ಇನ್ಮೇಲೆ 420 ಅಂತ ಸುಮ್ನೆ ಯಾರನ್ನೂ ಅಪಹಾಸ್ಯ ಮಾಡ್ಬೇಡಿ: ಬದಲಾಗ್ತಿದೆ ಐಪಿಸಿ ಸೆಕ್ಷನ್ 420 ಕಾನೂನು!

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 ಅನ್ನು ಇದೀಗ ಭಾರತೀಯ ನ್ಯಾಯ ಸಂಹಿತೆ, 2023 ರ ಸೆಕ್ಷನ್ 316 ಎಂದು ಪಟ್ಟಿ ಮಾಡಲಾಗಿದೆ. ಇದು 163 ವರ್ಷಗಳ ಹಳೆಯ ಕಾನೂನನ್ನು ಬದಲಿಸಲು ಪ್ರಯತ್ನಿಸುತ್ತದೆ.

revamp of criminal laws ipc section 420 loses its sting murder moves up to 101 ash

ನವದೆಹಲಿ (ಆಗಸ್ಟ್ 12, 2023): '420' ಅಂತ ಅನೇಕರನ್ನು ಅಪಹಾಸ್ಯ ಮಾಡೋದು ಅನೇಕರ ಅಭ್ಯಾಸವಾಗಿ ಹೋಗಿದೆ. ಮೋಸ ಮಾಡುವುದು ಮತ್ತು ತಮ್ಮ ಭರವಸೆಯನ್ನು ಪೂರೈಸಲು ವಿಫಲರಾದ ಜನರನ್ನು ಸಾಮಾನ್ಯವಾಗಿ  '420' ಅಂತ ಅಪಹಾಸ್ಯ ಮಾಡಲಾಗುತ್ತಿತ್ತು. ತಲೆಮಾರುಗಳಿಂದಲೂ ಇದು ನಡೆದು ಬಂದಿದೆ. ಇದರ ಜನಪ್ರಿಯತೆ ಎಷ್ಟು ಅಂದರೆ,  ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 ರಾಜ್ ಕಪೂರ್ ಚಲನಚಿತ್ರ ‘’ಶ್ರೀ 420’’ ಹೆಸರಿಡಲು ಸಹ ಕಾರಣವಾಗಿದೆ. ಆದರೀಗ, ಶುಕ್ರವಾರ ಅಮಿತ್ ಶಾ ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಾಯಿಸಲು ಹೊರಟಿದ್ದು, ಇದಕ್ಕೆ ನೂತನ ಹೆಸರುಗಳನ್ನಿಟ್ಟಿದ್ದಾರೆ. ಅಲ್ಲದೆ, ಕಾನೂನು ಸಹ ಬದಲಾಗ್ತಿದ್ದು, ಸೆಕ್ಷನ್‌ಗಳಲ್ಲೂ ಬದಲಾಗ್ತಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 ಅನ್ನು ಇದೀಗ ಭಾರತೀಯ ನ್ಯಾಯ ಸಂಹಿತೆ, 2023 ರ ಸೆಕ್ಷನ್ 316 ಎಂದು ಪಟ್ಟಿ ಮಾಡಲಾಗಿದೆ. ಇದು 163 ವರ್ಷಗಳ ಹಳೆಯ ಕಾನೂನನ್ನು ಬದಲಿಸಲು ಪ್ರಯತ್ನಿಸುತ್ತದೆ. ಇನ್ನು, ಈ ಬದಲಾವಣೆಗಳು ಸೆಕ್ಷನ್ 420 ಗೆ ಮಾತ್ರ ಸೀಮಿತವಾಗಿಲ್ಲ. ಸೆಕ್ಷನ್ 302 ಅಂದರೆ ಕೊಲೆಯ ಸೆಕ್ಷನ್‌ ಸಹ ಬದಲಾಗ್ತಿದ್ದು, ಇದು ಈಗ ಪ್ರಸ್ತಾವಿತ ಹೊಸ ಕಾನೂನಿನಲ್ಲಿ ಸೆಕ್ಷನ್ 101 ಆಗಿರುತ್ತದೆ. ಅಂತೆಯೇ, ಅಕ್ರಮ ಸಭೆಗೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 144 ಅನ್ನು ಈಗ ಸೆಕ್ಷನ್ 187 ರ ಅಡಿಯಲ್ಲಿ ತರಲು ಪ್ರಸ್ತಾಪಿಸಲಾಗಿದೆ.

