ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯ

ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

BSP Protest Against Uttar Pradesh Hatras Rape Case snr

ರಾಮ​ನ​ಗರ (ಅ.04): ಉತ್ತರ ಪ್ರದೇ​ಶದ ಹಾಥ್ರಸ್‌ ನಲ್ಲಿ ನಡೆ​ದಿ​ರುವ ದಲಿತ ಯುವತಿ ಮೇಲಿನ ದೌರ್ಜನ್ಯ ಖಂಡಿಸಿ ಬಹು​ಜನ ಸಮಾಜ ಪಕ್ಷ (ಬಿ​ಎ​ಸ್ಪಿ​)ದ ಕಾರ್ಯ​ಕ​ರ್ತರು ನಗ​ರ​ದಲ್ಲಿ ಶನಿ​ವಾರ ಪ್ರತಿ​ಭ​ಟನಾ ಧರಣಿ ನಡೆ​ಸಿ​ದರು.

ನಗ​ರದ ಜಿಲ್ಲಾ ಕಚೇ​ರಿ​ಗಳ ಸಂಕೀ​ರ್ಣದ ಎದುರು ಧರಣಿ ನಡೆ​ಸಿದ ಕಾರ್ಯ​ಕ​ರ್ತರು ಬಿಜೆಪಿ ನೇತೃ​ತ್ವದ ಕೇಂದ್ರ ಹಾಗೂ ಉತ್ತರ ಪ್ರದೇ​ಶ ಸರ್ಕಾ​ರ, ಪ್ರಧಾನಿ ಮೋದಿ , ಅಲ್ಲಿನ ಸಿಎಂ ಯೋಗಿ ಆದಿ​ತ್ಯ​ನಾಥ್‌ ವಿರುದ್ಧ ಧಿಕ್ಕಾ​ರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ಈ ವೇಳೆ ಮಾತ​ನಾ​ಡಿದ ಬಿಎಸ್ಪಿ ರಾಜ್ಯ ಕಾರ್ಯ​ದರ್ಶಿ ಎಂ.ನಾ​ಗೇಶ್‌ ,ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗಳು ಅಸ್ತಿ​ತ್ವಕ್ಕ ಬಂದ ನಂತರ ದಲಿ​ತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾ​ಚಾರ ಪ್ರಕ​ರ​ಣ​ಗಳು ಹೆಚ್ಚಾ​ಗಿವೆ ಎಂದು ಆರೋ​ಪಿ​ಸಿ​ದರು.

ಪ್ರತಿಭಟನೆಗೆ ಮಣಿದ ಯೋಗಿ, ಹತ್ರಾಸ್ ಅತ್ಯಾಚಾರ ಕೇಸ್‌ ಸಿಬಿಐಗೆ! ...

ಕುಟುಂಬಕ್ಕೆ ತಿಳಿಸದೆ ಅಂತ್ಯಸಂಸ್ಕಾರ

ಉತ್ತರ ಪ್ರದೇ​ಶ​ದಲ್ಲಿ ದಲಿತ ಯುವ​ತಿ​ಯೊ​ಬ್ಬಳ ಮೇಲೆ ಸಾಮೂ​ಹಿಕ ಅತ್ಯಾ​ಚಾರ ಪ್ರಕಣ ನಡೆ​ದಿದೆ. ಅಲ್ಲಿನ ಬಿಜೆಪಿ ಸರ್ಕಾರ ಹೆಣ್ಣು ಮಕ್ಕಳ ಮೇಲಿನ ದೌರ್ಜ​ನ್ಯ​ವನ್ನು ತಡೆ​ಯಲು ವಿಫ​ಲ​ವಾ​ಗಿವೆ. ಮೃತ​ಪ​ಟ್ಟಿ​ರುವ ಸಂತ್ರಸ್ತ ಯುವ​ತಿಯ ಶವ​ವನ್ನು ಗೌರ​ವ​ಯು​ತ​ವಾಗಿ ಸಂಸ್ಕಾರ ಮಾಡಲು ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿ​ತ್ಯ​ನಾ​ಥರ ಸರ್ಕಾರ ಅವ​ಕಾಶ ಮಾಡಿ​ಕೊ​ಡ​ಲಿಲ್ಲ. ಶವ​ವನ್ನು ಕುಟುಂಬ​ದ​ವ​ರಿಗೆ ತಿಳಿ​ಯ​ದಂತೆ ಸುಟ್ಟು​ಹಾಕಿ ಸಾಕ್ಷ್ಯನಾಶ ಪಡಿ​ಸಿ​ದ್ದಾರೆ. ಅಲ್ಲಿನ ಸರ್ಕರ ಪರೋ​ಕ್ಷ​ವಾಗಿ ಅಪ​ರಾ​ಧಿ​ಗ​ಳಿಗೆ ರಕ್ಷಣೆ ನೀಡು​ತ್ತಿದೆ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ನ್ಯಾಯಾಂಗ ತನಿಖೆಗೆ ಒಪ್ಪಿಸಿ

