ರೈತರ ಮಕ್ಕಳಿಗೆ ಹೆಣ್ಣುಕೊಡಿಸುವ ಗ್ಯಾರಂಟಿ ಯೋಜನೆ ಜಾರಿಗೆಗೆ ಮನವಿ
ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾನುವಾರುಗಳ ಜಾತ್ರೆ ನಡೆಯೋದು ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯ ಜನರ ಆರಾಧ್ಯ ದೈವ ಸಿದ್ದರಾಮೇಶ್ವರ ಜಾತ್ರೆಯ ಅಂಗವಾಗಿ ದನಗಳ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಲಕ್ಷಕ್ಕು ಅಧಿಕ ಜಾನುವಾರು ಸೇರೋದು ವಾಡಿಕೆ. ಆದ್ರೆ ಈ ಬಾರಿ ಬರಗಾಲದಿಂದ ದನಗಳ ಜಾತ್ರೆಯ ಚಿತ್ರಣವೇ ಬದಲಾಗಿದೆ.
ತಿಪಟೂರು : ರೈತ ಎಂಬ ಕಾರಣಕ್ಕೆ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲವಾದ್ದರಿಂದ ಅನ್ನದಾತ ರೈತ ಕೃಷಿ ಚಟುವಟಿಕೆಗಳನ್ನು ಮಾಡಲಾಗದೆ ಕೃಷಿ ಕಾರ್ಯದಿಂದ ವಿಮುಖರಾಗುತ್ತಿದ್ದು ಮುಂದೆ ಆಹಾರ ಉತ್ಪಾದನೆ ಕುಂಠಿತವಾಗಲಿರುವುದರಿಂದ ಸರ್ಕಾರ ದೇಶಕ್ಕೆ ಅನ್ನ ನೀಡುವ ರೈತರ ಮಕ್ಕಳಿಗೆ ಹೆಣ್ಣು ಕೊಡಿಸಲು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಹಾಗೂ ಬಿಜೆಪಿ ಸ್ಥಾಪಕ ಸದಸ್ಯ ಕೆ.ಎಸ್. ಸದಾಶಿವಯ್ಯ ರಾಜ್ಯದ ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ.
ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ರೈತ ಎಂಬ ಕಾರಣಕ್ಕೆ ಹಿಂಜರಿಯುತ್ತಿದ್ದಾರೆ. ಸರ್ಕಾರವೇ ನಮ್ಮ ಮಕ್ಕಳಿಗೆ ಮದುವೆ ಮಾಡಿಸಬೇಕೆಂದು ಈ ಹಿಂದೆ ಶಿರಾದಲ್ಲಿ ಜಿಲ್ಲಾಪಂಚಾಯಿತಿ ಹಮ್ಮಿಕೊಂಡಿದ್ದ ಜನಾತಾದರ್ಶನದಲ್ಲಿ ರೈತನೋರ್ವ ನನ್ನ ಮಕ್ಕಳು ಓದಿಲ್ಲ, ಉದ್ಯೋಗವಿಲ್ಲ, ಅವರಿಗೆ ಯಾರು ಹೆಣ್ಣುಕೊಡುತ್ತಿಲ್ಲ.
ಸರ್ಕಾರವೇ ಅವರಿಗೆ ಉದ್ಯೋಗ ಕೊಡಲಿ ಆಗ ಯಾರಾದರು ಹೆಣ್ಣುಕೊಡಲು ಮುಂದೆ ಬರುತ್ತಾರೆಂದು ಅಲವತ್ತು ಕೊಂಡಿದ್ದರು. ವೃದ್ಧ ರೈತನ ಮನವಿ ಆಲಿಸಿದ ಜಿಲ್ಲಾಧಿಕಾರಿ ಆಶ್ಚರ್ಯಗೊಂಡು ಅರ್ಜಿ ಪಡೆದು ಸುಮ್ಮನಾಗಿದ್ದಾರೆ. ಇದು ನಾಡಿನ ರೈತರ ಮಕ್ಕಳ ದಿನನಿತ್ಯದ ಸಮಸ್ಯೆಯಾಗಿದ್ದು ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತರ ಸಮಸ್ಯೆಯಾಗಿದ್ದು ಕೃಷಿ ಮಾಡುವವರೇ ಇಲ್ಲದಂತಾಗುತ್ತಿದೆ. ಆದ್ದರಿಂದ ರಾಜ್ಯದ ಕೃಷಿ ಸಚಿವರು ಹಾಗೂ ಮುಖ್ಯ ಮಂತ್ರಿಗಳು ರೈತರ ಜ್ವಲಂತ ಸಮಸ್ಯೆಯತ್ತ ಗಮನಹರಿಸಿ ರೈತರ ಮಕ್ಕಳಿಗೆ ಆದ್ಯತೆಯ ಮೇರೆಗೆ ಉದ್ಯೋಗ ನೀಡಿ ಹೆಣ್ಣು ಕೊಡಿಸುವ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಬೇಕು. ಆಗ ಕೃಷಿ ನಿರತ ರೈತರ ಜೀವನ ಮಟ್ಟ ಸುಧಾರಿಸುತ್ತದೆ ಎಂದು ತಿಳಿಸಿದ್ದಾರೆ.