ಇದನ್ನು ಓದಿ: ಮದ್ವೆಯಾಗೋದಾಗಿ ನಂಬಿಸಿ ಸೆಕ್ಸ್‌ ಮಾಡಿದ್ರೆ ಇನ್ಮುಂದೆ 20 ವರ್ಷ ಕಠಿಣ ಶಿಕ್ಷೆ: ಅಮಿತ್ ಶಾ ಪ್ರಸ್ತಾಪ

ನಿಯಮಗಳ ಬಿಡುಗಡೆಯ ಸಮಯದಲ್ಲಿ, ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು IPC ಯ ಸಂಬಂಧಿತ ಸೆಕ್ಷನ್‌ಗಳಿಗೆ ಉಲ್ಲೇಖವನ್ನು ನೀಡುತ್ತದೆ. ವರ್ಷಗಳಲ್ಲಿ, ಹೊಸ ಸೆಕ್ಷನ್‌ಗಳು ಮತ್ತು ಉಪ-ಸೆಕ್ಷನ್‌ಗಳ ಸೇರ್ಪಡೆಯೊಂದಿಗೆ, ದಂಡ ಸಂಹಿತೆಯು ದೊಡ್ಡದಾಗಿದೆ. ಆದರೆ, ಬದಲಾವಣೆಯ ಮೂಲಕ ಕಾನೂನನ್ನು ಹೆಚ್ಚು ಸಮಕಾಲೀನವಾಗಿಸುವ ಪ್ರಯತ್ನವಾಗಿದೆ.
“ಕಾಲಕಾಲಕ್ಕೆ, ನಿರ್ಭಯಾ ಅತ್ಯಾಚಾರ ಪ್ರಕರಣ ಮತ್ತು ನ್ಯಾಯಾಲಯದ ತೀರ್ಪುಗಳಂತಹ ಗಂಭೀರ ಘಟನೆಗಳು ಮೂರು ಪ್ರಮುಖ ಕ್ರಿಮಿನಲ್ ಕಾನೂನುಗಳಲ್ಲಿ ತಿದ್ದುಪಡಿಗಳಿಗೆ ಕಾರಣವಾಗಿವೆ. ಆದರೆ ಬದಲಾವಣೆಗಳನ್ನು ಮಾಡಲಾಗಿದ್ದರೂ ಅದು ಸ್ವಲ್ಪ ಮಾತ್ರ’’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಐಪಿಸಿ ಹೊಂದಿದ್ದ 511 ಸೆಕ್ಷನ್‌ಗಳಿಗೆ ಬದಲಾಗಿ ಭಾರತೀಯ ನ್ಯಾಯ ಸಂಹಿತೆ 356 ಸೆಕ್ಷನ್‌ಗಳನ್ನು ಹೊಂದಿದ್ದು, ಅವುಗಳಲ್ಲಿ 175 ಅನ್ನು ತಿದ್ದುಪಡಿ ಮಾಡಲಾಗಿದೆ. 8 ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ ಮತ್ತು 22 ಅನ್ನು ರದ್ದುಗೊಳಿಸಲಾಗಿದೆ ಎಂದೂ ಮೋದಿ ಸರ್ಕಾರ ತಿಳಿಸಿದೆ. 

