ನವದೆಹಲಿ[ಮಾ.20]: ನೇಣಿಗೇರಿಸುವ ಮೊದಲು ವಿನಯ್ ಜೈಲು ಅಧಿಕಾರಿಗಳನ್ನು ತನ್ನನ್ನು ನೇಣಿಗೇರಿಸದಂತೆ ಕೇಳಿಕೊಂಡಿದ್ದಾನೆ. ನನ್ನನ್ನು ಕ್ಷಮಿಸಿ, ನೇಣಿಗೆ ಹಾಕಬೇಡಿ ಎಂದು ಗೋಗರೆದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ಷಯ್ ಥಾಕೂರ್(31), ಪವನ್ ಗುಪ್ತಾ (25), ವಿನಯ್ ಶರ್ಮಾ(26), ಮುಕೇಶ್ ಸಿಂಗ್ (32)ನ್ನು ಶುಕ್ರವಾರ ಬೆಳಗ್ಗೆ 5.30ಕ್ಕೆ ನೇಣಿಗೇರಿಸಲಾಯಿತು. ಆರೋಪಿಗಳಾದ ಪವನ್, ವಿನಯ್ ಹಾಗೂ ಮುಖೇಶ್ ತಿಹಾರ್ ಜೈಲಿನಲ್ಲಿ ಕೆಲಸ ಮಾಡಿದ ಸಂಬಳವನ್ನು ಅವರ ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ನೇಣಿಗೆ ಮೊದಲು ಸ್ನಾನ, ತಿಂಡಿ, ಊಟ ನಿರಾಕರಿಸಿದ ರೇಪ್ ರಕ್ಕಸರು..!

ನನ್ನನ್ನು ಕ್ಷಮಿಸಿ, ನೇಣಿಗೆ ಹಾಕಬೇಡಿ ಎಂದು ಗೋಗರೆದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಫೆಬ್ರವರಿಯಲ್ಲಿ ವಿನಯ್ ಜೈಲಿನ ಒಳಗೆ ತನ್ನ ತಲೆಯನ್ನು ಗೋಡೆಗೆ ಬಡಿದುಕೊಂಡಿದ್ದ.

ಅಕ್ಷಯ್ ಥಾಕೂರ್ ಮಾತ್ರ ಜೈಲಿನಲ್ಲಿ ಯಾವುದೇ ಕೆಲಸ ಮಾಡಿರಲಿಲ್ಲ. ನಾಲ್ವರ ವಸ್ತುಗಳನ್ನೂ ಅವರ ಕುಟುಂಬಸ್ಥರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಣಿಗೇರಿಸುವ ಮೊದಲು ವಿನಯ್ ಜೈಲು ಅಧಿಕಾರಿಗಳನ್ನು ತನ್ನನ್ನು ನೇಣಿಗೇರಿಸದಂತೆ ಕೇಳಿಕೊಂಡಿದ್ದಾನೆ.

ಕೊನೆಯೂ ನಿರ್ಭಯಾಗೆ ಸಿಕ್ತು ನ್ಯಾಯ: ಕಾಮುಕರಿಗೆ ಗಲ್ಲು

ಪ್ರೊಟೋಕಾಲ್ ಪ್ರಕಾರ ಆರೋಪಿಗಳ ದೇಹವನ್ನು 30 ನಿಮಿಷಗಳ ಕಾಲ ನೇಣುಗಂಬದಲ್ಲಿರಿಸಲಾಗಿತ್ತು. ನಂತರದಲ್ಲಿ ವೈದ್ಯಾಧಿಕಾರಿಗಳು ಆರೋಪಿಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಆರೋಪಿಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ.