Asianet Suvarna News Asianet Suvarna News

ಭಾರತದ ಬೆನ್ನಿಗೆ ಚೂರಿ ಇರಿದ ಮಾಲ್ಡೀವ್ಸ್‌, ಮಾಲೆಗೆ ಬರಲಿದೆ ಚೀನಾದ ಬೇಹುಗಾರಿಕಾ ಹಡಗು !

ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ತಮ್ಮ ದೇಶದಲ್ಲಿ ಯಾವುದೇ ವಿದೇಶಿ ಮಿಲಿಟರಿ ಉಪಸ್ಥಿತಿ ಇರುವುದಿಲ್ಲ ಎಂದು ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಹೇಳಿದ್ದರು. ಆದರೆ ಫೆಬ್ರವರಿ 8 ರಂದು ಚೀನಾದ ಬೇಹುಗಾರಿಕಾ ಹಡಗು ರಾಜಧಾನಿ ಮಾಲೆ ತಲುಪುತ್ತಿದೆ. ಈ ಹಡಗು ಸಂಶೋಧನಾ ನೌಕೆಯಲ್ಲ ಬೇಹುಗಾರಿಕೆಗೆ ಬಳಕೆಯಾಗುತ್ತಿದೆ ಎಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ.

Maldives president Mohamed muizzu  Muijju says foreign military out China spy ship will arrive tomorrow itself san
Author
First Published Feb 7, 2024, 10:56 PM IST

ನವದೆಹಲಿ (ಫೆ.7): ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ತಮ್ಮ ದೇಶದಲ್ಲಿ ಯಾವುದೇ ವಿದೇಶಿ ಮಿಲಿಟರಿಯ ಉಪಸ್ಥಿತಿಗೆ ಅವಕಾಶ ನೀಡೋದಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲಿಯೇ ತಮ್ಮ ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆಯೂ ಮಾತನಾಡಿದ್ದರು. ಶೀಘ್ರದಲ್ಲಿಯೇ ಯಾವುದೇ ವಿದೇಶಿ ಮಿಲಿಟರಿ ಅಗತ್ಯವಿಲ್ಲದ ಸಮಯ ಬರುತ್ತದೆ. ವಿದೇಶಿ ಸೈನ್ಯ ನಮ್ಮ ನೆಲದಲ್ಲಿ ಇರೋದಿಲ್ಲ ಎಂದಿದ್ದರು. ಆದರೆ, ಮಾಲ್ಡೀವ್ಸ್‌ ಅಧ್ಯಕ್ಷನ ಬೂಟಾಟಿಕೆಯ ಮಾತುಗಳು ಎನ್ನುವುದಕ್ಕೆ ಸಾಕ್ಷ್ಯ ಎನ್ನುವಂತೆ ಉದಾಹರಣೆ ಸಿಕ್ಕಿದೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನೆ ತನ್ನ ಸ್ಥಾನವನ್ನು ತೊರೆಯಬೇಕು ಎಂದು ಅಧ್ಯಕ್ಷ ತಿಳಿಸಿದ್ದಾರೆ.  ಸಮುದ್ರ, ವಾಯು ಮತ್ತು ಭೂ ಮಟ್ಟದಲ್ಲಿ ಮಾಲ್ಡೀವ್ಸ್‌ ತನ್ನದೇ ಸೇನೆಯನ್ನು ಹೊಂದಿರಲಿದೆ ಎಂದು ಮುಯಿಝು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಮಾರ್ಚ್‌ 10 ರಂದು ಮೊದಲ ಹಂತದ ಭಾರತೀಯ ಸೇನೆ ಮಾಲ್ಡೀವ್ಸ್‌ಅನ್ನು ತೊರೆಯಲಿದ್ದರೆ, ಮೇ 10 ರಂದು 2ನೇ ಹಂತದ ಸೈನಿಕರು ತೊರೆಯಲಿದ್ದಾರೆ. ಪ್ರಸ್ತುತ 88 ಭಾರತೀಯ ಸೈನಿಕರು ಮಾಲ್ಟೀವ್ಸ್‌ನಲ್ಲಿದ್ದು, ಅಲ್ಲಿನ ಹೆಲಿಕಾಪ್ಟರ್‌ ಹಾಗೂ ಯುದ್ಧವಿಮಾನಗಳ ಹಾರಾಟ ನೋಡಿಕೊಳ್ಳುತ್ತಿದ್ದಾರೆ. ಆದರೆ, ಇದು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಮಾತ್ರ ಇರುವ ವ್ಯವಸ್ಥೆಯಾಗಿದೆ.

