ಯುಪಿಎಸ್‌ಸಿ ಟಾಪರ್‌ ಆದಿತ್ಯ ಶ್ರೀವಾಸ್ತವ್ ಎತ್ತಿಕೊಂಡು ಮೆರವಣಿಗೆ ಮಾಡಿದ ಸ್ನೇಹಿತರು: ಫಸ್ಟ್ ರಿಯಾಕ್ಷನ್ ಸಖತ್ ವೈರಲ್

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿರುವ ಆದಿತ್ಯ ಶ್ರೀವಾಸ್ತವ್ ಅವರಿಗೆ ತಾವು ಟಾಪರ್ ಎಂದು ಗೊತ್ತಾದ ನಂತರ ಅವರ ಮೊದಲ ರಿಯಾಕ್ಷನ್ ಹೇಗಿತ್ತು? ಇಲ್ಲಿದೆ ವೀಡಿಯೋ..

UPSC topper Aditya Srivastav First reaction goes viral Friends picked up Aditya and marched in IPS training centers corridor akb

ನವದೆಹಲಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿರುವ ಆದಿತ್ಯ ಶ್ರೀವಾಸ್ತವ್ ಅವರಿಗೆ ತಾವು ಟಾಪರ್ ಎಂದು ಗೊತ್ತಾದ ನಂತರ ಅವರ ಮೊದಲ ರಿಯಾಕ್ಷನ್ ಹೇಗಿತ್ತು? ಇಲ್ಲಿದೆ ವೀಡಿಯೋ..

ಪ್ರಸಕ್ತ ಸಾಲಿನಲ್ಲಿ ಟಾಪರ್‌ ಆಗಿ ಹೊರಹೊಮ್ಮಿರುವ ಆದಿತ್ಯ 2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 236ನೇ ರ್‍ಯಾಂಕ್‌ ಪಡೆದು, ಐಪಿಎಸ್‌ ಹುದ್ದೆ ಆಯ್ಕೆ ಮಾಡಿಕೊಂಡಿದ್ದರು. ಅದರ ಭಾಗವಾಗಿ ಹಾಲಿ ಹೈದ್ರಾಬಾದ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೀಗಾಗಿ ಯುಪಿಎಸ್‌ಸಿ ಫಲಿತಾಂಶ ಬಂದ ವೇಳೆ ಅವರು ಹೈದರಾಬಾದ್‌ನ ತರಬೇತಿ ಕೇಂದ್ರದಲ್ಲಿಯೇ ಅವರ ಜೊತೆಗೆ ಇರುವ ಟೀಂ ಮೇಟ್ಸ್‌ ಜೊತೆ ಸಂತಸ ಹಂಚಿಕೊಂಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವರು ಟಾಪರ್ ಎಂಬುದು ತಿಳಿಯುತ್ತಿದ್ದಂತೆ ಅವರ ತರಬೇತಿ ಕೇಂದ್ರದಲ್ಲಿದ್ದ ಅವರ ಆತ್ಮೀಯರು ಗೆಳೆಯರೆಲ್ಲರೂ ಸೇರಿ ಅವರನ್ನು ಹೊತ್ತುಕೊಂಡು ಸಾಗಿ ಸಂಭ್ರಮಾಚರಣೆ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಟ್ವಿಟ್ಟರ್‌ನಲ್ಲಿ ಯುಪಿಎಸ್‌ಸಿ ನೋಟ್ಸ್ ಎಂಬ ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಕಪ್ಪು ಶಾರ್ಟ್ಸ್‌ ಹಾಗೂ ಟೀ ಶರ್ಟ್ ಧರಿಸಿರುವ ಆದಿತ್ಯ ಅವರು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬಂದು ತಾನು ಟಾಪರ್ ಎಂದು ತರಬೇತಿ ಕೇಂದ್ರದ ಸ್ನೇಹಿತನೋರ್ವನ ಜೊತೆ ಹೇಳುತ್ತಿದ್ದು, ಇದರಿಂದ ಖುಷಿಗೊಂಡ ಅವರ ಸ್ನೇಹಿತರು ಅವರನ್ನು ಎತ್ತಿಕೊಂಡು  ತರಬೇತಿ ಕೇಂದ್ರದ ಕಾರಿಡಾರ್‌ನಲ್ಲಿ ಖುಷಿಯಿಂದ ಬೊಬ್ಬೆ ಹಾಕುತ್ತಾ ಸಾಗುವುದನ್ನು ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಆದಿತ್ಯ ಶ್ರೀವಾಸ್ತವ್ ಅವರಿಗೆ ಶುಭ ಹಾರೈಸಿದ್ದಾರೆ.