ಬರದ ಕರಿನೆರಳು
ವಿಜಯಪುರ (ಜ.16): ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾನುವಾರುಗಳ ಜಾತ್ರೆ ನಡೆಯೋದು ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯ ಜನರ ಆರಾಧ್ಯ ದೈವ ಸಿದ್ದರಾಮೇಶ್ವರ ಜಾತ್ರೆಯ ಅಂಗವಾಗಿ ದನಗಳ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಲಕ್ಷಕ್ಕು ಅಧಿಕ ಜಾನುವಾರು ಸೇರೋದು ವಾಡಿಕೆ. ಆದ್ರೆ ಈ ಬಾರಿ ಬರಗಾಲದಿಂದ ದನಗಳ ಜಾತ್ರೆಯ ಚಿತ್ರಣವೇ ಬದಲಾಗಿದೆ.
ಉ. ಕರ್ನಾಟಕದ ಅತಿ ದೊಡ್ಡ ಜಾನುವಾರು ಜಾತ್ರೆ
ವಿಜಯಪುರದ ಗ್ರಾಮ ದೇವರು ಸಿದ್ದರಾಮೇಶ್ವ ಜಾತ್ರೆ ಪ್ರತಿ ವರ್ಷವೂ ವಿಜೃಂಭಣೆಯಿಂದ ನಡೆಯುತ್ತೆ. ಜಾತ್ರೆ ಸಂಕ್ರಾಂತಿ ಸಮಯದಲ್ಲೆ ನಡೆಯುವ ಕಾರಣ ನಮ್ಮೂರ ಸಂಕ್ರಾಂತಿ ಜಾತ್ರೆ ಅಂತಲೂ ಸಿದ್ದರಾಮೇಶ್ವರ ಜಾತ್ರೆ ಪ್ರಸಿದ್ಧಿ ಪಡೆದಿದೆ. ಈ ಜಾತ್ರೆಯನ್ನ ಕಣ್ತುಂಬಿ ಕೊಳ್ಳಲು ದೇಶದ ನಾನಾ ಮೂಲೆಗಳಿಂದ ಭಕ್ತರು ಬರೋದು ವಾಡಿಕೆ. ಹಾಗೇ ವಿಶೇಷ ಅಂದ್ರೆ ಜಾನುವಾರುಗಳಿಗಾಗಿಯೇ ಇಲ್ಲಿ ಪ್ರತ್ಯೇಕ ಜಾತ್ರೆಯು ನಡೆಯುತ್ತದೆ. ಈ ಜಾನುವಾರು ಜಾತ್ರೆಯಲ್ಲಿ ನೆರೆ ರಾಜ್ಯ ಸೇರಿದಂತೆ ಹಲವು ಜಿಲ್ಲೆಗಳ ರೈತರು ತಮ್ಮ ಜಾನುವಾರುಗಳನ್ನ ಕರೆತರುತ್ತಾರೆ. ಜನೇವರಿ 12 ರಿಂದ ಶುರುವಾಗುವ ಜಾನುವಾರುಗಳ ಜಾತ್ರೆ 20 ನೇ ತಾರೀಕು ಅಂದ್ರೆ 8 ದಿನಗಳ ಕಾಲ ಜಾನುವಾರುಗಳ ಜಾತ್ರೆ ನಡೆಯುತ್ತೆ. ಆದ್ರೆ ಈ ಬಾರಿ ತಲೆದೂರಿಸುವ ಬರದ ಎಫೆಕ್ಟ್ ಜಾನುವಾರು ಜಾತ್ರೆಯ ಮೇಲೆಯು ಬಿದ್ದಿದೆ.
