Asianet Suvarna News Asianet Suvarna News

ಭಾರತದ ನಿರುದ್ಯೋಗಿಗಳಲ್ಲಿ ಶೇ.83ರಷ್ಟು ಯುವಸಮೂಹ..!

2000ನೇ ಇಸವಿಯಲ್ಲಿ ಭಾರತದಲ್ಲಿ ವಿದ್ಯಾವಂತ ಸಮೂಹದಲ್ಲಿನ ನಿರುದ್ಯೋಗ ಪ್ರಮಾಣ ಶೇ.54.2ರಷ್ಟಿತ್ತು. 2022ರ ವೇಳೆಗೆ ಈ ಪ್ರಮಾಣ ಶೇ.65.7ಕ್ಕೆ ತಲುಪಿದೆ. ಜೊತೆಗೆ ಪ್ರಸಕ್ತ ದೇಶದಲ್ಲಿನ ವಿದ್ಯಾವಂತ ಯುವಸಮೂಹದಲ್ಲಿನ ನಿರುದ್ಯೋಗ ಪ್ರಮಾಣವು ಮಹಿಳೆಯರಲ್ಲಿ ಶೇ.76.7 ಮತ್ತು ಪುರುಷರಲ್ಲಿ ಶೇ.62.2ರಷ್ಟಿದೆ 

83 Percent of Youth Unemployed in India  Says IHD grg
Author
First Published Mar 28, 2024, 6:40 AM IST

ನವದೆಹಲಿ(ಮಾ.28): ಎನ್‌ಡಿಎ ಅವಧಿಯಲ್ಲಿ ಕೇಂದ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂಬ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ಆರೋಪದ ನಡುವೆಯೇ, ಭಾರತದಲ್ಲಿ ವಿದ್ಯಾವಂತ ಯುವಸಮೂಹದಲ್ಲಿನ ನಿರುದ್ಯೋಗ ಪ್ರಮಾಣ ಏರುಗತಿಯಲ್ಲಿದೆ. ಜೊತೆಗೆ ದೇಶದಲ್ಲಿ ನಿರುದ್ಯೋಗಿಗಳ ಪೈಕಿ ಪೈಕಿ ಶೇ.83ರಷ್ಟು ಪಾಲು ಯುವಸಮೂಹದ್ದೇ ಆಗಿದೆ ಎಂಬ ಆತಂಕಕಾರಿ ಅಂಕಿ ಅಂಶಗಳನ್ನು ವರದಿಯೊಂದು ಬಹಿರಂಗಪಡಿಸಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯು ದೆಹಲಿ ಮೂಲದ ಇನ್‌ಸ್ಟಿಟ್ಯೂಟ್‌ ಆಪ್‌ ಹ್ಯೂಮನ್‌ ಡೆವಲಪ್‌ಮೆಂಟ್‌ (ಐಎಚ್‌ಡಿ) ಸಹಯೋಗದಲ್ಲಿ ಸಿದ್ಧಪಡಿಸಿರುವ ‘ಭಾರತ ಉದ್ಯೋಗ ವರದಿ 2024’ ದಲ್ಲಿ ದೇಶದ ನಿರುದ್ಯೋಗ ಪ್ರಮಾಣದ ಕುರಿತು ಕಳವಳ ವ್ಯಕ್ತಪಡಿಸಲಾಗಿದೆ. ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರ್‌ ಈ ವರದಿ ಬಿಡುಗಡೆ ಮಾಡಿದ್ದಾರೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಭವಿಷ್ಯ ನಿಧಿ ಸಂಸ್ಥೆಯಲ್ಲಿ ನೇಮಕಾತಿ

ವರದಿಯಲ್ಲೇನಿದೆ?:

