲಾಗುವುದು ಎಂದು ಸಿಫಾ ರಾಷ್ಟ್ರೀಯ ಅಧ್ಯಕ್ಷ ರಘುನಾಥ್‌ ದಾದಾ ಪಾಟೀಲ್‌ ಅವರು ಭರವಸೆ ನೀಡಿದ್ದಾರೆ ಎಂದು ರವೀಂದ್ರ ವಿವರಿಸಿದರು.

ದರದ ಅರ್ಧ ಭಾಗವಾದರೂ ಸಿಗಲಿ:

ಕಾಫಿ ಕೆಫೆಗಳಲ್ಲಿ ಒಂದು ಕೆ.ಜಿ. ಕಾಫಿ ಬೀಜಕ್ಕೆ 1520 ರು. ಬೆಲೆ ಇದ್ದು, ಇದರ ಪ್ರಕಾರ ಒಂದು ಚೀಲ ಚೆರಿ ಕಾಫಿ ಬೆಳೆಗೆ 38000 ರು. ಬೆಲೆ ದೊರೆಯಬೇಕಾಗಿದೆ. ಆದರೆ ಕಾಫಿ ಬೆಳೆಯುವ ರೈತನಿಗೆ ಕೇವಲ 3500 ರಿಂದ 4000 ರು. ಪ್ರಸ್ತುತ ಸಿಗುತ್ತಿದೆ. ಕಾಫಿ ಬೆಳೆ ಬೆಳೆಯುವ ಬೆಳೆಗಾರನಿಗೆ ಕಾಫಿ ಕೆಫೆಗಳಲ್ಲಿ ದೊರೆಯುವ ದರದ ಅರ್ಧ ಭಾಗವಾದರೂ ಸಿಗಬೇಕು. ಇದಕ್ಕೆ ಸಿಫಾ ಬೆಂಬಲ ನೀಡಬೇಕೆಂದು ಕೋರಲಾಗಿದೆ. ಈ ಸಂದರ್ಭ ಕೊಡಗಿನ ಇತರ ಬೆಳೆ ಕಾಳುಮೆಣಸುಗೆ ವಿದೇಶದಿಂದ ಆಮದಾಗುವ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಮಿಶ್ರ ಮಾಡಿ ದೇಶೀಯ ಮಾರುಕಟ್ಟೆಬಿಡುಗಡೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ನಿರ್ಣಯ ಕೈಗೊಳ್ಳಲಾಗಿದೆ. ಅಡಕೆ ಬೆಳೆಗೆ ಕಪ್ಪು ಚುಕ್ಕೆ ಮತ್ತು ಹಳದಿರೋಗ ನಿಯಂತ್ರಿಸಲು ಸರ್ಕಾರ ತಕ್ಷಣ ಕೃಷಿ ತಜ್ಞರ ತಂಡ ನೇಮಿಸಿ ಅದಕ್ಕೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ರವೀಂದ್ರ ತಿಳಿಸಿದರು.

ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನದ ಹೋರಾಟದ ಫಲವಾಗಿ ದಕ್ಷಿಣ ಭಾರತದಲ್ಲಿ ಸಂಚರಿಸುವ ರೈಲುಗಳಲ್ಲಿ ಕಾಫಿಯನ್ನು ವಿತರಿಸಲಾಗುತ್ತಿತ್ತು. ಅನಂತರ ಅದು ಸ್ಥಗಿತವಾಯಿತು. ಮತ್ತೆ ಕಾಫಿಯನ್ನು ಪುನರ್‌ ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಲಾಗಿದೆ ಎಂದರು.

ಚಹಾ ರಾಷ್ಟ್ರೀಯ ಪಾನೀಯವಾಗಿ ಘೋಷಿಸಲು ಸಂಸತ್ತಿನಲ್ಲಿ ಅಸ್ಸಾಂ ಸಂಸದರ ಒತ್ತಾಯ

ಕೆಜಿಎಫ್‌ ಅಧ್ಯಕ್ಷ ಡಾ.ಎಚ್‌.ಡಿ. ಮೋಹನ್‌ ಕುಮಾರ್‌, ಹಾಸನ ಬೆಳೆಗಾರರ ಒಕ್ಕೂಟ ಅಧ್ಯಕ್ಷ ಕೆ.ಎನ್‌. ಸುಬ್ರಮಣಿ, ರಿಸಚ್‌ರ್‍ ¶ೌಂಡೇಶನ್‌ ಅಧ್ಯಕ್ಷರಾದ ಮುರುಳಿಧರ್‌, ಭಾಜಪ ರಾಷ್ಟ್ರೀಯ ಕೃಷಿ ಮೋರ್ಚ ಸದಸ್ಯರಾದ ಕೆ. ವೇಣುಗೋಪಾಲ…, ಕೊಡಗಿನ ಮಾಜಿ ಭಾಜಪ ಪ್ರಭಾರಿಗಳಾದ ಶಂಕರನಾರಾಯಣ ರೆಡ್ಡಿ, ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಮಿತಿಯ ಕಾರ್ಯದರ್ಶಿ ಮತ್ರಂಡ ಪ್ರವೀಣ್‌ ಕುಶಾಲಪ್ಪ ಹಾಗೂ ಭಾರತೀಯ ಕಿಸಾನ್‌ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios