Asianet Suvarna News Asianet Suvarna News

ಚಂದ್ರು ಸಾವಿನ ತನಿಖೆ ವೈಫಲ್ಯಕ್ಕೆ ಗರಂ ಆಗಿದ್ದೆ; ರೇಣುಕಾಚಾರ್ಯ

  • ಚಂದ್ರು ಸಾವಿನ ತನಿಖೆ ವೈಫಲ್ಯಕ್ಕೆ ಗರಂ ಆಗಿದ್ದೆ
  •  ಪೊಲೀಸರಿಂದ ಸಮರ್ಪಕವಾಗಿ ತನಿಖೆ ನಡೆಯುತ್ತಿಲ್ಲ: ಶಾಸಕ ರೇಣುಕಾಚಾರ್ಯ
  • 2 ದಿನದಲ್ಲಿ ವರದಿ ತರಿಸಿ, ಬಂದು ಮಾತನಾಡುವೆ ಸಿಎಂ ಭರವಸೆ
Chandru death probe failed says Renukacharya davanagere rav
Author
First Published Nov 7, 2022, 12:56 PM IST

ದಾವಣಗೆರೆ (ನ.7) : ನನ್ನ ಮಗ ಚಂದ್ರು ಸಾವಿನ ಪ್ರಕರಣದ ತನಿಖೆ ವಿಚಾರದಲ್ಲಿ ಪೊಲೀಸ್‌ ಇಲಾಖೆ ವೈಫಲ್ಯದ ವಿರುದ್ಧ ನಾನು ಗರಂ ಆಗಿದ್ದು, ನಮ್ಮ ಇನ್ನೂ ಕೆಲವು ಪ್ರಶ್ನೆಗಳಿಗೆ ಪೊಲೀಸರಿಂದ ಉತ್ತರವೇ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಇಲಾಖೆ ಕಾರ್ಯವೈಖರಿಗೆ ಮತ್ತೆ ತಮ್ಮ ಬೇಸರ ಹೊರ ಹಾಕಿದ್ದಾರೆ.

ಚಂದ್ರು ಸಾವಿನ ಪ್ರಕರಣ: ಪೊಲೀಸರ ವಿರುದ್ಧ ರೇಣುಕಾಚಾರ್ಯ ಕಿಡಿ

ಹೊನ್ನಾಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊನ್ನಾಳಿ ಪೊಲೀಸ್‌ ವಸತಿ ಗೃಹಗಳ ಆವರಣದಲ್ಲಿ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ವೀಕ್ಷಿಸಲು ನಾನು ಹೋಗಿದ್ದ ವೇಳೆ ಅವಕಾಶ ನೀಡಲಿಲ್ಲ. ಅಲ್ಲದೇ, ಚಂದ್ರು ಸಾವಿನ ಪ್ರಕರಣದ ತನಿಖೆಯೂ ಸಮರ್ಪಕವಾಗಿ ನಡೆಯುತ್ತಿಲ್ಲವೆಂಬ ಬೇಸರ ಹೊರ ಹಾಕಿದ್ದೆ ಎಂದರು.

ಪೊಲೀಸರ ಕಾರ್ಯ ವೈಖರಿಗೆ ಬೇಸರ:

ಪೊಲೀಸರ ಮೇಲೆ ನಾನು ಗರಂ ಆಗಿದ್ದು, ಇಲಾಖೆ ತನಿಖೆ ವೈಫಲ್ಯಕ್ಕೆ. ತುಂಗಾ ನಾಲೆಗೆ ಕಾರು ಬಿದ್ದ ರೀತಿ ನೋಡಿದರೆ, ಚಂದ್ರು ವ್ಯವಸ್ಥಿತವಾಗಿ ಕೊಲೆಯಾಗಿರುವ ಅನುಮಾನಗಳಿವೆ. ಆದರೆ, ಪೊಲೀಸರು ಅದನ್ನು ಆರಂಭದಿಂದಲೂ ಅಪಘಾತ ಎಂಬಂತೆ ಹೇಳಿಕೆ ನೀಡುತ್ತಿದ್ದಾರೆ. ತನಿಖೆ ವಿಚಾರದಲ್ಲೂ ಪೊಲೀಸರ ಕಾರ್ಯ ವೈಖರಿಗೆ ನಮಗೆ ಸಮಾಧಾನ ತಂದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ರಾತ್ರಿ ನನಗೆ ಕರೆ ಮಾಡಿ, ಮಾತನಾಡಿದರು. ಚಂದ್ರು ಪ್ರಕರಣದ ವರದಿ ತರಿಸಿ, ಇನ್ನು 2-3 ದಿನಗಳಲ್ಲಿ ನಾನೇ ಬಂದು ಮಾತನಾಡುತ್ತೇನೆಂಬುದಾಗಿ ಹೇಳಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಪಾರದರ್ಶಕವಾಗಿ ತನಿಖೆ ನಡೆಸುವ ಭರಸವೆ ನೀಡಿದ್ದಾರೆ ಎಂದು ತಿಳಿಸಿದರು.

