ರೈಲು ದುರಂತದಲ್ಲಿ ಸತ್ತವರ ದೇಹಕ್ಕೆ ಎಂಬಾಮಿಂಗ್, ಹೀಗೆ ಮಾಡೋದ್ರಿಂದ ದೇಹ ಕೊಳೆಯೋದೆ ಇಲ್ವಾ?
ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟ ಹಲವರ ಗುರುತು ಪತ್ತೆಯಾಗಿಲ್ಲ. ಅದರಲ್ಲಿ 101 ಶವಗಳನ್ನು ವಿವಿಧ ಆಸ್ಪತ್ರೆಗಳ ಶವಾಗಾರದಲ್ಲಿ ಇಡಲಾಗಿದೆ. ಈ ಮೃತ ದೇಹಗಳು ಕೊಳೆಯುವುದನ್ನು ತಡೆಯಲು ಎಂಬಾಮಿಂಗ್ ಮಾಡಲಾಗುತ್ತಿದೆ. ಹಾಗಂದರೇನು> ಆ ಬಗ್ಗೆ ಮಾಹಿತಿ ಇಲ್ಲಿದೆ.
ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟ 101 ಮಂದಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಈ 101 ಶವಗಳನ್ನು ವಿವಿಧ ಆಸ್ಪತ್ರೆಗಳ ಶವಾಗಾರದಲ್ಲಿ ಇಡಲಾಗಿದೆ. ಈ ಮೃತ ದೇಹಗಳು ಕೊಳೆಯುವುದನ್ನು ತಡೆಯಲು ಎಂಬಾಮಿಂಗ್ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಮಂಗಳವಾರ ಮಾತನಾಡಿರುವ ವೈದ್ಯರು, ಅಪಘಾತದಲ್ಲಿ ಮೃತಪಟ್ಟವರ ಶವಗಳು ಸಾಕಷ್ಟು ಛಿದ್ರ ಛಿದ್ರವಾಗಿವೆ. ಇಂಥ ದೇಹಗಳನ್ನು ರಾಸಾಯನಿಕ ಸಿಂಪಡಿಸಿ ಇಡುವುದು ತುಂಬಾ ಕಷ್ಟಕರ. ಈಗಾಗಲೇ ಶವಗಳನ್ನು ಹೀಗೆ ಇರಿಸಿ 80 ಗಂಟೆಗಳಾಗಿವೆ. ಇನ್ನು ದೇಹಗಳು ದೀರ್ಘಾವಧಿಗೆ ಕೊಳೆಯದಂತೆ ಎಂಬಾಮಿಂಗ್ ಕೂಡ ಮಾಡಬಹುದು.
ಇನ್ನು ಮೃತದೇಹಗಳ (Deadbody) ಡಿಎನ್ಎ ಕೂಡ ಸಂಗ್ರಹಿಸಿ ಇಡಲಾಗುತ್ತಿದೆ. ಇದರಿಂದ ಅವರ ಬಂಧುಗಳನ್ನು ಪತ್ತೆ ಮಾಡಬಹುದಾಗಿದೆ. ರೈಲ್ವೆ ಇಲಾಖೆಯು, ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಿ ಮೃತರ ಗುರುತು ಪತ್ತೆ ಮಾಡುವ ಬಗ್ಗೆ ಬಂಧುಗಳು ಮಾತನಾಡಬಹುದು ಎಂದು ಮನವಿ ಮಾಡಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್,ಬಾಲಸೋರ್ ರೈಲು ಅಪಘಾತದಲ್ಲಿ (Train accident) ಸಾವನ್ನಪ್ಪಿದವರ ಮೃತದೇಹಗಳನ್ನು ಕೊಂಡೊಯ್ಯಲು ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸುವುದಾಗಿ ಘೋಷಿಸಿದ್ದಾರೆ.
ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ್ರೂ ಶವಗಳ ಜತೆ ಹಲವು ದಿನ ಕಾಲ ಕಳೆದ: ಉಳಿದಿದ್ದೇ ಪವಾಡ..
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಮಾತನಾಡಿ, ಸೂಕ್ತ ಪ್ರಕ್ರಿಯೆಯ ನಂತರ ಎಲ್ಲಾ ದೇಹಗಳನ್ನು ಅವರವರ ಸ್ಥಳಗಳಿಗೆ ಕಳುಹಿಸಲು ಹಸ್ತಾಂತರಿಸಲಾಗಿದೆ. ಒಡಿಶಾ ಸರ್ಕಾರವು ಎಲ್ಲಾ ಮೃತ ದೇಹಗಳನ್ನು ಗುರುತಿಸಲು ಬಯಸುತ್ತದೆ ಇದರಿಂದ ಅವರ ಕುಟುಂಬಗಳು ಅಂತಿಮ ವಿಧಿಗಳನ್ನು ಮಾಡಬಹುದು. ಸದ್ಯ ಬಿಸಿಲಿನ ತಾಪಮಾನಕ್ಕೆ ಮೃತದೇಹಗಳನ್ನು ಸುರಕ್ಷಿತವಾಗಿ (Safe) ಇಡುವುದು ದೊಡ್ಡ ಸವಾಲಾಗಿದೆ.
