ತುಮಕೂರು, ಗದಗ, ಉತ್ತರ ಕನ್ನಡ, ಯಾದಗಿರಿ.. UNDPಯಲ್ಲಿ 50 ಕ್ಕೂ ಅಧಿಕ ಹುದ್ದೆ

ಯುಎನ್ ಡಿಪಿಯಲ್ಲಿ ಉದ್ಯೋಗಕ್ಕೆ ವಿಫುಲ ಅವಕಾಶ/  ತುಮಕೂರು, ಗದಗ, ಉತ್ತರ ಕನ್ನಡ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ ಮತ್ತು ಬೆಂಗಳೂರಲ್ಲಿ ಉದ್ಯೋಗಾವಕಾಶ/  50ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ

UNDP has over 50 job openings in Tumkur Gadag Uttar Kannada Yadgiri mah

ಬೆಂಗಳೂರುನ (ಏ. 21) ಕೊರೋನಾ ಸಂಕಷ್ಟದ ಕಾಲದಲ್ಲೂ ಯುವಜನತೆಗೆ ಸಂತಸದ ಸುದ್ದಿ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಉದ್ಯೋಗದ ವಿಪುಲ ಅವಕಾಶ ಲಭ್ಯವಿದ್ದು, ಯುಎನ್ ಡಿಪಿ ವತಿಯಿಂದ 50ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. 

ತುಮಕೂರು, ಗದಗ, ಉತ್ತರ ಕನ್ನಡ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ ಮತ್ತು ಬೆಂಗಳೂರುಗಳಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ 50ಕ್ಕೂ ಹೆಚ್ಚು ಹುದ್ದೆಗಳಿಗೆ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣಾಭಿವೃದ್ಧಿ, ಜೀವನೋಪಾಯ ಸಂವರ್ಧನೆ, ಉದ್ಯಮಶೀಲತೆ ಅಭಿವೃದ್ಧಿ, ಕೃಷಿಯೇತರ ಕ್ಷೇತ್ರ, ಕೃಷಿ ಕ್ಷೇತ್ರದಲ್ಲಿ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. 

SSLC  ಮುಗಿಸಿದವರಿಗೂ ಉದ್ಯೋಗ ಅವಕಾಶಗಳಿವೆ

ಆಸಕ್ತರು ತಡಮಾಡದೆ ಅರ್ಜಿ ಸಲ್ಲಿಸಬೇಕಿದ್ದು, 2021ರ ಮೇ 2 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ. ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಹುದ್ದೆ, ಸ್ಥಳ ಹಾಗೂ ಅರ್ಜಿ ನಮೂನೆ ಮಾಹಿತಿಗಳು ಲಭ್ಯವಾಗಲಿವೆ. https://www.in.undp.org/content/india/en/home/jobs.html ಗೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ. 

 

Latest Videos
Follow Us:
Download App:
  • android
  • ios