ನಾನು ಯಾವುದೇ ಮಾಧ್ಯಮದವರಿಗೆ ಹಣ ಕೊಟ್ಟು ಕರೆಸಿಕೊಂಡಿಲ್ಲ. ನನ್ನ ಮಗನ ಸಾವಿನಲ್ಲಿ ರಾಜಕಾರಣ ಮಾಡುವವನು ನಾನಲ್ಲ. ಅದರ ಅಗತ್ಯವೂ ನನಗೆ ಇಲ್ಲ. ನಾನು ಎಷ್ಟೋ ಸಾವು, ನೋವುಗಳನ್ನು ನೋಡಿದ್ದೇನೆ. ನನ್ನ ಮಗನ ಸಾವಾದರೂ ಅಷ್ಟೇ, ಬೇರೆ ಯಾವುದೇ ಸಾವದರೂ ಅಷ್ಟೇ. ಚಂದ್ರು ಪ್ರಕರಣ ಪಾರದರ್ಶಕ, ನಿಷ್ಪಕ್ಷಪಾತವಾಗಿ ನಡೆಯಬೇಕು.

ಎಂ.ಪಿ.ರೇಣುಕಾಚಾರ್ಯ, ಶಾಸಕ

ಚಂದ್ರು ನಿಗೂಢ ಸಾವು: ಇದು ಕೊಲೆಯೋ ಅಥವಾ ಅಪಘಾತವೋ?

ಸಮಾರಂಭವೊಂದರಲ್ಲಿ ಪಾಲ್ಗೊಂಡ ರೇಣುಕಾಚಾರ್ಯ

ದಾವಣಗೆರೆ: ಪುತ್ರ ಶೋಕದಿಂದ ಬಳಲಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಕ್ಷೇತ್ರದ ಹಿತೈಷಿಗಳು, ಜನರ ಸಲಹೆಗೆ ಕಿವಿಗೊಟ್ಟು ಭಾನುವಾರ ಹೊನ್ನಾಳಿ ತಾಲೂಕಿನ ಸಮಾರಂಭವೊಂದರಲ್ಲಿ ಪಾಲ್ಗೊಂಡರು. ಹೊನ್ನಾಳಿ ತಾಲೂಕಿನ ಟಿ.ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ರಣದುರ್ಗಮ್ಮ ಹಾಗೂ ಶ್ರೀ ಬೆಳಗುತ್ತಿ ದುರ್ಗಮ್ಮ ದೇವತೆಗಳ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ದೇವಾಲಯಗಳ ಉದ್ಘಾಟನಾ ಧರ್ಮಸಭೆ ಒಡೆಯರ್‌ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು. ಸಮಾರಂಭದಲ್ಲಿ ರೇಣುಕಾಚಾರ್ಯ ಭಾಗವಹಿಸಿದ್ದರು. ರೇಣುಕಾಚಾರ್ಯ ತಮ್ಮ ರಮೇಶ್‌ನ ಪುತ್ರ ದಿವಂಗತ ಚಂದ್ರು ಸ್ಮರಣಾರ್ಥ 2 ನಿಮಿಷ ಮೌನ ಆಚರಿಸಲಾಯಿತು. ಮಹಿಳೆಯರು, ವೃದ್ಧೆಯರು, ಗ್ರಾಮಸ್ಥರು ಚಂದ್ರು ಸಾವಿಗೆ ಸಂತಾಪ ಸೂಚಿಸಿ, ಶಾಸಕ ರೇಣುಕಾಚಾರ್ಯಗೆ ಸಮಾಧಾನಿಸುತ್ತಿದ್ದದ್ದು ಕಂಡು ಬಂದಿತು.

Follow Us:
Download App:
  • android
  • ios