Ramanagara: ರೇಷ್ಮೆಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಪ್ರಯತ್ನ: ಕೇಂದ್ರ ಸಚಿವೆ ದರ್ಶನ ಜರ್ದೋಶ್
ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ರೇಷ್ಮೆ ಉತ್ಪಾದನೆಯಾಗದ ಕಾರಣ ಆತ್ಮನಿರ್ಭರ್ ಭಾರತ್ ಅಭಿಯಾನದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಿ ನೇಕಾರಿಕೆ ಮಾರುಕಟ್ಟೆವಲಯ ಬಲಿಷ್ಠಗೊಳಿಸುವುದರ ಜತೆಗೆ ರೇಷ್ಮೆ ರಫ್ತು ವಲಯವನ್ನು ಮತ್ತಷ್ಟುಸ್ಪರ್ಧಾತ್ಮಕಗೊಳಿಸಿ ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್ ಹೇಳಿದರು.
ರಾಮನಗರ (ಸೆ.24): ದೇಶದಲ್ಲಿ ಬೇಡಿಕೆಗೆ ಅನುಗುಣವಾಗಿ ರೇಷ್ಮೆ ಉತ್ಪಾದನೆಯಾಗದ ಕಾರಣ ಆತ್ಮನಿರ್ಭರ್ ಭಾರತ್ ಅಭಿಯಾನದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಿ ನೇಕಾರಿಕೆ ಮಾರುಕಟ್ಟೆವಲಯ ಬಲಿಷ್ಠಗೊಳಿಸುವುದರ ಜತೆಗೆ ರೇಷ್ಮೆ ರಫ್ತು ವಲಯವನ್ನು ಮತ್ತಷ್ಟುಸ್ಪರ್ಧಾತ್ಮಕಗೊಳಿಸಿ ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್ ಹೇಳಿದರು. ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿ ರೇಷ್ಮೆ ಗೂಡು ಪೂರೈಕೆ, ಬೆಳೆಗಾರರಿಗೆ ಹಣ ಪಾವತಿ ವಿಧಾನ ಹಾಗೂ ಗೂಡಿನ ಗುಣಮಟ್ಟಪರಿಶೀಲನೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶೀಯ ರೇಷ್ಮೆ ನೇಕಾರಿಕೆ ಮಾರುಕಟ್ಟೆವಲಯವನ್ನು ಮತ್ತಷ್ಟುಬಲಿಷ್ಠಗೊಳಿಸಿ, ರೇಷ್ಮೆ ರಫ್ತು ವಲಯ ಹೆಚ್ಚು ಸ್ಪರ್ಧಾತ್ಮಕಗೊಳ್ಳುವಂತೆ ಮಾಡಲಾಗುತ್ತಿದೆ ಎಂದರು.
ಇಡೀ ಪ್ರಪಂಚದಲ್ಲಿ ರೇಷ್ಮೆಗೆ ತುಂಬಾ ಬೇಡಿಕೆ ಇದೆ. ದೇಶದಲ್ಲಿಯೇ ಕರ್ನಾಟಕ ರಾಜ್ಯ ರೇಷ್ಮೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ಒಟ್ಟಾರೆ ಕೃಷಿ ಉತ್ಪಾದನೆಯೊಂದಿಗೆ ತುಲನೆ ಮಾಡಿದರೆ ಶೇ.1ರಷ್ಟು ಮಾತ್ರ ಇದೆ. ಪ್ರಪಂಚದಲ್ಲಿಯೇ ಭಾರತ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಇರಬೇಕೆಂಬುದು ಬಯಕೆ. ಆದ್ದರಿಂದ ಆತ್ಮನಿರ್ಭರ್ ಭಾರತ್ ಅಭಿಯಾನದಡಿ ಜಮ್ಮುಕಾಶ್ಮೀರ, ಉತ್ತರಾಖಂಡದಂತಹ ರಾಜ್ಯಗಳಲ್ಲಿಯೂ ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು. ಕರ್ನಾಟಕ ರೇಷ್ಮೆಯಲ್ಲಿ 9 ಬೆಳೆ ತೆಗೆಯುತ್ತಿದೆ. ಉತ್ಪಾದನೆ ಚೆನ್ನಾಗಿದೆ.
