ಬೆಂಗಳೂರು ವಾಟರ್ ಟ್ಯಾಂಕರ್ ಮಾಲೀಕರಿಗೆ ಸಿಹಿಸುದ್ದಿ; ನೋಂದಣಿ ಅವಧಿ ಮಾ.15ರವರೆಗೆ ವಿಸ್ತರಣೆ
ಬೆಂಗಳೂರಿನ ಖಾಸಗಿ ವಾಟರ್ ಟ್ಯಾಂಕರ್ ಮಾಲೀಕರು ತನ್ನ ಟ್ಯಾಂಕರ್ ವಾಹನಗಳನ್ನು ಬಿಬಿಎಂಪಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಮಾ.15ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು (ಮಾ.09): ಬೆಂಗಳೂರಿನಲ್ಲಿ ಖಾಸಗಿಯಾಗಿ ನೀರನ್ನು ಸರಬರಾಜು ಮಾಡುವ ಟ್ಯಾಂಕರ್‌ಗಳು ಕಡ್ಡಾಯವಾಗಿ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈವರೆಗೆ 1,500 ಟ್ಯಾಂಕರ್‌ಗಳು ಮಾತ್ರ ನೋಂದಣಿಯಾಗಿದ್ದು, ನೋಂದಣಿಯಾಗದಿರುವ ಎಲ್ಲ ಖಾಸಗಿ ಟ್ಯಾಂಕರ್‌ಗಳ ಮಾಲೀಕರು ಮಾ.15ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ.ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೋರ್ಟಲ್‍ನಲ್ಲಿ ಈವರೆಗೆ 1530 ಟ್ಯಾಂಕರ್ ಗಳು ನೋಂದಣಿಯಾಗಿದ್ದು, ಮಾ.15ರವರೆಗೆ ನೋಂದಣಿಗೆ ಕಾಲವಕಾಶ ನೀಡಲಾಗಿದೆ;ಅದಾದ ನಂತರವೂ ನೋಂದಣಿಯಾಗದಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು. ಈ 1,530 ಟ್ಯಾಂಕರ್‌ಗಳಿಂದ ನಿತ್ಯ 10 ಎಂಎಲ್‍ಡಿ ನೀರನ್ನು ಒಂದೇ ಬಾರಿಗೆ ಸರಬರಾಜು ಮಾಡಬಹುದು. ನೋಂದಣಿಯಾದ ಟ್ಯಾಂಕರ್ ಗಳಿಗೆ ಸ್ಟಿಕ್ಕರ್ ಅಳವಡಿಸಲಾಗುವುದು. ಆ ಟ್ಯಾಂಕರ್ ಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿರುವ ದೂರುಗಳು ಕೇಳಿಬಂದಲ್ಲಿ ಕ್ರಮಕೈಗೊಳ್ಳಲಾಗುವುದು. ಈವರೆಗೆ 419 ಜನರು ಸ್ವಯಂಪ್ರೇರಿತವಾಗಿ ಬಾಡಿಗೆಗೆ ತಮ್ಮ ಟ್ಯಾಂಕರ್ ಗಳನ್ನು ಮಂಡಳಿಗೆ ನೀಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿಗೆ ಬೇಕಿರೋದು 8 ಟಿಎಂಸಿ, ಕೆಆರ್‌ಎಸ್ ಡ್ಯಾಂನಲ್ಲಿ 34 ಟಿಎಂಸಿ ನೀರಿದೆ: ರಾಮ್ ಪ್ರಸಾತ್ ಮನೋಹರ್
ನಗರದಲ್ಲಿ ಬೇಕಾಬಿಟ್ಟಿಯಾಗಿ ಬೊರವೆಲ್‍ಗಳನ್ನು ಕೊರೆಯುವುದರ ಬದಲು ನೀರಿನ ಲಭ್ಯತೆ ಆಧರಿಸಿ ಭೂವಿಜ್ಞಾನಿಗಳ ವರದಿಯ ಆಧಾರದ ಮೇಲೆ ಬೊರವೆಲ್‍ಗಳನ್ನು ಕೊರೆಯಿಸಲು ಮಂಡಳಿ ಉದ್ದೇಶಿಸಿದ್ದು,ಇದಕ್ಕಾಗಿ 4 ಜನ ಭೂವಿಜ್ಞಾನಿಗಳನ್ನು ಸಹ ತೆಗೆದುಕೊಳ್ಳಲಾಗಿದೆ. ಇನ್ನು ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ನೀರು ಬಳಕೆ ಕುರಿತು ಗೈಡ್‍ಲೈನ್‌ಗಳನ್ನು ಹೊರಡಿಸಲಾಗುವುದು. ಅದಕ್ಕೂ ಮುನ್ನ ಸಂಬಂಧಿಸಿದ ತಜ್ಷರು ಯಾಗೂ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಚರ್ಚಿಸಿ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.
ಮಾ.15ರಿಂದ ಅನ್ಯ ಉದ್ದೇಶಕ್ಕೆ ನೀರು ಬಳಸಿದರೆ ದಂಡ: ಕಾವೇರಿ ನೀರನ್ನು ಕುಡಿಯುವ ಉದ್ದೇಶ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಿ ಈಗಾಗಲೇ ಜಲಮಂಡಳಿಯ ಕಾಯ್ದೆ ಅಡಿ ಆದೇಶ ಹೊರಡಿಸಲಾಗಿದೆ. ಜನರು ಸಹ ಇದಕ್ಕೆ ಸಹಕರಿಸಬೇಕು. ಮಾ.15ರಿಂದ ಈ ಆದೇಶವನ್ನು ಕಡ್ಡಾಯವಾಗಿ ಹಾಗೂ ಕಠಿಣವಾಗಿ ಅನುಷ್ಠಾನಗೊಳಿಸಲಾಗುವುದು. ಇದರ ನಂತರವೂ ಕುಡಿಯುವ ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಂಡುಬಂದಲ್ಲಿ ನಮ್ಮ ಮಂಡಳಿ ಸಿಬ್ಬಂದಿ ಸ್ಥಳದಲ್ಲಿಯೇ ಆದೇಶದ ಅನುಸಾರ ದಂಡ ವಿಧಿಸಲಿದ್ದಾರೆ. ಈ ಕುರಿತು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ನೀವು ಬೆಂಗಳೂರಿಗೆ ಬಂದಿದ್ದು ಯಾಕೆ? ಕೆಲವರು ದುಡ್ಡು ಮಾಡೋಕೆ ಬಂದು, ಸಾಲ ಮಾಡ್ಕೊಂಡು ಹೋದ್ರಂತೆ!
ಈ ಸಂದರ್ಭದಲ್ಲಿ ಮಂಡಳಿ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಐಐಎಸ್‍ಸಿ ತಜ್ಞರಾದ ಪ್ರೊ.ವಿಶ್ವನಾಥ, ಚೀಪ್ ಎಂಜನಿಯರ್ ಜಯಪ್ರಕಾಶ ಮತ್ತಿತರರು ಇದ್ದರು.