ಪ್ರಧಾನಿ ಅನಾವರಣಗೊಳಿಸಿದ ನೂತನ ರಾಷ್ಟ್ರೀಯ ಸರಕು ಸಾಗಣೆ ನೀತಿಯಲ್ಲೇನಿದೆ?

ಸಾರಿಗೆ ವ್ಯವಸ್ಥೆ ಸವಾಲುಗಳಿಗೆ ಹೊಸ ನೀತಿ ಪರಿಹಾರ ನೀಡಲಿದೆ, ಸಾರಿಗೆ ವೆಚ್ಚ ಇಳಿಸುವಲ್ಲಿ ಕೇಂದ್ರದ ಮಹತ್ವದ ಕ್ರಮ ಇದಾಗಿದೆ ಎಂದು ಮೋದಿ ಹೇಳಿದ್ದಾರೆ
 

What is the new National Freight Policy unveiled by the Prime Minister akb

ನವದೆಹಲಿ: ರಾಷ್ಟ್ರೀಯ ಸರಕು ನೀತಿಯನ್ನು (National Commodity Policy) ಶನಿವಾರ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ. ಇದೇ ವೇಳೆ, ಇದು ದೇಶದ ಸಾರಿಗೆ ವ್ಯವಸ್ಥೆ (transport system) ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರವಾಗಿದೆ ಎಂದು ಬಣ್ಣಿಸಿದ್ದಾರೆ. ನೀತಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ‘ನೂತನ ಲಾಜಿಸ್ಟಿಕ್‌ ನೀತಿಯಿಂದಾಗಿ ಶೇ.13 ರಿಂದ 14ರಷ್ಟಿದ್ದ ಸಾರಿಗೆ ವ್ಯವಸ್ಥೆ ವ್ಯವಹಾರದ ವೆಚ್ಚ ಒಂದಂಕಿಗೆ ಇಳಿಯಲಿದೆ. ಇದರಿಂದ ಸಾಗಾಣಿಕೆ ಸಮಯ ಹಾಗೂ ವೆಚ್ಚ ಎರಡೂ ತಗ್ಗಲಿದೆ’ ಎಂದರು.

ಹೊಸ ನೀತಿಯು ದೇಶದ ಸಾರಿಗೆ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರವಾಗಿದ್ದು, ಪಿಎಂ ಗತಿ ಶಕ್ತಿ ಯೋಜನೆ (Gati Shakti Yojana) ಮೂಲಸೌಕರ್ಯ ವೃದ್ಧಿಗೆ ಪೂರಕವಾಗಿದೆ ಎಂದರು. ಭಾರತದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು (global market) ತಲುಪಿವೆ. ಇದಕ್ಕೆ ಪೂರಕವಾಗಿ ದೇಶ ಬೆಂಬಲ ನೀಡುವ ವ್ಯವಸ್ಥೆಯನ್ನೂ ಬಲಪಡಿಸಬೇಕು. ರಾಷ್ಟ್ರೀಯ ಲಾಜಿಸ್ಟಿಕ್‌ ನೀತಿಯು (Logistics Policy) ದೇಶದ ಬೆಂಬಲ ವ್ಯವಸ್ಥೆಯನ್ನು ಆಧುನೀಕಗೊಳಿಸುವಲ್ಲಿ ನೆರವಾಗಲಿದೆ ಎಂದರು.

ಪ್ರಧಾನಿ ಮೋದಿಗೆ ಸಿಕ್ಕಿದ್ದ ಗಿಫ್ಟ್‌ಗಳ ಆನ್‌ಲೈನ್‌ ಹರಾಜು: ಇಲ್ಲಿದೆ ನೋಂದಣಿ ವೆಬ್‌ಸೈಟ್

ಲಾಜಿಸ್ಟಿಕ್‌ ವಲಯವನ್ನು ಸುಧಾರಿಸುವಲ್ಲಿ ಡ್ರೋನ್‌ ಕೂಡಾ ನೆರವಾಗಲಿದೆ. ಕಸ್ಟಮ್‌ ಹಾಗೂ ಇ-ವೇ ಬಿಲ್‌ಗಳಲ್ಲಿ ಮುಖರಹಿತ ಮೌಲ್ಯಮಾಪನ (ಫೇಸ್‌ಲೆಸ್‌ ಅಸೆಸ್‌ಮೆಂಟ್‌), ಲಾಜಿಸ್ಟಿಕ್‌ ವಲಯದಲ್ಲಿ ಫಾಸ್ಟ್ಯಾಗ್‌ ದಕ್ಷತೆಗೆ (FASTag efficiency) ಕಾರಣವಾಗಿದೆ. ಬಂದರುಗಳ ಸಾಮರ್ಥ್ಯ ಹೆಚ್ಚಿದ್ದು, ಬಂದರುಗಳನ್ನು ಸಂಪರ್ಕಿಸಲು ನೆರವಾಗುವ ಸಾಗರಮಾಲಾ ಯೋಜನೆ ಅಡಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ ಎಂದರು.

