ಕೋಪಗೊಂಡ ಸಚಿವ ಅಖಿಲ್ ಗಿರಿ ನಾಲಿಗೆ ಹರಿಬಿಟ್ಟಿದ್ದು, ಕೋಲಿನಿಂದ ಹೊಡೆಯುವದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರದ ಸಚಿವರು ಹಲವು ಬಾರಿ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಸಿಎಂ ಮಮತಾ ಬ್ಯಾನರ್ಜಿ ಸಂಪುಟದ ಕಾರಾಗೃಹ ಸಚಿವ ಅಖಿಲ್ ಗಿರಿ ಓರ್ವ ಮಹಿಳಾಧಿಕಾರಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸಚಿವರ ಪದಪ್ರಯೋಗಕ್ಕೆ ಬಿಜೆಪಿ ಕಿಡಿಕಾರಿದೆ. ಪೂರ್ವ ಮೆದಿನಪುರದ ತಾಜಾಪುರ ವ್ಯಾಪ್ತಿಯ ಸರ್ಕಾರಿ ಜಮೀನಿನ ಅತಿಕ್ರಮಣ ಸಂಬಂಧ ಮಹಿಳಾಧಿಕಾರಿ ಮತ್ತು ಸಚಿವರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಈ ವೇಳೆ ಕೋಪಗೊಂಡ ಸಚಿವ ಅಖಿಲ್ ಗಿರಿ ನಾಲಿಗೆ ಹರಿಬಿಟ್ಟಿದ್ದು, ಕೋಲಿನಿಂದ ಹೊಡೆಯುವದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ.
ಮಹಿಳ ಅಧಿಕಾರಿ ಅತಿಕ್ರಮಣ ತೆರವುಗೊಳಿಸಲು ಮುಂದಾಗಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಸಚಿವ ಅಖಿಲ್ ದರ್ಪ ಮರೆದಿದ್ದಾರೆ. ಮೇಡಮ್ ಅರಣ್ಯ ಇಲಾಖೆ ಏನು ಕೆಲಸ ಮಾಡುತ್ತೆ ಅನ್ನೋದು ನನಗೆ ಎಲ್ಲಾ ಗೊತ್ತಿದೆ. ನಿಮ್ಮ ಜೀವಿತಾವಧಿ ಇನ್ನೂ ಏಳೆಂಟು ದಿನ ಅಥವಾ ಕೆಲಸ ಸಮಯ ಆಗಿರಲೂಬಹುದು. ನಾನು ಹೇಳುವದನ್ನು ಪಾಲಿಸಿ. ಅರಣ್ಯ ವಿಭಾಗದಲ್ಲಿ ಎಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ವಿಚಾರವೂ ನನಗೆ ತಿಳಿದಿದೆ. ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ರೆ ಎಲ್ಲಾ ರಹಸ್ಯಗಳು ಹೊರ ಬರಲಿವೆ. ನಾನು ಯಾರು ಎಂಬುವುದು ನಿಮಗೆ ಇನ್ನೂ ಗೊತ್ತಿಲ್ಲ. ಇಷ್ಟೆಲ್ಲಾ ಹೇಳಿದ್ಮೇಲೂ ಸುಮ್ಮನಾಗದ ಸಚಿವ, ಮಹಿಳಾಧಿಕಾರಿಯನ್ನು ಬೇವಕೂಫ್ ಎಂದು ಸಹ ಜರಿದಿದ್ದಾರೆ.
700 KG ತೂಕದ ದೈತ್ಯ ಎಮ್ಮೆಯೊಂದಿಗೆ ಹೋರಾಡಿ ಅಮ್ಮನ ಪ್ರಾಣ ಉಳಿಸಿ, ಉಸಿರು ಚೆಲ್ಲಿದ ಮಗ
ಕೆಲ ಅಂಗಡಿ ಮಾಲೀಕರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ವಿಷಯ ತಿಳಿದ ಅರಣ್ಯಾಧಿಕಾರಿ ಮನೀಷಾ ತಮ್ಮ ಸಿಬ್ಬಂದಿ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದರು. ತೆರವು ಕಾರ್ಯಾಚರಣೆಯ ವಿಷಯ ತಿಳಿಯುತ್ತಿದ್ದಂತೆ ಸಚಿವ ಅಖಿಲ್ ಗಿರಿ ಅಲ್ಲಿಗೆ ಬಂದಿದ್ದು, ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ನನಗೆ ನಿಮ್ಮೊಂದಿಗೆ ಅಥವಾ ಇಲ್ಲಿರುವ ಯಾವುದೇ ಅಂಗಡಿ ಮಾಲೀಕರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಾನು ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ ಎಂದು ಮನೀಷಾ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸಚಿವರು ಜನರ ಮುಂದೆ ಮಹಿಳಾಧಿಕಾರಿಯನ್ನು ನಿಂದಿಸಿದ್ದಾರೆ.
ಭವಿಷ್ಯದ ಕನಸು ಕಂಡು ಊರು ಬಿಟ್ಟು ಇನ್ಫೋಸಿಸ್ ಸರ್ವಿಸ್ ಬಾಯ್ ಆಗಿ ದುಡಿದಾತ ಇಂದು ಎರಡು ಕಂಪೆನಿ ಒಡೆಯ!