ರಾಮ ಮಂದಿರ ಉದ್ಘಾಟನೆಗೆ ಶಂಕರ ಮಠಗಳ ವಾದಕ್ಕೆ ಶೃಂಗೇರಿ ಕಿರಿಯ ಜಗದ್ಗುರು ಸ್ಪಷ್ಟನೆ
ದನಗಳ ಜಾತ್ರೆ ಮೇಲೆ ಬರದ ಎಫೆಕ್ಟ್
ಯಸ್, ಈ ಬಾರಿ ಅಂದುಕೊಂಡಂತೆ ಮಳೆಯಾಗಿಲ್ಲ. ಪರಿಣಾಮ ರಾಜ್ಯದಲ್ಲಿ ಬರ ಆವರಿಸಿದೆ. ಇನ್ನೂ ಬೇಸಿಗೆ ಶುರುವಾಗ್ತಿದ್ದು, ದಿನದಿಂದ ದಿನಕ್ಕೆ ಬರದ ಎಫೆಕ್ಟ್ ಜಾಸ್ತಿಯಾಗುತ್ತಲೆ ಹೋಗುತ್ತದೆ. ಈ ಬರದ ಎಫೆಕ್ಟ್ ಜಾನುವಾರು ಜಾತ್ರೆಯ ಮೇಲು ಬಿದ್ದಿದೆ. ಪ್ರತಿ ವರ್ಷವೂ ದನಗಳ ಜಾತ್ರೆಯಲ್ಲಿ ಲಕ್ಷಕ್ಕು ಅಧಿಕ ಜಾನುವಾರುಗಳು ಸೇರುತ್ತಿದ್ದವು. ಆದ್ರೆ ಈ ಬಾರಿ ಬರದ ಎಫೆಕ್ಟ್ ನಿಂದಾಗಿ ಜಾನುವಾರುಗಳ ಸಂಖ್ಯೆಯಲ್ಲಿ ಬಾರಿ ಇಳಿಕೆ ಕಂಡಿದೆ. ಲಕ್ಷ ಇರಬೇಕಿದ್ದ ದನಗಳ ಸಂಖ್ಯೆ ಸಾವಿರದ ಲೆಕ್ಕಕ್ಕೆ ಸೀಮಿತವಾಗಿದೆ. ಕೇವಲ 5 ರಿಂದ 6 ಸಾವಿರ ಜಾನುವಾರುಗಳು ಮಾತ್ರ ದನಗಳ ಜಾತ್ರೆಯಲ್ಲಿ ಸೇರಿವೆ. ಇದು ರೈತರಲ್ಲಿ ಹಾಗೂ ಆಯೋಜಕರಲ್ಲು ನಿರಾಶೆ ಮೂಡಿಸಿದೆ.
ಬರದ ನಡುವೆ ರೈತರ ನಿರಾಸಕ್ತಿ, ಖರೀದಿದಾರ ಸಂಖ್ಯೆಯು ಕಡಿಮೆ
ಅಷ್ಟಕ್ಕು ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಈ ರೀತಿ ಏಕಾಏಕಿ ಇಳಿಕೆ ಕಾಣಲು ಕಾರಣವು ಇದೆ. ಮೊದಲೇ ಬರಗಾಲದಿಂದ ತತ್ತರಿಸಿರುವ ರೈತನಲ್ಲಿ ಜಾನುವಾರು ಜಾತ್ರೆಯಲ್ಲಿ ಪಾಲ್ಗೊಳ್ಳುವ ಉತ್ಸಾಹವಿಲ್ಲ. ಸಂಪೂರ್ಣ ವಿಜಯಪುರ ಜಿಲ್ಲೆಯಲ್ಲಿ ಬರ ಘೋಷಣೆಯಾಗಿದೆ. ನೆರೆಯ ಬೆಳಗಾವಿ, ಕಲಬುರ್ಗಿ, ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ಯಾದಗಿರಿ ಸೇರಿ ನೆರೆ ಜಿಲ್ಲೆಗಳಲ್ಲು ಇದೆ ಪರಿಸ್ಥಿತಿ ಇದೆ. ಇನ್ನೂ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲು ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇದೆಲ್ಲ ಕಾರಣಕ್ಕೆ ಜಾನುವಾರುಗಳನ್ನ ಜಾತ್ರೆಗೆ ತರುವ ಉತ್ಸಾಹ, ಆಸಕ್ತಿಯನ್ನ ಬಹುತೇಕ ರೈತರು ತೋರಿಸಿಲ್ಲ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ, ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ ದೇಗುಲ ಶುಚಿ ಕಾರ್ಯ