ಚೀನಾಗೆ ಭಾರೀ ಮುಖಭಂಗ, ಭಾರತಕ್ಕೆ ರಷ್ಯಾದ S-400!
ಚೀನಾಗೆ ಭಾರೀ ಮುಖಭಂಗ| ಭಾರತಕ್ಕೆ S-400 ನೀಡಲು ರಷ್ಯಾ ಒಪ್ಪಿಗೆ| ಭಾರತಕ್ಕೆ ಶಸ್ತ್ರಾಸ್ತ್ರ ನೀಡಬೇಡಿ ಎಂದ ಚೀನಾ ಮನವಿ ಧಿಕ್ಕರಿಸಿದ ಗೆಳೆಯ ರಷ್ಯಾ| ಶೀಘ್ರದಲ್ಲೇ ಭಾರತ್ಕಕೆ ಬರಲಿದೆ S-400
ಮಾಸ್ಕೋ(ಜೂ.24): ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನದ ಪ್ರವಾಸದ ಮೇರೆಗೆ ರಷ್ಯಾಗೆ ತೆರಳಿದ್ದಾರೆ. ಈ ಭೇಟಿ ವೇಳೆ ಚೀನಾಗೆ ಭಾರೀ ಮುಖಭಂಗವುಂಟು ಮಾಡುವ ಮಾತುಕತೆ ನಡೆದಿದ್ದು, ರಷ್ಯಾ ತನ್ನ ಗೆಳೆಯ ಭಾರತಕ್ಕೆ ಅತೀ ಶೀಘ್ರದಲ್ಲಿ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ಎಸ್ -400 ಪೂರೈಸುವುದಾಗಿ ಭರವಸೆ ನೀಡಿದೆ.
ಚೀನಾ ಭಾರತ ಗಡಿ ಬಿಕ್ಕಟ್ಟಿನ ನಡುವೆ ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!
ಹೌದು ರಷ್ಯಾ ಪ್ರವಾಸದಲ್ಲಿ ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗಿನ ಮಾತುಕತೆ ವೇಳೆ ರಷ್ಯಾ ಉಪ ಪ್ರಧಾನಿ ಯೂರಿ ಇವನೊವಿಕ್ ಬೋರಿಸೊವ್ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಎಸ್ -400 ಅತ್ಯಂತ ಶೀಘ್ರದಲ್ಲಿ ನೀಡುವುದಾಗಿ ಈ ಬಗ್ಗೆ ಭರವಸೆ ನೀಡಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, 'ಭಾರತ ಮತ್ತು ರಷ್ಯಾ ನಡುವೆ ವಿಶೇಷ ಸಹಕಾರವಿದೆ ಮತ್ತು ಭಾರತದೊಂದಿಗಿನ ಒಪ್ಪಂದವು ಶೀಘ್ರವಾಗಿ ಪೂರ್ಣಗೊಳ್ಳಲಿದೆ ಎಂದು ರಷ್ಯಾ ಭರವಸೆ ನೀಡಿದೆ' ಎಂದಿದ್ದಾರೆ. ಅಲ್ಲದೇ 'ರಷ್ಯಾದ ಉಪ ಪ್ರಧಾನಿ ಜೊತೆಗಿನ ಮಾತುಕತೆ ಬಹಳ ಸಕಾರಾತ್ಮಕವಾಗಿತ್ತು. ಸಾಂಕ್ರಾಮಿಕ ರೋಗದಿಂದ ಉದ್ಭವಿಸಿರುವ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡ ನಮ್ಮ ದ್ವಿಪಕ್ಷೀಯ ಸಂಬಂಧಗಳು ಗಟ್ಟಿಯಾಗಿವೆ. ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳನ್ನು ಮುಂದುವರಿಸಲಾಗುವುದು ಎಂಬ ಭರವಸೆ ನನಗಿದೆ' ಎಂದಿದ್ದಾರೆ
ಶೀಘ್ರವೇ S-400 ಮಿಸೈಲ್ ಪೂರೈಸಲು ರಷ್ಯಾ ಒತ್ತಾಯಿಸಿದ ರಾಜನಾಥ್ ಸಿಂಗ್!
ಇನ್ನು ರಾಜನಾಥ್ ಸಿಂಗ್ ರಷ್ಯಾಗೆ ಭೇಟಿ ನೀಡುವುದಕ್ಕೂ ಮುನ್ನ ಚೀನಾದ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ ಈ 'ಸೂಕ್ಷ್ಮ' ಕಾಲದಲ್ಲಿ ಭಾರತಕ್ಕೆ ಹೊಸ ಶಸ್ತ್ರಾಸ್ತ್ರಗಳನ್ನು ನೀಡಬಾರದು ಎಂದು ಮನವಿ ಮಾಡಿತ್ತು. ಆದರೆ ರಷ್ಯಾ ಚೀನಾದ ಮನವಿಯನ್ನು ಧಿಕ್ಕರಿಸಿದ್ದು, ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ.
5 ಬಿಲಿಯನ್ ಡಾಲರ್ ನೀಡಿ 5 ಎಸ್-400 ವ್ಯವಸ್ಥೆಯನ್ನು ಭಾರತ ಖರೀದಿಸುತ್ತಿದೆ
ರಷ್ಯಾದ ಪತ್ರಿಕೆ ಸ್ಪುಟ್ನಿಕ್ ನ್ಯೂಸ್‌ನ ವರದಿಯ ಪ್ರಕಾರ, ಎಸ್ -400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಮೊದಲೇ ನೀಡುವಂತೆ ಭಾರತ ಸರ್ಕಾರ ಕೋರಿತ್ತು ಮತ್ತು ರಷ್ಯಾ ಇದಕ್ಕೆ ಸಮ್ಮತಿಸಿದೆ. 2018 ರಲ್ಲಿ ಭಾರತ ಮತ್ತು ರಷ್ಯಾ ನಡುವೆ ವಿಶ್ವದ ಅತ್ಯಾಧುನಿಕ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಎಸ್ -400 ಖರೀದಿಯ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂದರೆ ಈ ವ್ಯವಸ್ಥೆಯ ಒಟ್ಟು ಐದು ಘಟಕಗಳಲ್ಲಿ 5 ಬಿಲಿಯನ್ ಡಾಲರ್ ಅಂದರೆ ಸರಿ ಸುಮಾರು 40 ಸಾವಿರ ಕೋಟಿಗೆ ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ. ಇದಲ್ಲದೆ ಭಾರತವು ರಷ್ಯಾದಿಂದ 31 ಫೈಟರ್ ಜೆಟ್‌ಗಳನ್ನು ಖರೀದಿಸುತ್ತಿದೆ. ಟಿ -90 ಟ್ಯಾಂಕ್‌ನ ಪ್ರಮುಖ ಬಿಡಿ ಭಾಗಗಳ ಬಗ್ಗೆಯೂ ಕೂಡ ಭಾರತ ರಷ್ಯಾದೊಂದಿಗೆ ಮಾತುಕತೆ ನಡೆಸಿದೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"