ಇದನ್ನೂ ಓದಿ: ನವ ಭಾರತಕ್ಕೆ ಹೊಸ ಕಾನೂನು; ಇನ್ಮುಂದೆ ಗುಂಪು ಹತ್ಯೆಗೆ ಗಲ್ಲು ಶಿಕ್ಷೆ: ಅಮಿತ್‌ ಶಾ ಘೋಷಣೆ

ಇನ್ನು, ಭಾರತೀಯ ನಾಗರಿಕ ಸುರಕ್ಷೆ ಸಂಹಿತೆ ಸುಮಾರು 40 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಭಾರತೀಯ ಸಾಕ್ಷಿ ಅಧಿನಿಯಮ ಎಂದು ಬದಲಾಗಿದೆ. ಇನ್ನು, ಹೆಚ್ಚಿನ ವಿಭಾಗಗಳನ್ನು ಹೊಂದಿರುತ್ತದೆ ಮತ್ತು ಅವುಗಳನ್ನು ಹೆಚ್ಚು ಕಾಲಕ್ಕೆ ತಕ್ಕಂತೆ ಪ್ರಸ್ತುತಪಡಿಸಲಾಗಿದೆ. ವಸಾಹತುಶಾಹಿ ಪದಗಳನ್ನು ತೊಡೆದುಹಾಕಲಾಗಿದೆ ಎಂದೂ ತಿಳಿದುಬಂದಿದೆ. 

ದೃಷ್ಟಾಂತಗಳ ಬಳಕೆಯೂ ಒಂದು ಮುಖ್ಯಾಂಶವಾಗಿದೆ. ಮಾನನಷ್ಟ ಅಥವಾ ಅತಿಕ್ರಮಣದಂತಹ ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ವಿವರಿಸಲು ಸಹಾಯ ಮಾಡಲು ಭಾರತೀಯ ನ್ಯಾಯ ಸಂಹಿತೆ ಉದಾಹರಣೆಗಳನ್ನು ನೀಡುತ್ತದೆ.

ಇದನ್ನೂ ಓದಿ: ಇನ್ಮುಂದೆ ದೇಶದ್ರೋಹ ಕಾನೂನು ರದ್ದು; ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಸೇರಿ 3 ಕಾಯ್ದೆ ಬದಲು: ಅಮಿತ್‌ ಶಾ ಮಹತ್ವದ ಘೋಷಣೆ

ಇತ್ತೀಚೆಗೆ ಜಾರಿಗೆ ತಂದ ಡಿಜಿಟಲ್ ಪರ್ಸನಲ್ ಡೇಟಾ ಸಂರಕ್ಷಣಾ ಮಸೂದೆಯಲ್ಲಿ ಸರ್ಕಾರವು ಇದೇ ಮಾದರಿಯನ್ನು ಅನುಸರಿಸಿತ್ತು. ಇದಲ್ಲದೆ, ಅಪರಾಧಗಳನ್ನು ಸಂಘಟಿಸಲಾಗಿದೆ ಮತ್ತು ಮರುಹೊಂದಿಸಲಾಗಿದೆ ಹಾಗೂ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧದಂತಹ ಕೆಲವು ವಿಶೇಷ ಗಮನ ನೀಡಲಾಗಿದ್ದು, ತಂತ್ರಜ್ಞಾನದ ಬಳಕೆಯು ಇತರ ಪ್ರಮುಖ ವಿಷಯವಾಗಿದೆ. ತಂತ್ರಜ್ಞಾನದ ಬಳಕೆಯ ಮೂಲಕ ನಾಗರಿಕರಿಗೆ ಜೀವನವನ್ನು ಸರಳಗೊಳಿಸುವ ಉದ್ದೇಶವನ್ನೂ ಹೊಂದಿದೆ. ಅಪರಾಧ ಎಸಗಿರುವ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊರಗೆ, ಆದರೆ ರಾಜ್ಯದೊಳಗೆ ಎಲೆಕ್ಟ್ರಾನಿಕ್ ಎಫ್‌ಐಆರ್‌ಗಳು ಅಥವಾ ಶೂನ್ಯ ಎಫ್‌ಐಆರ್‌ಗಳನ್ನು ಸಲ್ಲಿಸುವುದನ್ನೂ ಒಳಗೊಂಡಿದೆ.

ಬ್ರಿಟೀಷರು ತಂದ ಕ್ರಿಮಿನಲ್ ಕಾನೂನು ಕಿತ್ತು ಹಾಕಿದ ಕೇಂದ್ರ ಸರ್ಕಾರ, ಹೊಸ ಕಾಯ್ದೆ ಮಂಡನೆ!

Latest Videos
Follow Us:
Download App:
  • android
  • ios