UPSC Results: ಕೋಚಿಂಗ್‌ ಇಲ್ಲದೆ ಯುಪಿಎಸ್ಸಿಯಲ್ಲಿ 101ನೇ ರ‍್ಯಾಂಕ್ ಪಡೆದ ಸೌಭಾಗ್ಯ!

24 ನಿಮಿಷಗಳ ಈ ವೀಡಿಯೋವನ್ನು ಮತ್ತೊಬ್ಬ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಕೂಡ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಟಾಪರ್ ಆದ ಖುಷಿ ಎಂದು ಬರೆದುಕೊಂಡಿದ್ದಾರೆ. ಆದಿತ್ಯ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯುವುದಕ್ಕೂ ಮುನ್ನ ಐಐಟಿ ಖರಗ್‌ಪುರದಲ್ಲಿ ಎಲೆಕ್ಟ್ರಿಕ್‌ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪುರಸ್ಕೃತರಾಗಿದ್ದರು. ಬಳಿಕ ಕೆಲ ಕಾಲ ಗೋಲ್ಡ್‌ಮನ್‌ ಸ್ಯಾಚ್ಸ್‌ ಕಂಪನಿಯಲ್ಲೂ ಸೇವೆ ಸಲ್ಲಿಸಿದ್ದರು. ಇದರ ಹೊರತಾಗಿಯೂ ಐಐಎಸ್‌ ಕನಸು ಕಂಡು ಪರೀಕ್ಷೆ ಬರೆದಿದ್ದ ಅವರೀಗ ಅಖಿಲ ಭಾರತ ನಂ.1 ಆಗಿ ಹೊರಹೊಮ್ಮಿದ್ದಾರೆ. 

ಈ ವರ್ಷ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ವಿವಿಧ ಕೇಂದ್ರ ಸೇವೆಗಳ ಗುಂಪುಗಳು ಎ ಮತ್ತು ಬಿ ಸೇರಿದಂತೆ ಪ್ರತಿಷ್ಠಿತ ಹುದ್ದೆಗಳಿಗೆ ಒಟ್ಟು 1,016 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.  ಕಳೆದ ವರ್ಷದ ಮೇ 28ರಂದು ನಡೆದ ಪರೀಕ್ಷೆಗೆ 10 ಲಕ್ಷ ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಂಡು, ಅಂತಿಮವಾಗಿ 5.92 ಲಕ್ಷ ಜನರು ಭಾಗಿಯಾಗಿದ್ದರು. ಈ ಪೈಕಿ 14624 ಜನರು ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದರು. ಈ ಪೈಕಿ 2855 ಅಭ್ಯರ್ಥಿಗಳು ಅಂತಿಮ ಹಂತದ ಪರೀಕ್ಷೆಗೆ ಒಳಗಾಗಿದ್ದರು. ಈ ಪೈಕಿ ಇದೀಗ 1016 ಜನರು ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಅಬ್ಬಬ್ಬಾ.. 75000 ರು. ದಾಟಿದ ಶುದ್ಧ ಚಿನ್ನದ ಬೆಲೆ: ಬೆಂಗಳೂರು ಮಾರುಕಟ್ಟೆಯಲ್ಲಿ ಎಷ್ಟಿದೆ ಗೊತ್ತಾ?

ಆಯ್ಕೆಯಾದ 1016 ಜನರಲ್ಲಿ 664 ಪುರುಷ ಮತ್ತು 352 ಜನ ಮಹಿಳೆಯರು. ಟಾಪ್‌ 25ರಲ್ಲಿ 15 ಪುರುಷರು, 10 ಮಹಿಳೆಯರು. ಅದೇ ರೀತಿ ಟಾಪ್‌ 5ರಲ್ಲಿ 3 ಪುರುಷರು, ಇಬ್ಬರು ಮಹಿಳೆಯರು. ಜೊತೆಗೆ 347 ಜನರು ಸಾಮಾನ್ಯ ವರ್ಗ, 115 ಆರ್ಥಿಕವಾಗಿ ಹಿಂದುಳಿದವರು, 303 ಜನರು ಇತರೆ ಹಿಂದುಳಿದ ವರ್ಗ, 165 ಎಸ್‌ಸಿ, 86 ಎಸ್ಟಿ ಸಮುದಾಯಕ್ಕೆ ಸೇರಿದವರು. ಲಕ್ನೋ ನಿವಾಸಿಯಾದ ಆದಿತ್ಯ ಪ್ರಸ್ತುತ ಐಪಿಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ಆದಿತ್ಯ ಅವರ ತಂದೆ ಅಜಯ್ ಶ್ರೀವಾಸ್ತವ ಅವರು ಕೇಂದ್ರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಎಎಒ ಹುದ್ದೆಯಲ್ಲಿದ್ದರೆ, ಅವರ ತಂಗಿ ದೆಹಲಿಯಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
 

 

 

Latest Videos
Follow Us:
Download App:
  • android
  • ios