ಕುಟುಂಬ ರಾಜಕಾರಣ, ಗುಂಪುಗಾರಿಕೆಯಿಂದ ಬೇಸತ್ತು ಜೆಡಿಎಸ್ ತೊರೆದೆ: ಸಿಂಗರಾಜಪುರ ರಾಜಣ್ಣ
ಆದರೆ, ಜಮ್ಮುಕಾಶ್ಮೀರದಲ್ಲಿ ಚಳಿಯ ಕಾರಣ ಕೇವಲ 1 ಬೆಳೆ ಮಾತ್ರ ತೆಗೆಯಲಾಗುತ್ತಿದೆ. ಅಲ್ಲಿಯೂ ಒಂದಕ್ಕಿಂತ ಹೆಚ್ಚಿನ ಬೆಳೆ ತೆಗೆಯಲು ಬೇಕಾದ ವಿಧಾನ ಅನುಸರಿಸುವ ಪ್ರಯತ್ನಗಳಿಗೆ ಸಂಶೋಧನೆಗಳು ನಡೆಯುತ್ತಿವೆ. ಮನರೇಗಾ ಬಳಸಿಕೊಂಡು ರೇಷ್ಮೆ ಬೆಳೆಯಲ್ಲಿ ಪ್ರಗತಿ ಸಾಧಿಸುವ ಪ್ರಯತ್ನಗಳು ನಡೆಯುತ್ತಿವೆ. ಅಸ್ಸಾಂನಲ್ಲಿ ಆದಿವಾಸಿ ರೈತರಿಂದ ರೇಷ್ಮೆ ಉತ್ಪಾದನೆ ಮಾಡಿಸಿ ಸರ್ಕಾರವೇ ನೇರವಾಗಿ ಖರೀದಿ ಮಾಡುತ್ತಿದೆ. ಜಪಾನ್‌ನಂತಹ ದೇಶಗಳಲ್ಲಿ ಸಿಲ್ಕ್ ಮೆಟಿರಿಯಲ್ಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಸೀರೆ ಮಾತ್ರವಲ್ಲದೆ ಫ್ಯಾಬ್ರಿಕ್ ಮೇಲೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು.
ರೇಷ್ಮೆ ಪ್ರಗತಿಗೆ ಕ್ರಮ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೇಷ್ಮೆ ಮಂಡಳಿಗಳು ಸೇರಿ ರೇಷ್ಮೆ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಪ್ರಧಾನಿರವರು ಆಲೋಚನೆಯಂತೆಯೇ 5 ಎಫ್ (ಫಾಮ್‌ರ್ ಟೂ ಫೈಬರ್ ಟೂ, ಫ್ಯಾಕ್ಟರಿ ಟೂ ಫ್ರೆಶನ್ ಟೂ ಫಾರಿನ್ )ಗಳ ಅಡಿಯಲ್ಲಿ ವ್ಯವಸ್ಥೆ ಉತ್ತಮವಾಗಿ ನಡೆಯುತ್ತಿದೆ. ರೇಷ್ಮೆ ಬೆಳೆಗಾರರ ಹಿತವನ್ನು ಕಾಯುವ ಸಲುವಾಗಿ ಜವಳಿ ಸಚಿವಾಲಯ ಕೇಂದ್ರೀಯ ರೇಷ್ಮೆ ಮಂಡಳಿ(ಸಿಎಸ್ ಬಿ) ಮೂಲಕ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ‘ಸಿಲ್ಕ್ ಸಮಗ್ರ’ ಯೋಜನೆ ಉಪಯುಕ್ತವಾಗಿದೆ.
