ಚಾಮರಾಜನಗರ ಎಪಿಎಂಸಿ ಅಧಿಕಾರ ಹಿಡಿಯಲು ಕೈ- ಕಮಲ ಟಫ್ ಫೈಟ್!

*ಎಪಿಎಂಸಿ ಅಧಿಕಾರ ಹಿಡಿಯಲು ಕೈ,ಕಮಲ ಫೈಟ್ 
*ಎಪಿಎಂಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಬಿಜೆಪಿ ಶಾಸಕ. 
*ಮೊದಲ ಬಾರಿಗೆ ಎಪಿಎಂಸಿ ಯಲ್ಲಿ ಕೇಸರಿ ಬಾವುಟ ಹಾರಿಸಲು ರಣತಂತ್ರ. 
*ಬಿಜೆಪಿ ಆಡಳಿತದ ವೈಫಲ್ಯದಿಂದ ಮತ್ತೆ ಅಧಿಕಾರ ಹಿಡಿಯುತ್ತೇವೆ: ಕಾಂಗ್ರೆಸ್ 
 

Chamarajanagar APMC Elections 2022 Tough Fight between Congress and BJP mnj

ವರದಿ: ಪುಟ್ಟರಾಜು. ಆರ್.ಸಿ. ,  ಏಷಿಯಾನೆಟ್ ಸುವರ್ಣ ನ್ಯೂಸ್,  ಚಾಮರಾಜನಗರ

ಚಾಮರಾಜನಗರ (ಏ. 12): ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ಎಪಿಎಂಸಿ ಅಧಿಕಾರ (APMC Elections) ಹಿಡಿಯಲು ಕೈ,ಕಮಲ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸ್ತಿದ್ದಾರೆ.ಅದರಲ್ಲೂ ಗುಂಡ್ಲುಪೇಟೆ ಎಪಿಎಂಸಿ ತೆಕ್ಕೆಗೆ ತೆಗೆದುಕೊಳ್ಳಲು ಕೈ,ಕಮಲ ಕಲಿಗಳು (BJP Vs Congress) ರಣತಂತ್ರ ಹೆಣೆಯುತ್ತಿದ್ದಾರೆ.ಇಲ್ಲಿಯವರೆಗೂ ಗುಂಡ್ಲುಪೇಟೆ ಎಪಿಎಂಸಿಯಲ್ಲಿ ದಿವಂಗತ ಸಚಿವ ಮಹಾದೇವ ಪ್ರಸಾದ್ ಪಾರುಪತ್ಯಯಿತ್ತು.ಆ ಮೂಲಕ ಕಾಂಗ್ರೆಸ್ ಅನೇಕ ಬಾರಿ ಅಧಿಕಾರ ಹಿಡಿದಿದೆ. 

ಬಿಜೆಪಿ ಒಂದು ಬಾರಿಯೂ ಕೂಡ ಅಧಿಕಾರ ಹಿಡಿಯಲಿಲ್ಲ.ಈ ಹಿನ್ನಲೆ ಕ್ಷೇತ್ರದ ಬಿಜೆಪಿ ಶಾಸಕ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಕ್ಲಿನ್ ಸ್ವೀಪ್ ಮಾಡೋ ವಿಶ್ವಾಸದಲ್ಲಿ ಬೆಂಬಲಿತರ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಜೆಪಿ ಭರ್ಜರಿ ಸಿದ್ಧತೆ: ಚಾಮರಾಜನಗರ ಜಿಲ್ಲೆಯಲ್ಲಿ ಎಪಿಎಂಸಿ ಚುನಾವಣೆ ರಂಗೇರಿದೆ. ಇದೇ ತಿಂಗಳ 17 ರಂದು  ಚುನಾವಣೆ ನಡೆಯಲಿದ್ದು ಪಕ್ಷದ ಹಿರಿಯ ನಾಯಕರೇ  ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಗುಂಡ್ಲುಪೇಟೆ ಎಪಿಎಂಸಿಯನ್ನು ತಮ್ಮ ತೆಕ್ಕೆಗೆ ಪಡೆಯಲು ಕೈ,ಕಮಲ ನಡುವೆ ಫೈಟ್ ಶುರುವಾಗಿದ್ದು ,12 ಸ್ಥಾನಗಳನ್ನು ಹೊಂದಿರುವ ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಇದುವರೆಗೆ ಒಂದು ಬಾರಿಯೂ  ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ.