2000ನೇ ಇಸವಿಯಲ್ಲಿ ಭಾರತದಲ್ಲಿ ವಿದ್ಯಾವಂತ ಸಮೂಹದಲ್ಲಿನ ನಿರುದ್ಯೋಗ ಪ್ರಮಾಣ ಶೇ.54.2ರಷ್ಟಿತ್ತು. 2022ರ ವೇಳೆಗೆ ಈ ಪ್ರಮಾಣ ಶೇ.65.7ಕ್ಕೆ ತಲುಪಿದೆ. ಜೊತೆಗೆ ಪ್ರಸಕ್ತ ದೇಶದಲ್ಲಿನ ವಿದ್ಯಾವಂತ ಯುವಸಮೂಹದಲ್ಲಿನ ನಿರುದ್ಯೋಗ ಪ್ರಮಾಣವು ಮಹಿಳೆಯರಲ್ಲಿ ಶೇ.76.7 ಮತ್ತು ಪುರುಷರಲ್ಲಿ ಶೇ.62.2ರಷ್ಟಿದೆ ಎಂದು ವರದಿ ಹೇಳಿದೆ.

ಈ ಮೇಲಿನ ಅಂಕಿ ಅಂಶಗಳು ಭಾರತದಲ್ಲಿನ ನಿರುದ್ಯೋಗ ಪ್ರಮಾಣವು ಯುವಸಮೂಹದಲ್ಲೇ ಹೆಚ್ಚು ಕೇಂದ್ರೀಕೃತವಾಗುತ್ತಿದೆ, ಅದರಲ್ಲೂ ನಗರ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬಂದಿದೆ ವರದಿ ಕಳವಳ ವ್ಯಕ್ತಪಡಿಸಿದೆ.
ಇನ್ನು 2000ರಿಂದ 2019ರ ಅವಧಿಯಲ್ಲಿ ಭಾರತದಲ್ಲಿ ಯುವಸಮೂಹದಲ್ಲಿನ ಉದ್ಯೋಗ ಮತ್ತು ಅಪೂರ್ಣ ಉದ್ಯೋಗದ ಪ್ರಮಾಣ ಏರುಗತಿಯಲ್ಲೇ ಇತ್ತು. ಆದರೆ ಕೋವಿಡ್‌ ಅವಧಿಯಲ್ಲಿ ಈ ಪ್ರಮಾಣ ಇಳಿಮುಖವಾಯ್ತು. 2000ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ವಿದ್ಯಾವಂತ ಯುವಸಮೂಹ ಉದ್ಯೋಗಿಗಳ ಪೈಕಿ ಪೈಕಿ ಶೇ.50ರಷ್ಟು ಜನರು ಸ್ವಯಂ ಉದ್ಯೋಗ ಮಾಡುತ್ತಿದ್ದರು, ಶೇ.13ರಷ್ಟು ಜನರು ನಿಯಮಿತ ಉದ್ಯೋಗ ಹೊಂದಿದ್ದರು, ಶೇ.37ರಷ್ಟು ಜನರು ತಾತ್ಕಾಲಿಕ ಉದ್ಯೋಗ ಹೊಂದಿದ್ದರು. ಈ ಪ್ರಮಾಣ 2011ರಲ್ಲಿ ಕ್ರಮವಾಗಿ ಶೇ.46, ಶೇ,21, ಶೇ.33ರಷ್ಟಿತ್ತು; 2019ರಲ್ಲಿ ಶೇ.42, ಶೇ.32, ಶೇ.26ರಷ್ಟಿತ್ತು; 2022ಲ್ಲಿ ಶೇ.47, ಶೇ.28 ಮತ್ತು ಶೇ.25ರಷ್ಟಿತ್ತು ಎಂದು ವರದಿ ಹೇಳಿದೆ.

80 ಲಕ್ಷ ಉದ್ಯೋಗ:

ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದಲ್ಲಿ 70-80 ಲಕ್ಷ ಜನರು ಹೊಸದಾಗಿ ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದಿರುವ ವರದಿ, ಹೊಸ ಉದ್ಯೋಗ ಸೃಷ್ಟಿಗೆ 5 ಅಂಶಗಳನ್ನು ಮುಂದಿಟ್ಟುಕೊಂಡು ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದೆ. ಅವುಗಳೆಂದರೆ, ಉದ್ಯೋಗ ಸೃಷ್ಟಿಗೆ ಉತ್ತೇಜನ; ಉದ್ಯೋಗದ ಗುಣಮಟ್ಟ ಹೆಚ್ಚಳ; ಕಾರ್ಮಿಕ ಮಾರುಕಟ್ಟೆಯಲ್ಲಿನ ಅಸಮಾನತೆ ನಿವಾರಣೆ; ಹಾಲಿ ಕಾರ್ಮಿಕರ ಕೌಶಲ್ಯ ಮತ್ತು ಕಾರ್ಮಿಕ ನೀತಿ ಬಲಪಡಿಸುವುದು ಮತ್ತು ಕಾರ್ಮಿಕ ಮಾರುಕಟ್ಟೆಯಲ್ಲಿನ ಜ್ಞಾನದ ಕೊರತೆ ನಿವಾರಿಸುವುದು.