ಈ ಯೋಜನೆ ಸಾಮಾನ್ಯ ವರ್ಗದಡಿ ಕೇಂದ್ರದ ಪಾಲು ಶೇ.50ರಷ್ಟು, ರಾಜ್ಯದ ಪಾಲು ಶೇ.25ರಷ್ಟುಮತ್ತು ಫಲಾನುಭವಿ ಪಾಲು ಶೇ.25ರ ಅನುಪಾದಂತೆ ಹಾಗೂ ವಿಶೇಷ ಘಟಕ/ಗಿರಿಜನ ಉಪಯೋಜನೆಯಡಿ ಕೇಂದ್ರದ ಪಾಲು ಶೇ.65ರಷ್ಟು, ರಾಜ್ಯದ ಪಾಲು ಶೇ.25 ರಷ್ಟುಮತ್ತು ಫಲಾನುಭವಿ ಪಾಲು ಶೇ.10ರ ಅನುಪಾತದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ರೈತರಿಗೆ ಕಿಸಾನ್ ನರ್ಸರಿ, ಪ್ಲಾಂಟೇಷನ್ ಮತ್ತು ಹಿಪ್ಪುನೇರಳೆಯ ವಿವಿಧ ತಳಿಗಳು, ನೀರಾವರಿ, ಸಂಪೋಷಣಾ ಸೌಕರ್ಯಗಳಿರುವ ಚೌಕಿ ಸಾಕಾಣಿಕೆ ಕೇಂದ್ರಗಳು, ಉಗ್ರಾಣಗಳ ನಿರ್ಮಾಣ, ರೇಷ್ಮೆ ಸಾಕಾಣಿಕೆ ಸಲಕರಣೆಗಳು ಮತ್ತು ಅವುಗಳಿಗೆ ರೋಗಗಳು ಹರಡದಂತೆ ಏಜೆಂಚ್‌ಗಳ ಮೂಲಕ ಮನೆ ಬಾಗಿಲಿಗೆ ಸೇವೆ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಸೃಷ್ಟಿ: ಅಲ್ಲದೆ ಇದರಿಂದ ಬುಡಕಟ್ಟು ಸಮುದಾಯದವರಿಗೆ ಉದ್ಯೋಗ ಸೃಷ್ಟಿಯಾಗಿರುವುದಲ್ಲದೆ, ಅವರಿಗೆ ಸುಸ್ಥಿರ ಜೀವನೋಪಾಯ ದೊರೆತಿದೆ. ಮತ್ತೊಂದು ಸಕಾರಾತ್ಮಕ ಪರಿಣಾಮದಿಂದ ಪ್ರತಿಫಲನಗೊಂಡಿರುವ ಮಹತ್ವದ ಅಂಶವೆಂದರೆ ಕಾಯಿಲೆ ರಹಿತ ಲೈಯಿಂಗ್ಸ್ (ಡಿಎಫ್‌ಎಲ್‌ಎಸ್) ಬಳಕೆ, ಕೊಕೋನ್ ಉತ್ಪಾದನೆ, ಕಚ್ಚಾ ರೇಷ್ಮೆ ಉತ್ಪಾದನೆಯಿಂದ ರೇಷ್ಮೆಯಲ್ಲಿ ಆದಾಯ ವೃದ್ಧಿಯಾಗಿರುವುದಲ್ಲದೆ, ಒಟ್ಟಾರೆ ಕುಟುಂಬದ ವಾರ್ಷಿಕ ಆದಾಯದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸಚಿವೆ ದರ್ಶನ ಜರ್ದೋಶ್ ಹೇಳಿದರು.
ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆಗೆ ಬೀಗ: ಮಾಜಿ ಶಾಸಕ ಬಾಲಕೃಷ್ಣ ಎಚ್ಚರಿಕೆ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ರಾಜ್ಯ ರೇಷ್ಮೆ ಉದ್ಯಮಗಳ ನಿಗಮ ಅಧ್ಯಕ್ಷ ಗೌತಮ್‌ಗೌಡ, ವ್ಯವಸ್ಥಾಪಕ ನಿರ್ದೇಶಕಿ ವಶಿರೆಡ್ಡಿ ವಿಜಯ ಜ್ಯೋತ್ಸಾ$್ನ, ತಹಸೀಲ್ದಾರ್ ವಿಜಯ್‌ಕುಮಾರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಮಾದು ಇತರರಿದ್ದರು.