ನಾವಿಂದು ಹೆಮ್ಮೆಯಿಂದ ,ಗೌರವದಿಂದ ಸೆಲ್ಯೂಟ್ ಮಾಡುವ ಭಾರತ ದೇಶದ ಹೆಗ್ಗುರುತಾಗಿರುವ ತ್ರಿವರ್ಣ ಧ್ವಜದ ಪರಿಕಲ್ಪಕರು,ವಿನ್ಯಾಸಿಗರು ಶ್ರೀ ಪಿಂಗಳಿ ವೆಂಕಯ್ಯ ಅವರು. ಅಪ್ಪಟ ಗಾಂಧಿವಾದಿಯಾಗಿದ್ದ ವೆಂಕಯ್ಯನವರು ಆಗಸ್ಟ್ 2, 1876 ನೇ ಇಸವಿಯಲ್ಲಿ  ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು. ಆಫ್ರಿಕಾದ ಆಂಗ್ಲೋ ಬೋಯರ್ ಯುದ್ಧದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಬ್ರಿಟಿಷ್ ಸೈನ್ಯದ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಗಾಂಧೀಜಿ ಮತ್ತು ವೆಂಕಯ್ಯನವರ ಭೇಟಿಗೆ ಸಾಕ್ಷಿಯಾಗಿದ್ದು ಅದೇ ಆಫ್ರಿಕಾ. ಭಾರತಕ್ಕೆ ಮರಳಿದ ನಂತರ ಹತ್ತಿ ಕೃಷಿಯತ್ತ ಹೆಚ್ಚು ಗಮನ ಹರಿಸಿದ ಇವರು ಅದರಲ್ಲೇ ಸಾಕಷ್ಟು ಪ್ರಯೋಗಗಳನ್ನು ಮಾಡುತಿದ್ದರು.

ಆಂಧ್ರಪ್ರದೇಶದ ಮಚಲೀಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ದುಡಿಯುವಾಗಲೇ ಸಂಸ್ಕೃತ ,ಉರ್ದು,ಜಪಾನಿ ಭಾಷೆಗಳನ್ನು ಕಲಿಯಲು ಬಹಳಷ್ಟು ಆಸಕ್ತರಾಗಿದ್ದರು. ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ಜುಲೈ 22, 1947 ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.

ಹುಬ್ಬಳ್ಳಿ: ರಾಷ್ಟ್ರಧ್ವಜ ಸಿದ್ಧಪಡಿಸುವವರಿಗೆ ಸಿಕ್ಕಿಲ್ಲ ಪ್ರೋತ್ಸಾಹ ಧನ

1963 ರ ಜುಲೈ 4 ರಂದು ಇಹಲೋಕ ತ್ಯಜಿಸಿದ ಪಿಂಗಳಿ ಅವರ ಗೌರವ ಸ್ಮರಣಾರ್ಥ 2009 ರಲ್ಲಿ ಇವರ ಭಾವಚಿತ್ರವನ್ನು ಹೊಂದಿದ ಸ್ಟಾಂಪ್ ಅನ್ನು ಬಿಡುಗಡೆ ಮಾಡಲಾಗಿತ್ತು ನಂತರ 1931 ಆಗಸ್ಟ್ 6 ರಂದು ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೇಸರಿ, ಬಿಳಿ, ಹಸಿರು ಧ್ವಜದ ಮಧ್ಯೆ ಚರಕವಿರುವ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು . ಜಲಂಧರ್ ನ ಶಿಕ್ಷಣ ತಜ್ಞ ಲಾಲಾ ಹಂಸರಾಜ್ ಅವರು ಕೆಂಪು ಹಸಿರು ವಿನ್ಯಾಸದ ನಂತರ ಆಯ್ಕೆಯಾದ ತ್ರಿವರ್ಣ ಧ್ವಜದಲ್ಲಿ ಚರಕದ ಬದಲಾಗಿ ಅಶೋಕ ಚಕ್ರವನ್ನು ಪರಿಗಣಿಸಲು ಸೂಚಿಸಿದರೇ ಸರ್ವಪಳ್ಳಿ ರಾಧಾಕೃಷ್ಣನ್ ತ್ರಿವರ್ಣಕ್ಕೆ ಹೊಸ ಅರ್ಥ ಕಲ್ಪಿಸಿದರು. ತ್ರಿವರ್ಣ ಧ್ವಜದಲ್ಲಿ ಕೇಸರಿ ತ್ಯಾಗ ಮತ್ತು ಬಲಿದಾನ, ಬಿಳಿ ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಸಮೃದ್ಧಿ ಸೌಹಾರ್ದತೆ, ಅಶೋಕ ನ್ಯಾಯ ಧರ್ಮದ ಸಂಕೇತವಾಗಿದೆ.