ಕಳೆದ 3 ವರ್ಷಗಳಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಲಾಜಿಸ್ಟಿಕ್‌ ನೀತಿಯನ್ನು (Ministry of Commerce) ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. 2019ರಲ್ಲಿ ವಾಣಿಜ್ಯ ಸಚಿವಾಲಯ ಲಾಜಿಸ್ಟಿಕ್‌ ನೀತಿಯ ಕರಡನ್ನು ಸಮಾಲೋಚನೆಗಾಗಿ ಬಿಡುಗಡೆಗೊಳಿಸಿತ್ತು. 2022-23ನೇ ಸಾಲಿನ ಬಜೆಟ್‌ ಘೋಷಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Finance Minister Nirmala Sitharaman) ರಾಷ್ಟ್ರೀಯ ಲಾಜಿಸ್ಟಿಕ್‌ ನೀತಿಯ ಬಗ್ಗೆಯೂ ಘೋಷಣೆ ಮಾಡಿದ್ದರು. ಕರಡು ನೀತಿಯ ಪ್ರಕಾರ ಸರ್ಕಾರವು ಎಲ್ಲ ಲಾಜಿಸ್ಟಿಕ್‌ ಹಾಗೂ ಸುಗಮ ವ್ಯಾಪಾರದ ವಿಚಾರದಲ್ಲಿ ಒಂದೇ ನಿರ್ಣಾಯಕ ಅಂಶವನ್ನು ಪರಿಗಣಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇದರಿಂದ ಲಾಜಿಸ್ಟಿಕ್‌ ವೆಚ್ಚ 5 ವರ್ಷಗಳಲ್ಲಿ ಶೇ.10ರಷ್ಟುಇಳಿಯಲಿದೆ. ಲಾಜಿಸ್ಟಿಕ್‌ ವಲಯ ದೇಶದ ಜಿಡಿಪಿಯ ಶೇ.13-14ರಷ್ಟುಪಾಲನ್ನು ಹೊಂದಿದೆ.

ಇದು ಆರಂಭ ಮಾತ್ರ, ದಕ್ಷಿಣ ಆಫ್ರಿಕಾ, ನಮೀಬಿಯಾದಿಂದ ಭಾರತಕ್ಕೆ ಬರಲಿದೆ 500 ಚೀತಾ!

ನೀತಿಯಲ್ಲೇನಿದೆ?

  • ಇ-ಸರಕು ಮಾರುಕಟ್ಟೆಗೆ ಏಕಗವಾಕ್ಷಿ ಪದ್ಧತಿ. ಇದರಿಂದ 7 ಸಚಿವಾಲಯಗಳು ಒಂದೇ ವೇದಿಕೆಗೆ
  • ಏಕಗವಾಕ್ಷಿ ಪದ್ಧತಿಯಿಂದ ಸರಕು ಕಂಪನಿನಗಳಿಗೆ ಸರಕು ಸಾಗಣೆ ಕುರಿತ ಮಾಹಿತಿ, ವಿವಿಧ ಅನುಮೋದನೆಗಳು ಒಂದೇ ಕಡೆ ಲಭ್ಯ
  • ಹಡಗು, ರಸ್ತೆ ಸಾರಿಗೆ (Road Transport), ಪೆಟ್ರೋಲಿಯಂ, ವಿಮಾನ ಸೇರಿ ವಿವಿಧ ಸಚಿವಾಲಯಗಳ ಮಧ್ಯೆ ಸಮನ್ವಯಕ್ಕೆ ಜಾಲ ಯೋಜನಾ ಸಮೂಹ ರಚನೆ
  • ಸಾಗರಮಾಲಾ ಯೋಜನೆಯಿಂದ ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆ ಸುಲಭ, ಸಾಕಷ್ಟುಸಮಯ, ವೆಚ್ಚ ಉಳಿತಾಯ
  • ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್‌ ಅಳವಡಿಕೆಯಿಂದ ಸರಕು ಸಾಗಣೆ ವಿಳಂಬ ನಿಯಂತ್ರಣ
  • ಡ್ರೋನ್‌ ಮೂಲಕ ಹಾಗೂ ನದಿಗಳಲ್ಲಿ ಸರಕು ಸಾಗಣೆಗೆ ಉತ್ತೇಜನ
  •  ಈ ಕ್ರಮಗಳಿಂದ ಶೇ.13-14ರಷ್ಟಿದ್ದ ಸರಕು ಸಾಗಣೆ ವೆಚ್ಚ ಒಂದಂಕಿಗೆ ಇಳಿಕೆ
     
Latest Videos
Follow Us:
Download App:
  • android
  • ios