Asianet Suvarna News Asianet Suvarna News

Bagalkot : ಅತಿವೃಷ್ಟಿ ಹಾನಿಗೆ .79.79 ಕೋಟಿ ಪರಿಹಾರ

ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಅಕ್ಟೋಬರ್‌ ಮಾಹೆಯವರೆಗೆ ಒಟ್ಟು 66713 ರೈತರ ಖಾತೆಗೆ .79.79 ಕೋಟಿ ಪರಿಹಾರ ಜಮೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

79  crore compensation for flood damage in Bagalakote snr
Author
First Published Nov 2, 2022, 12:52 PM IST

 ಬಾಗಲಕೋಟೆ (ನ.02):  ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಅಕ್ಟೋಬರ್‌ ಮಾಹೆಯವರೆಗೆ ಒಟ್ಟು 66713 ರೈತರ ಖಾತೆಗೆ .79.79 ಕೋಟಿ ಪರಿಹಾರ ಜಮೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ  (DC)  ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಅತಿವೃಷ್ಟಿ ಯಿಂದಾದ (flood)  ಹಾನಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಕಿ ಉಳಿದಿರುವ 6ನೇ ಹಂತದ 4539 ರೈತರಿಗೆ (Farmers)  ನೀಡಬೇಕಾದ .5.84 ಕೋಟಿ ಪರಿಹಾರ ಬಿಡುಗಡೆ ಮಾಡಲು ಆದೇಶಿಸಿದ್ದು, ಪರಿಹಾರ ರೈತರ ಖಾತೆಗಳಿಗೆ ಜಮೆ ಆಗುವ ಬಾಕಿ ಉಳಿದಿದೆ ಎಂದರು.

ಅಕ್ಟೋಬರ್‌ ಮಾಹೆಯಲ್ಲಿ 108 ಎಂ.ಎಂ ವಾಡಿಕೆಯ ಮಳೆಗಿಂತ  (Rain) 156 ಎಂ.ಎಂ ಮಳೆಯಾಗಿದ್ದು, 44 ಎಂ.ಎಂ.ರಷ್ಟುಮಳೆ ಹೆಚ್ಚಳವಾಗಿದ್ದರಿಂದ ಜಿಲ್ಲೆಯಲ್ಲಿ ಕೃಷಿ 27937 ಹೆಕ್ಟೇರ್‌, ತೋಟಗಾರಿಕೆ 3184 ಹೆಕ್ಟೇರ್‌ ಸೇರಿ ಒಟ್ಟು 31121 ಹೆಕ್ಟೇರ್‌ನಷ್ಟುಬೆಳೆ ಹಾನಿಗೊಳಗಾಗಿದೆ. ಮುಧೋಳ ತಾಲೂಕಿನ ಎರಡು ಕಡೆ ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, 48 ಕುಟುಂಬಗಳಿಗೆ ಆಶ್ರಯ ನೀಡಲಾಗಿತ್ತು. ಬಾಗಲಕೋಟೆ ನಗರದಲ್ಲಿ ಮನೆ ಕುಸಿದು ಓರ್ವ ವೃದ್ಧೆ ಮೃತಪಟ್ಟರೆ, ಮುಧೋಳದಲ್ಲಿ ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿರುತ್ತಾರೆ. ತಲಾ .5 ಲಕ್ಷ ಪರಿಹಾರ ನೀಡಲಾಗಿದೆ. ಜಾನುವಾರುಗಳು ಒಟ್ಟು 9 ಮೃತಪಟ್ಟಿದ್ದು, .81 ಸಾವಿರ ಪರಿಹಾರ ನೀಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಅಕ್ಟೋಬರ್‌ ಮಾಹೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಮನೆ, ಬೆಳೆ ಹಾನಿಯ ಡಾಟಾ ಎಂಟ್ರಿ ಆಗಬೇಕು. ಮನೆ ಹಾನಿಯ ಬಗ್ಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಭಾಗದ ರಸ್ತೆಗಳ ಬದಿಯಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದು, ನರೇಗಾದಡಿ ಸ್ವಚ್ಛಗೊಳಿಸಲು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಪಿ.ಎಚ್‌.ಪೂಜಾರ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ, ಜಿ.ಪಂ ಸಿಇಒ ಟಿ.ಭೂಬಾಲನ್‌, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್‌.ವೈ.ಬಸರಿಗಿಡದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ.9ಕ್ಕೆ ಜಿ.ಪಂ ತ್ರೈಮಾಸಿಕ ಕೆಡಿಪಿ ಸಭೆ

ನ.9 ರಂದು ಜಿ.ಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಕೆಡಿಪಿ ಸಭೆ ನಡೆಸಲಾಗುತ್ತಿದ್ದು, ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಜಿಲ್ಲೆಯ ಅಭಿವೃದ್ಧಿಯ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು.

