ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆಗಳು; ಸೇತುವೆ ಇಲ್ಲದೆ ಹತ್ತಾರು ಹಳ್ಳಿಗಳ ಪರದಾಟ!
ಸೇತುವೆಗಳು ಹತ್ತಾರು ಹಳ್ಳಿಗಳ ಜನರಿಗೆ ಆಧಾರವಾಗಿದ್ದವು. ಆ ಸೇತುವೆಗಳ ಮೂಲಕವೇ ಹಳ್ಳಿಯ ಜನರು, ನಗರ ಪ್ರದೇಶಕ್ಕೆ ಕೂಡ ಹೋಗಬೇಕಿತ್ತು. ಆದರೆ ಕಳೆದ ವರ್ಷ ಸುರಿದ ಭಾರಿ ಮಳೆಗೆ ಆ ಸೇತುವೆಗಳು ಕೊಚ್ಚಿ ಹೋಗಿತ್ತು. ಸರ್ಕಾರ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆಯನ್ನ ಸಹ ಕೊಚ್ಚಿ ಹೋಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್,ರಾಮನಗರ
ರಾಮನಗರ (ಆ.26) ಆ ಸೇತುವೆಗಳು ಹತ್ತಾರು ಹಳ್ಳಿಗಳ ಜನರಿಗೆ ಆಧಾರವಾಗಿದ್ದವು. ಆ ಸೇತುವೆಗಳ ಮೂಲಕವೇ ಹಳ್ಳಿಯ ಜನರು, ನಗರ ಪ್ರದೇಶಕ್ಕೆ ಕೂಡ ಬರಬೇಕು. ಆದರೆ ಕಳೆದ ವರ್ಷ ಸುರಿದ ಭಾರಿ ಮಳೆಗೆ ಆ ಸೇತುವೆಗಳು ಕೊಚ್ಚಿ ಹೋಗಿದ್ದವು. ಹೀಗಾಗಿ ತಾತ್ಕಾಲಿಕ ಸೇತುವೆಯನ್ನ ಸಹಾ ನಿರ್ಮಾಣ ಮಾಡಲಾಗಿತ್ತು. ಆದರೆ ಈ ಬಾರಿ, ಕಳೆದು 2 ತಿಂಗಳ ಹಿಂದೆ ಸುರಿದ ಮಳೆಗೆ, ಆ ತಾತ್ಕಾಲಿಕ ಸೇತುವೆಗಳು ಸಹ ಕೊಚ್ಚಿ ಹೋಗಿವೆ. ಹೀಗಾಗಿ ಸೇತುವೆ ಇಲ್ಲದೆ ಹತ್ತಾರು ಹಳ್ಳಿಯ ಜನರು ದಿನನಿತ್ಯ ಪರದಾಡುವಂತೆ ಆಗಿದೆ.
ರಾಮನಗರ ಜಿಲ್ಲೆಗೆ ಈಗ ಹದಿನಾರರ ಹರೆಯ ನಿರೀಕ್ಷೆಯಷ್ಟು ಆಗದ ಅಭಿವೃದ್ದಿ
ಮಳೆಯ ಅವಾಂತರಕ್ಕೆ ಸಂಪರ್ಕ ಸೇತುವೆ ಕೊಚ್ಚಿ ಹೋಗಿ ಹತ್ತಾರು ಹಳ್ಳಿಯ ಜನರು ಇದೀಗ ಪರದಾಡುವಂತೆ ಆಗಿದೆ. ಅಂದಹಾಗೆ ರಾಮನಗರ(Ramanagar) ತಾಲೂಕಿನ ಕೂಟಗಲ್(Kootgal) ಹೋಬಳಿಯ ಮೆಳೇಹಳ್ಳಿ(Malehalli) ಹಾಗೂ ಜೋಗಿದೊಡ್ಡಿ(Jogidoddi) ಗ್ರಾಮದ ಬಳಿ ಹಳ್ಳಕ್ಕೆ ನಿರ್ಮಾಣ ಮಾಡಿದ್ದ ಸೇತುವೆ, ಕಳೆದ ವರ್ಷ ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದ್ದವು. ಹೀಗಾಗಿ ಮೆಳೇಹಳ್ಳಿಗ್ರಾಮದ ಬಳಿ ಸುಮಾರು 18 ಲಕ್ಷ ರೂ ವೆಚ್ಚದಲ್ಲಿ ಹಾಗೂ ಜೋಗಿದೊಡ್ಡಿ ಗ್ರಾಮದ ಬಳಿ ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ತಾತ್ಕಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದ್ರೆ ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಆ ಎರಡು ತಾತ್ಕಲಿಕ ಸೇತುವೆಗಳು ಸಹ ಕೊಚ್ಚಿ ಹೋಗಿವೆ.
