Tumakuru: ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಕಲ್ಪಿಸಿ; ಜಿಲ್ಲಾಧಿಕಾರಿಗಳ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ
ಬೀಡಿ ಕಾರ್ಮಿಕರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಉದ್ಯೋಗ, ಸಾವಿರ ಬೀಡಿಗೆ 375 ರು. ನಿಗದಿಗೆ ಆಗ್ರಹಿಸಿ ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ ಸಿಐಟಿಯು ಸಂಯೋಜಿತ ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ, ಸಿಐಟಿಯು ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತುಮಕೂರು (ಸೆ.9) : ಬೀಡಿ ಕಾರ್ಮಿಕರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಉದ್ಯೋಗ, ಸಾವಿರ ಬೀಡಿಗೆ 375 ರು. ನಿಗದಿಗೆ ಆಗ್ರಹಿಸಿ ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ ಸಿಐಟಿಯು ಸಂಯೋಜಿತ ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ, ಸಿಐಟಿಯು ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಬೀಡಿ, ಸಿಗಾರ್ ಕಾರ್ಮಿಕರ ಕಾನೂನು ಉಳಿವಿಗೆ, ಬೀಡಿ ಕಾರ್ಮಿಕರ ಪಿಎಫ್, ಪಿಂಚಣಿಯನ್ನು ಕನಿಷ್ಠ ಮಾಸಿಕ 6 ಸಾವಿರ ರು ನಿಗದಿ ಮಾಡಬೇಕು ಮತ್ತು ಪಿಎಫ್‌ನಲ್ಲಿ ಬೀಡಿ ಕಾರ್ಮಿಕರ ಹೆಸರು, ಹುಟ್ಟಿದ ದಿನ ಇತ್ಯಾದಿ ಸಮಸ್ಯೆಗಳನ್ನು ಪರಿಹಾರ ಕಾಣಲು ಸರಳ ವಿಧಾನವನ್ನು ಅನುಸರಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಚಿಲ್ಲರೆ ಬೀಡಿ, ಸಿಗರೇಟ್ ವ್ಯಾಪಾರಕ್ಕೂ ಲೈಸೆನ್ಸ್ ಕಡ್ಡಾಯ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ
ಕನಿಷ್ಠ ಕೂಲಿ ಹಾಗೂ ಬಾಕಿ ತುಟ್ಟಿಭತ್ಯೆ ಜಾರಿಗಾಗಿ, ಬೀಡಿ ಕಾರ್ಮಿಕರ ವಿವಿಧ ಯೋಜನೆಗಳಿಗೆ ಮೂಲಾಧಾರವಾಗಿದ್ದ ಬೀಡಿ ಸೆಸ್‌ನ್ನು ಪುನರ್ ಸ್ಥಾಪಿಸಬೇಕು, ಬೀಡಿ ಮತ್ತು ಸೀಗಾರ್ ಕಾರ್ಮಿಕರ ಸೇವಾ ಷರತ್ತು ಕಾಯಿದೆ- 1966 ರದ್ದುಪಡಿಸಬಾರದು. ಎಲ್ಲಾ ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಕನಿಷ್ಠ ವೇತನ, ಲಾಗ್ ಪುಸ್ತಕ, ಬೋನಸ್, ನೀಡುವಂತೆ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಎಲ್ಲಾ ಬೀಡಿ ಕಾರ್ಮಿಕರನ್ನು ಕಾರ್ಮಿಕರ ಭವಿಷ್ಯ ನಿಧಿಗೆ ಒಳಪಡಿಸಲು ಕಠಿಣ ಕ್ರಮಗಳನ್ನು ವಹಿಸಬೇಕು, ರಾಜ್ಯ ಸರ್ಕಾರಗಳು ಬೀಡಿ ಕಾರ್ಮಿಕರಿಗೆ ವಿಶೇಷವಾದ ಯೋಜನೆ/ಪ್ಯಾಕೇಜ್ ರೂಪಿಸಿ - ಜಾರಿಗೆ ತರಬೇಕು ಎಂದಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಶಾಹತಾಜ್ ಮಾತನಾಡಿ, ಬೀಡಿ ಕಾರ್ಮಿಕ ಮಹಿಳೆಯರು ಸಂಕಷ್ಟದ ಬದುಕು ನಡೆಸುತ್ತಿದ್ದು ಸರ್ಕಾರಗಳು ಈ ಕಾರ್ಮಿಕರ ಬಗ್ಗೆ ಗಮನವೆ ಹರಿಸುತ್ತಿಲ್ಲ ಎಂದು ಅಪಾದಿಸಿದರು. ಬೀಡಿ ಉದ್ಯಮಗಳು ಮತ್ತು ಕಾರ್ಮಿಕರ ಕಾನೂನುಗಳ ಜಾರಿ ಬಗ್ಗೆ ರಾಜ್ಯ ಕಾರ್ಮಿಕರ ಇಲಾಖೆ ಮತ್ತು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಜಂಟಿ ಸರ್ವೆ ಕಾರ್ಯವನ್ನು ನಡೆಸಬೇಕು. ಎಲ್ಲಾ ಬೀಡಿ ಕಾರ್ಮಿಕರ ಭವಿಷ್ಯ ನಿಧಿ ಸದಸ್ಯರಾಗಿ ಸೇರಿಸಲು ವಿಶೇಷ ಅಭಿಯಾನ ನಡೆಸಬೇಕು. ಇದಲ್ಲದೆ ಕಾರ್ಮಿಕರ ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ಇರುವ ವ್ಯತ್ಯಾಸಗಳನ್ನು ಸರಿಪಡಿಸಲು ಕಾರ್ಮಿರ ಸ್ನೇಹಿ ವಿಧಾನಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸ್ವಿಕರಿಸಲು ಬಂದ ಉಪ ತಹಸೀಲ್ದಾರ್ ಹಾಗೂ ಕಾರ್ಮಿಕ ನಿರೀಕ್ಷರಕರ ಬಳಿ ಅವರು ಅಹವಾಲುಗಳ ಸುರಿಮಳೆಯನ್ನೆಗೈದರು. ಸಮಸ್ಯೆಗಳನ್ನು ಅಲಿಸಿದ ಅಧಿಕಾರಿಗಳು ನೀತಿ ನಿರೂಪಕ ಅಂಶಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಸಂಘದ ಮುಖಂಡರಾದ ಶಾಹಿಸ್ತಾ ಪರ್ವಿನ್, ಇಂತಿಯಾಜ್, ರಪೀಕ್, ಹಲಿಮಾ ಬಾನು, ಮತ್ತಿತರರು ಇದ್ದರು.
ಗೋಲ್ಡನ್ ಟೆಂಪಲ್ ಒಳಗೆ ಬೀಡಿ ಸೇದಿದ ಆರೋಪ: ಮಹಿಳೆ ಮೇಲೆ ಹಲ್ಲೆ
ರಾಜ್ಯದಲ್ಲಿ 7-8 ಲಕ್ಷ ಜನ ಬೀಡಿ ಕಾರ್ಮಿಕರು ಇದ್ದಾರೆ. ಈ ಕಾರ್ಮಿಕರು ಹಲವು ದಶಕಗಳ ಕಾಲ ದುಡಿದಾಗ ಅದರಿಂದ ಸರ್ಕಾರ ಅಬಕಾರಿ ತೆರಿಗೆ, ಈಗ ಜಿಎಸ್‌ಟಿ ಮೂಲಕ ಲಕ್ಷಾಂತರ ಕೋಟಿ ರುಪಾಯಿಗಳನ್ನು ಆದಾಯ ಗಳಿಸಿದೆ. ಅದರಲ್ಲಿ ಈಗ ಬೀಡಿ ಕಾರ್ಮಿಕರಿಗೆ ಪರಿಹಾರ ನೀಡಲಿ.
ಸೈಯದ್ ಮುಜೀಬ್ ಜಿಲ್ಲಾ ಕಾರ್ಯದರ್ಶಿ, ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