ಮೆಕ್ಕೆ ಜೋಳ ಹರಗಿದ ರೈತ

ನರಗುಂದ (ಅ.29) : ಅತಿಯಾದ ಮಳೆಯಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳಕ್ಕೆ ತೇವಾಂಶ ಹೆಚ್ಚಾಗಿ ಬೆಳೆ ಕುಂಟಿತವಾಗಿದ್ದು, ಮನನೊಂದ ರೈತರು ಹೊಲದಲ್ಲಿದ್ದ ಬೆಳೆಯನ್ನೇ ಹರಗಲು ಮುಂದಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನ ರೈತ ಸಮುದಾಯ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ ಬಿತ್ತನೆ ಮಾಡಿ ಉತ್ತಮ ಬೆಳೆ ತಗೆಯಬೇಕೆಂದು ಹಿಂಗಾರು ಹಂಗಾಮಿನಲ್ಲಿ ಈ ವರ್ಷ ಮಾರುಕಟ್ಟೆಯಲ್ಲಿ ಈ ಬೆಳೆಗೆ ಬಂಪರ್‌ ಬೆಲೆ ಸಿಗುವ ನಿರೀಕ್ಷೆಯನ್ನು ಇಟ್ಟುಕೊಂಡು ಪ್ರತಿ 1 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಲು .15ರಿಂದ 20 ಸಾವಿರ ಹಣ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಈ ಭಾಗದಲ್ಲಿ ಸುರಿದ ಕಂಭದ್ರೋಣ ಮಳೆಯ ಅಬ್ಬರದಿಂದ ಬಿತ್ತನೆ ಮಾಡಿದ ಬೆಳೆಗೆ ತೇವಾಂಶ ಹೆಚ್ಚಾಗಿ ಸಂಪೂರ್ಣವಾಗಿ ಕೊಳೆತು ಹೋಯಿತು.

ಹಂದಿ ಹಾವಳಿಯಿಂದ ಬೆಳೆನಾಶ; ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ ಎಂದು ರೈತರ ಆಕ್ರೋಶ

ಕಷ್ಟಕ್ಕೆ ಸಿಲುಕಿದ ರೈತರು:

ಈ ವರ್ಷ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತಕ್ಷಣವೇ ಈ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ಮೊಳಕೆಯೊಡೆಯುವ ಪೂರ್ವದಲ್ಲಿಯೇ ಬೆಳೆ ಹಾಳಾಯಿತು. ಮತ್ತೇ ರೈತ ಬಿತ್ತನೆ ಮಾಡಿದ್ದು, ಅತಿಯಾದ ತೇವಾಂಶದಿಂದ ಈ ಬೆಳೆಯೂ ಹಾಳಾಗುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಸಿಗದ ಪರಿಹಾರ:

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಮೆಕ್ಕೆಜೋಳ, ಬಿ.ಟಿ. ಹತ್ತಿ, ಶೇಂಗಾ, ತೊಗರಿ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಆದರೆ, ಸರ್ಕಾರ ಹೆಸರು ಬೆಳೆಗೆ ಮಾತ್ರ ಬೆಳೆಹಾನಿಯನ್ನು ಅದೂ ಅಲ್ಪಸ್ವಲ್ಪ ನೀಡಿ ಕೈತೊಳೆದುಕೊಂಡಿದೆ. ಉಳಿದ ಬೆಳೆಗಳು ಕೂಡ ಹಾನಿಯಾದರೂ ಸಹ ಸರ್ಕಾರ ರೈತನಿಗೆ ಪರಿಹಾರ ನೀಡದೆ ರೈತರನ್ನು ಮತ್ತಷ್ಟುಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಬಿತ್ತನೆ ವಿವರ:

ಪ್ರತಿ ವರ್ಷ ಈ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ಪ್ರತಿ 1 ಎಕರೆಗೆ 20 ರಿಂದ 25 ಕ್ವಿಂಟಲ್‌ ಬೆಳೆ ತಗೆಯುತ್ತಿದ್ದರು. ಆದರೆ, ಈ ವರ್ಷ ಜೂನ್‌ ತಿಂಗಳಲ್ಲಿ 8 ಸಾವಿರ ಹೆಕ್ಟರ್‌ ಬಿತ್ತನೆ ಮಾಡಿದರೆ, ತದ ನಂತರ ಜುಲೈ ಮತ್ತು ಆಗಸ್ಟ್‌ನಲ್ಲಿ 5550 ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಮಳೆಗೆ ಆಹುತಿಯಾಗಿದೆ. ಹಾಗಾಗಿ ಬಿತ್ತಿದ ಬೆಳೆ ಸಹ ಬಾರದಂತಹ ಪರಿಸ್ಥಿತಿ ಉಂಟಾಗಿದೆ.

Follow Us:
Download App:
  • android
  • ios