ಮುಖ್ಯಮಂತ್ರಿ ಬರೋವರೆಗೂ ಅಂತ್ಯಸಂಸ್ಕಾರವಿಲ್ಲ; ಸಂತ್ರಸ್ಥೆ ಕುಟುಂಬದ ಹಠ!
'ಮುಖ್ಯಮಂತ್ರಿ ಬರದಿದ್ದರೆ ಅಂತ್ಯಸಂಸ್ಕಾರ ಮಾಡುವುದಿಲ್ಲ'| ಉನ್ನಾವ್ ಅತ್ಯಾಚಾರ ಸಂತ್ರಸ್ಥೆಯ ಕುಟುಂಬ ವರ್ಗದ ಪಟ್ಟು| ಹತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಭರವಸೆಗೆ ಕುಟುಂಬ ವರ್ಗದ ಒತ್ತಾಯ| ಯೋಗಿ ಆದಿತ್ಯನಾಥ್ ಬರುವಿಕೆಗೆ ಕಾಯುತ್ತಿರುವ ಸಂತ್ರಸ್ಥೆಯ ಕುಟುಂಬ ವರ್ಗ| ಪೊಲೀಸರ ಸತತ ಮನವೋಲಿಕೆ ಪ್ರಯತ್ನ ವಿಫಲ| ಸಂತ್ರಸ್ಥೆಯ ಮನೆಗೆ ಹರಿದು ಬರುತ್ತಿರುವ ರಾಜಕೀಯ ನಾಯಕರ ದಂಡು|
ಲಕ್ನೋ(ಡಿ.08): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರುವವರೆಗೂ, ಉನ್ನಾವ್ ಅತ್ಯಾಚಾರ ಸಂತ್ರಸ್ಥೆಯ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬ ವರ್ಗ ಸ್ಪಷ್ಟಪಡಿಸಿದೆ.
ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಬಂದು, ಹತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಭರವಸೆ ನೀಡುವವರೆಗೂ ಸಂತ್ರಸ್ಥೆಯ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ.
ಸುಟ್ಟ ಗಾಯಗಳಿಂದ ಉನ್ನಾವ್ ಸಂತ್ರಸ್ತೆ ಸಾವು: ಮರಣೋತ್ತರ ವರದಿ!
ಪೊಲೀಸರ ಸತತ ಮನವೋಲಿಕೆ ಪ್ರಯತ್ನ ವಿಫಲವಾಗಿದ್ದು, ಯೋಗಿ ಆದಿತ್ಯನಾಥ್ ಸ್ಥಳಕ್ಕೆ ಬರಲೇಬೇಕು ಎಂದು ಕುಟುಂಬ ವರ್ಗ ಪ್ರತಿಭಟನೆ ನಡೆಸುತ್ತಿದೆ. ಆದರೆ ಅಂತ್ಯಸಂಸ್ಕಾರಕ್ಕೆ ಬರಲು ಯೋಗಿ ಆದಿತ್ಯನಾಥ್ ತಯಾರಿಲ್ಲ ಎನ್ನಲಾಗಿದೆ.
ಉನ್ನಾವ್ ಸಂತ್ರಸ್ತೆ ಮನೆಗೆ ರಾಜಕೀಯ ನಾಯಕರ ದಂಡು!
ಈ ಮಧ್ಯೆ ಉನ್ಣಾವ್ ಅತ್ಯಾಚಾರ ಸಂತ್ರಸ್ಥೆಯ ಮನೆಗೆ ರಾಜಕೀಯ ನಾಯಕರ ದಂಡೇ ಹರಿದು ಬರುತ್ತಿದ್ದು, ಪ್ರಿಯಾಂಕಾ ಗಾಂಧಿ, ಯೋಗಿ ಸರ್ಕಾರದ ಇಬ್ಬರು ಸಚಿವರು ಹಾಗೂ ಪ್ರಮುಖ ರಾಜಕೀಯ ಪಕ್ಷಳ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.