ಹೀಗಾಗಿ ಶಾಶ್ವತ ಹಾಗೂ ತಾತ್ಕಾಲಿಕ ಸೇತುವೆಗಳು ಇಲ್ಲದೆ ಗ್ರಾಮಗಳಿಂದ ನಗರ ಪ್ರದೇಶಕ್ಕೆ ಬರಲು ಹತ್ತಾರು ಹಳ್ಳಿಯ ಗ್ರಾಮಸ್ಥರು ಪರದಾಡುವಂತೆ ಆಗಿದೆ. ಸುಮಾರು 10 ರಿಂದ 15 ಕಿಲೋ ಮೀಟರ್ ಸುತ್ತಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಳೆದ ಬಾರಿ ಏನೋ ತಾತ್ಕಲಿಕ ಸೇತುವೆ ನಿರ್ಮಾಣ ಮಾಡಿಕೊಟ್ಟಿದ್ದರು. ಅದರ ಮೇಲೆಯೇ ಹಳ್ಳಿ ಜನ ತಿರುಗಾಟ ನಡೆಸುತ್ತಿದ್ದರು. ಆದರೆ ಈ ಬಾರಿ ತಾತ್ಕಲಿಕ ಸೇತುವೆ ಸಹಾ ಕೊಚ್ಚಿ ಹೋಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ತಾತ್ಕಲಿಕ ಸೇತುವೆ ಆಗಲಿ ಅಥವಾ ಶಾಶ್ವತ ಸೇತುವೆ ಆಗಲಿ ನಿರ್ಮಾಣ ಮಾಡಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೂ ಕೂಡ ಕಾರಣವಾಗಿದೆ.
ಅಂದಹಾಗೆ ರಾಮನಗರ ತಾಲೂಕಿನ ಮೆಳೇಹಳ್ಳಿ ಹಾಗೂ ಜೋಗಿದೊಡ್ಡಿ ಸೇತುವೆಗಳ ಮೂಲಕ ಅಳ್ಳಿಮಾರನದೊಡ್ಡಿ, ಮಾರೇಗೌಡನದೊಡ್ಡಿ, ಹುಣಸೇದೊಡ್ಡಿ, ಅಂಕನಹಳ್ಳಿ, ತಡಿಕವಾಗಿಲು, ಜಾಲಮಂಗಲ, ಅಜ್ಜನಹಳ್ಳಿ, ಹುಣಸೆದೊಡ್ಡಿ, ಸೇರಿದಂತೆ ಹಲವು ಗ್ರಾಮಗಳ ಜನರು ಸಂಚರಿಸುತ್ತಾರೆ. ಇದೀಗ ಎರಡು ಸೇತುವೆಗಳು ಇಲ್ಲದೆ ಇರುವುದರಿಂದ ಸುಮಾರು 10 ಕಿಲೋ ಮೀಟರ್ ಬಳಸಿಕೊಂಡು ಗುಂಗರಹಳ್ಳಿ ಸೇತುವೆ ಮೇಲೆ ಬರಬೇಕಿದೆ. ಇನ್ನು ಪ್ರತಿನಿತ್ಯ ಶಾಲೆ, ಗಾರ್ಮೆಂಟ್ಸ್ ಸೇರಿದಂತೆ ಇತರೆ ಕೆಲಸಗಳಿಗೆ ಹೋಗುವ ಜನರು, ಶಾಲಾ ಮಕ್ಕಳು ಕೂಡ ಪರದಾಡುವಂತೆ ಆಗಿದೆ.ಅಲ್ಲದೆ ಆಸ್ಪತ್ರೆಗೆ ಹೋಗಬೇಕು ಅಂದರೆ ರೋಗಿಗಳ ಸಹ ಸುತ್ತಿಕೊಂಡು ಬರುವ ಪರಿಸ್ಥಿತಿ ಇದೆ. ಹೀಗಾಗಿ ಶೀಘ್ರವೇ ಶಾಶ್ವತ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ರೈತರಿಗೆ ಹಾವಳಿ ನೀಡ್ತಿದ್ದ ಕಾಡಾನೆ ಕೊನೆಗೂ ಸೆರೆ, ಕುತೂಹಲದಿಂದ ನೋಡಲು ಮುಗಿಬಿದ್ದ ಜನ
ಒಟ್ಟಾರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಇಲ್ಲದೆ ಹತ್ತಾರು ಹಳ್ಳಿಯ ಜನರು ಪರದಾಡುವಂತೆ ಆಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮವಹಿಸಿ ಸೇತುವೆ ನಿರ್ಮಿಸಿ ಕೊಡಬೇಕಾಗಿದೆ.