ಇದನ್ನೂ ಓದಿ: ಕೋರ್ಟ್‌ ಅಂಗಳಕ್ಕೆ ಚಾಮರಾಜನಗರದ ಉಮ್ಮತ್ತೂರು ಉರುಕಾತೇಶ್ವರಿ ದೇವಸ್ಥಾನ ವಿವಾದ

ಈ ಬಾರಿ ಎಪಿಎಂಸಿಯಲ್ಲಿ ವಿಜಯದ ಪತಾಕೆ ಹಾರಿಸಲು ಪಣ ತೊಟ್ಟಿರುವ ಬಿಜೆಪಿ ಶಾಸಕ ನಿರಂಜನಕುಮಾರ್  ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆಯಿದ್ದು  ಕ್ಲೀನ್ ಸ್ವೀಪ್ ಮಾಡುವುದಾಗಿ  ಬಿಜೆಪಿ ಶಾಸಕ ನಿರಂಜನ್ ಕುಮಾರ್  ಹೇಳುತ್ತಿದ್ದಾರೆ.

ವಿಧಾನ ಸಭಾ ಚುನಾವಣೆ ದಿಕ್ಸೂಚಿ: ಇನ್ನೊಂದೆಡೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ  ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ದಿವಂಗತ ಸಚಿವ ಮಹದೇವಪ್ರಸಾದ್ ಪುತ್ರ ಗಣೇಶ್ ಪ್ರಸಾದ್ ಎಪಿಎಂಸಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಸಲು ಖುದ್ದು ಪ್ರಚಾರ ನಡೆಸಿದ್ದಾರೆ. 

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು  ನಡೆಯದ ಹಿನ್ನಲೆಯಲ್ಲಿ ಎಪಿಎಂಸಿ ಚುನಾವಣೆಯನ್ನೇ ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಸೂಚಿ ಎಂಬ ರೀತಿಯಲ್ಲಿ ಕೈ,ಕಮಲ‌ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ  ಪರ ಮತಯಾಚನೆ ಮಾಡುತ್ತಿರುವ ಗಣೇಶ್ ಪ್ರಸಾದ್ ಕೃಷಿ ತಿದ್ದುಪಡಿ ಕಾಯ್ದೆ,ಆಡಳಿತ ಪಕ್ಷದ ರೈತ ವಿರೋಧಿ ನಡೆಯಿಂದ ಕಾಂಗ್ರೆಸ್ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಚಾಮರಾಜನಗರದ 35ಕ್ಕೂ ಹೆಚ್ಚು ಗ್ರಾ.ಪಂ.ವ್ಯಾಪ್ತಿಯಲ್ಲಿ ಕರೆಂಟ್ ಕಟ್, ಕತ್ತಲಲ್ಲಿ ಯುಗಾದಿ ಹಬ್ಬ

ಈ ಚುನಾವಣೆಯನ್ನೇ ಮುಂದಿನ ವಿಧಾನ ಸಭಾ ಚುನಾವಣೆಯಂತೆ ಬಿಂಬಿಸುತ್ತಿದ್ದು,ಜಿದ್ದಿಗೆ ಬಿದ್ದವರಂತೆ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ.ಈ ಚುನಾವಣೆಯಲ್ಲಾದ್ರೂ ಎಪಿಎಂಸಿಯಲ್ಲಿ ಕಮಲ ಅರಳುತ್ತಾ? ಅಥವಾ ಕೈ ವಶವಾಗುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ...

Latest Videos
Follow Us:
Download App:
  • android
  • ios