ಸರ್ಕಾರವೇ ಎಲ್ಲವನ್ನೂ ಮಾಡಲಾಗದು: ನಾಗೇಶ್ವರನ್‌

ನವದೆಹಲಿ: ವರದಿಯಲ್ಲಿನ ನಿರುದ್ಯೋಗ ಪ್ರಮಾಣದ ಹೆಚ್ಚಳ ಕುರಿತು, ವರದಿ ಬಿಡುಗಡೆ ಮಾಡಿದ ಮಾತನಾಡಿದ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರ್‌, ‘ಪ್ರತಿಯೊಂದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸರ್ಕಾರವೇ ಮಧ್ಯಪ್ರವೇಶ ಮಾಡಬೇಕು ಎಂದು ಹೇಳುವುದು ಸರಿಯಲ್ಲ. ಈ ಮನಸ್ಥಿತಿಯಿಂದ ನಾವು ಹೊರಬರಬೇಕು. ಇದು ವಾಣಿಜ್ಯ ವಲಯ ಮತ್ತು ಯಾರು ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಾರೋ ಅವರು ನೇಮಕ ಮಾಡಿಕೊಳ್ಳಬೇಕು’ ಎಂದು ಹೇಳಿದರು. 

ನಿರುದ್ಯೋಗ ಪ್ರಮಾಣದ ಕುರಿತು ಕಾಂಗ್ರೆಸ್‌ ಕಿಡಿ

ನವದೆಹಲಿ: ವರದಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌, ‘ದೇಶ ಇದೀಗ ನಿರುದ್ಯೋಗದ ಬಾಂಬ್‌ ಮೇಲೆ ಕುಳಿತಿದೆ. ದೇಶದ ಯುವಕರು ಮೋದಿ ಸರ್ಕಾರದ ಉದಾಸೀನತೆ ಬಿಸಿ ಅನುಭವಿಸುತ್ತಿದ್ದಾರೆ ಎಂದಿದೆ.

ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಹಾಕುವ ಮುನ್ನ ದೇಶದ ಮತದಾರರು, 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ 12 ಕೋಟಿ ಉದ್ಯೋಗ ಕಸಿದುಕೊಂಡಿದ್ದಾರೆ ಎಂದು ನೆನಪಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮದಲ್ಲಿ ಇಂಜಿನಿಯರ್ ನೇಮಕಾತಿ, ಲಕ್ಷಕ್ಕೂ ಹೆಚ್ಚು ವೇತನ!

‘ದೇಶದಲ್ಲಿನ ಈ ನಿರುದ್ಯೋಗ ಸಮಸ್ಯೆ ನಿವಾರಣೆಗೆಂದೇ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಯುವ ನ್ಯಾಯ ಯೋಜನೆ ಪ್ರಕಟಿಸಿದೆ. ಇದರನ್ವಯ ಕೇಂದ್ರ ಸರ್ಕಾರದ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದಿದ್ದಾರೆ.

ಯುವಸಮೂಹದಲ್ಲಿ ಉದ್ಯೋಗ: ವರ್ಷ ಸ್ವ ಉದ್ಯೋಗ ನಿಯಮಿತ ಉದ್ಯೋಗ ತಾತ್ಕಾಲಿಕ ಉದ್ಯೋಗ

2000 ಶೇ.50 ಶೇ.13 ಶೇ.37
2012 ಶೇ.46 ಶೇ.21 ಶೇ.33
2019 ಶೇ.42 ಶೇ.32 ಶೇ.26
2022 ಶೇ.47 ಶೇ.28 ಶೇ.25

Follow Us:
Download App:
  • android
  • ios