ಈ ಮೃತ ದೇಹಗಳು ಕೊಳೆಯುವುದನ್ನು ತಡೆಯಲು ಎಂಬಾಮಿಂಗ್ ಮಾಡಲಾಗುತ್ತಿದೆ. ಈ ರೀತಿಯಾಗಿ ಮೃತ ದೇಹಗಳನ್ನು ಸಾಮಾನ್ಯಕ್ಕಿಂತ ಹೆಚ್ಚು ಕಾಲ ಸಂರಕ್ಷಿಸಬಹುದು. ಆದರೆ ಮೃತಪಟ್ಟ 12 ತಾಸಿನೊಳಗೆ ಮಾತ್ರ ಎಂಬಾಮಿಂಗ್ ಮಾಡಬೇಕು. ಆಗ ಮಾತ್ರ ಮೃತದೇಹ ಸುಸ್ಥಿತಿಯಲ್ಲಿರುತ್ತದೆ. ಹೀಗಾಗಿ ಎಂಬಾಮಿಂಗ್ ಕೂಡ ಫಲ ನೀಡುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹಾಗಾದ್ರೆ ಎಂಬಾಮಿಂಗ್ ಎಂದರೇನು ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ? ಆ ಕುರಿತಾದ ಮಾಹಿತಿ ಇಲ್ಲಿದೆ.
ಕಲ್ಲು ಹೃದಯವೂ ಕರಗೀತು..! ಮೃತದೇಹಗಳ ರಾಶಿಯಲ್ಲಿ ಮುಸುಕು ತೆಗೆದು ಮಗನಿಗಾಗಿ ಹುಡುಕಾಡಿದ ತಂದೆ!
ಎಂಬಾಮಿಂಗ್ ಎಂದರೇನು?
ಮೃತ ದೇಹವನ್ನು ಸಾಮಾನ್ಯಕ್ಕಿಂತ ಹೆಚ್ಚು ಕಾಲ ಸಂರಕ್ಷಿಸಲು ಎಂಬಾಮಿಂಗ್ ಮಾಡಲಾಗುತ್ತದೆ. ಅಂದರೆ ಮೃತದೇಹ ಕೊಳೆಯುವುದನ್ನು ತಡೆಯಲು ಮೃತದೇಹದ ಮೇಲೆ ವಿಶೇಷ ರಾಸಾಯನಿಕಗಳನ್ನು ಲೇಪಿಸಲಾಗುತ್ತದೆ. ಆದರೆ ಇದನ್ನು ಯಾರು ಬೇಕೋ ಅವರು, ಯಾವಾಗ ಬೇಕಾದರೆ ಆಗ ಮಾಡುವಂತಿಲ್ಲ. ವೈದ್ಯರು (Doctors) ಮತ್ತು ಫೋರೆನ್ಸಿಕ್ ತಜ್ಞರ ಮೇಲ್ವಿಚಾರಣೆಯಲ್ಲಿ ಈ ಕೆಲಸವನ್ನು ಮಾಡಲಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಮೃತ ದೇಹವನ್ನು ಸುರಕ್ಷಿತವಾಗಿಡಲು ರಾಸಾಯನಿಕಗಳನ್ನು ಹಚ್ಚುವ ಪ್ರಕ್ರಿಯೆಯನ್ನು ಎಂಬಾಮಿಂಗ್ ಎಂದು ಕರೆಯಲಾಗುತ್ತದೆ.
ಎಂಬಾಮಿಂಗ್ ಮಾಡುವುದು ಹೇಗೆ?
ಎಂಬಾಮಿಂಗ್ ಎನ್ನುವುದು ಮೃತ ವ್ಯಕ್ತಿಯ ದೇಹಕ್ಕೆ ರಾಸಾಯನಿಕಗಳನ್ನು (Chemical) ಹಚ್ಚುವ ಪ್ರಕ್ರಿಯೆಯಾಗಿದೆ. ಇದು ಅವಶೇಷಗಳನ್ನು ತಾತ್ಕಾಲಿಕವಾಗಿ ಸಂರಕ್ಷಿಸುತ್ತದೆ. ದೇಹ ಕೊಳೆಯುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಲೇಪನದ ಪ್ರಕ್ರಿಯೆಯು ಸಾವಿರಾರು ವರ್ಷಗಳಿಂದ ವಿವಿಧ ರೂಪಗಳಲ್ಲಿ ಪ್ರಚಲಿತವಾಗಿದೆ. ಭುವನೇಶ್ವರ್ ಏಮ್ಸ್ ಶವಪೆಟ್ಟಿಗೆಗಳು, ಐಸ್ ಮತ್ತು ಫಾರ್ಮಾಲಿನ್ ರಾಸಾಯನಿಕವನ್ನು ಎಂಬಾಮಿಂಗ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದೆ. ಮೃತ ದೇಹವನ್ನು ಸರಿಯಾಗಿ ಸ್ವಚ್ಛಗೊಳಿಸಿದ ನಂತರ ಅಂಗರಚನಾಶಾಸ್ತ್ರ ವಿಭಾಗದ ತಜ್ಞರು ಫಾರ್ಮಾಲಿನ್ ರಾಸಾಯನಿಕವನ್ನು ಲೇಪಿಸುತ್ತಾರೆ. ಇದರ ನಂತರ ಅದನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ ಮತ್ತು ತಂಪಾದ ಕೋಣೆಯಲ್ಲಿ ಇರಿಸಲಾಗುತ್ತದೆ. ಇದರೊಂದಿಗೆ ಮೃತದೇಹವನ್ನು ಇನ್ನೂ ಕೆಲ ಕಾಲ ಸುರಕ್ಷಿತವಾಗಿಡಬಹುದು.