ಉತ್ತರ ಪ್ರದೇ​ಶ​ದಲ್ಲಿ ಪದೇ ಪದೇ ಇಂತಹ ಘಟ​ನೆ​ಗಳು ಮರು​ಕ​ಳಿ​ಸು​ತ್ತಿವೆ. ಆ ರಾಜ್ಯ​ದಲ್ಲಿ ಕಾನೂನು, ಸುವ್ಯ​ವಸ್ಥೆ ವಿಫ​ಲ​ವಾ​ಗಿವೆ, ಹೀಗಾಗಿ ಉತ್ತರ ಪ್ರದೇ​ಶದ ರಾಜ್ಯ​ಪಾ​ಲರು ಮತ್ತು ರಾಷ್ಟ್ರ​ಪ​ತಿ​ಗಳು ತಕ್ಷಣ ಯೋಗಿ ಆದಿ​ತ್ಯ​ನಾ​ಥರ ಸರ್ಕಾ​ರ​ವನ್ನು ವಜಾ ಮಾಡ​ಬೇಕು. ಸಾಕ್ಷ​ನಾಶ ಮಾಡಿ​ರುವ ಜಿಲ್ಲಾ​ಡ​ಳಿತ ಮತ್ತು ಪೊಲೀ​ಸ​ರನ್ನು ಹೊಣೆ​ಯಾ​ಗಿಸಿ ಸಂಬಂಧಿ​ಸಿದ ಅಧಿ​ಕಾ​ರಿ​ಗ​ಳನ್ನು ತಕ್ಷಣ ಸೇವೆ​ಯಿಂದ ವಜಾ ಮಾಡಿ, ಬಂಧಿಸಿಸಬೇಕು. ಪ್ರಕ​ರ​ಣ​ವನ್ನು ನ್ಯಾಯಾಂಗ ತನಿ​ಖೆಗೆ ಒಪ್ಪಿ​ಸ​ಬೇಕು. ಸಂತ್ರ​ಸ್ಥೆಯ ಕುಟುಂಬಕ್ಕೆ ಶೀಘ್ರ ನ್ಯಾಯ ದೊರ​ಕಿ​ಸಿ​ಕೊ​ಡ​ಬೇಕು ಎಂದು ಒತ್ತಾ​ಯಿ​ಸಿ​ದರು.

ಪ್ರತಿ​ಭ​ಟ​ನೆ​ಯಲ್ಲಿ ಬಿಎಸ್ಪಿ ಜಿಲ್ಲಾ​ಧ್ಯಕ್ಷ ನೀಲಿ​ರ​ಮೇಶ್‌, ಜಿಲ್ಲಾ ಉಪಾ​ಧ್ಯಕ್ಷ ಅಬ್ದುಲ್‌ ರಹೀಂ (ಬಾಬು), ಜಿಲ್ಲಾ ಖಜಾಂಚಿ ಸುರೇಶ್‌, ಜಿಲ್ಲಾ ಕಾರ್ಯ​ದ​ರ್ಶಿ​ಗ​ಳಾದ ಮುರು​ಗೇಶ್‌, ಬಾನ​ಮ​ದೂರು ಕುಮಾರ್‌,

ಕಾರ್ಯ​ಕಾರಿ ಸಮಿತಿ ಸದ​ಸ್ಯ ವೆಂಕ​ಟಾ​ಚ​ಲ, ರಾಮ​ನ​ಗರ ತಾಲೂಕು ಘಟ​ಕದ ಅಧ್ಯಕ್ಷ ಸ್ವಾಮಿ, ಚನ್ನ​ಪ​ಟ್ಟಣ ತಾಲೂಕು ಘಟ​ಕದ ಅಧ್ಯಕ್ಷ ಮಹ​ದೇವ, ಮಾಗಡಿ ತಾಲೂಕು ಘಟ​ಕದ ಅಧ್ಯಕ್ಷ ರಾಮಣ್ಣ ಮುಂತಾ​ದ​ವರು ಭಾಗ​ವ​ಹಿ​ಸಿ​ದ್ದರು.

Latest Videos
Follow Us:
Download App:
  • android
  • ios