ಇದರ ನಡುವೆ ಮಾಲ್ಡೀವ್ಸ್‌ ದೇಶದ ಬೂಟಾಟಿಕೆ ಎನ್ನುವಂತೆ ಭಾರತದ ವಿರೋಧಿಯಾಗಿರುವ ಚೀನಾದ ಬೇಹುಗಾರಿಕಾ ಹಡಗಿಗೆ ನೆಲೆ ನೀಡಲು ಸಜ್ಜಾಗಿದೆ. ಚೀನಾದ ಪತ್ತೇದಾರಿ ಹಡಗು ಜಿಯಾಂಗ್ ಯಾಂಗ್ ಹಾಂಗ್ 3 ಗೆ ನೆಲೆ ನೀಡಿದೆ. ಇದನ್ನು ಚೀನಾ ಸಂಶೋಧನಾ ಹಡಗು ಎಂದಿದ್ದರೂ, ಮೂಲತಃ ಇದರ ಕಾರ್ಯ ಬೇಹುಗಾರಿಕೆ. ಜನವರಿ 23ರಕ್ಕೆ ಈ ಹಡಗಿಗೆ ಅನುಮತಿ ನೀಡಲಾಗಿದ್ದರೆ, ಫೆ.8 ರಂದು ಬೇಹುಗಾರಿಕಾ ಹಡಗು ಮಾಲ್ಡೀವ್ಸ್‌ ರಾಜಧಾನಿ ಮಾಲೆ ತಲುಪಲಿದೆ. ಮೂರು ದಿನಗಳ ಹಿಂದೆಯಷ್ಟೇ ಶ್ರೀಲಂಕಾ ಈ ಹಡಗಿಗೆ ತನ್ನ ಅನುಮತಿ ನೀಡಿರಲಿಲ್ಲ.

ಚೀನಾದ ಹಡಗಿಗೆ ತನ್ನ ಬಂದರು ನೀಡಲು ಶ್ರೀಲಂಕಾ ಸ್ಪಷ್ಟವಾಗಿ ನಿರಾಕರಿಸಿದೆ. ತನ್ನ ದೇಶದ ಕಡಲ ವ್ಯಾಪಿಗೆ ಬರಲು ಆಗಮಿಸಿದ ಈ ಹಡಗನ್ನು ಸಾಕಷ್ಟು ಬಾರಿ ಶ್ರೀಲಂಕಾ ತನ್ನ ಸಾಗರಗಡಿಯಿಂದ ಹೊರಹಾಕಿದೆ. ಏಕೆಂದರೆ ಚೀನಾ ಹೇಳಿರುವಂತೆ ಇದು ಸಂಶೋಧನೆಯ ಹಡಗಲ್ಲ. ಸಮುದ್ರ ಪ್ರದೇಶಗಳ ಆಳ ಮತ್ತು ಭೂವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಲ್ಲದೆ, ಈ ಭಾಗದ ಬಲಿಷ್ಠ ಮಿಲಿಟರಿಯಾಗಿರುವ ಭಾರತದ ರಕ್ಷಣಾ ಸೌಲಭ್ಯಗಳನ್ನು ಸಹ ತನಿಖೆ ಮಾಡುತ್ತದೆ.

ಚೀನಾದತ್ತ ಒಲವು ತೋರಿದ ಮಾಲ್ಡೀವ್ಸ್‌: ಚೀನಾದ ಸಹಾಯದಿಂದಲೇ ಅಧಿಕಾರಕ್ಕೆ ಏರಿರುವ ಮೊಹಮದ್‌ ಮುಯಿಝು ಈಗ ಚೀನಾ ಪರವಾಗಿ ತಮ್ಮ ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಸರ್ಕಾರ ನೇರವಾಗಿಯೇ ಚೀನಾ ಪರ ವಾಲುತ್ತಿದೆ. ಇದೇ ಕಾರಣಕ್ಕಾಗಿ ಚೀನಾ ತನ್ನ  ಬೇಹುಗಾರಿಕಾ ಹಡಗನ್ನು ಹಿಂದೂ ಮಹಾಸಾಗರ ಪ್ರದೇಶಕ್ಕೆ (ಐಒಆರ್) ಕಳುಹಿಸಿದೆ. ಇದನ್ನು ಅನೇಕ ಓಪನ್ ಸೋರ್ಸ್ ಗುಪ್ತಚರರು ಸಹ ದೃಢಪಡಿಸಿದ್ದಾರೆ. ಇನ್ನು ಚೀನಾದ ಸಂಶೋಧನಾ ನೌಕೆ ಎಂದು ಕರೆಯುವ ಈ ಬೇಹುಗಾರಿಕಾ ಹಡಗಿನ ಮೇಲೆ ಭಾರತೀಯ ನೌಕಾಪಡೆ ನಿರಂತರವಾಗಿ ಕಣ್ಣಿಟ್ಟಿದೆ. ಇಷ್ಟೇ ಅಲ್ಲ, ಭಾರತೀಯ ನೌಕಾಪಡೆಯು ತನ್ನ ಕೆಲವು ಯುದ್ಧನೌಕೆಗಳನ್ನು ಅದರ ಮೇಲೆ ನಿಗಾ ಇಡುವಂತೆ ಕೇಳಿಕೊಂಡಿದೆ. ಇವುಗಳನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿದೆ. 

ಭಾರತದ ಕ್ಷಿಪಣಿ ಪರೀಕ್ಷೆ ಮೇಲೆ ನಿಗಾಕ್ಕೆ China ಗುಪ್ತಚರ ಹಡಗು..!

ಇನ್ನು ಈ ಹಡುಗು ಮಾಲೆ ಬಂದರಿನತ್ತ ಹೋಗುತ್ತಿರುವುದೇಕೆ ಎನ್ನುವುದಕ್ಕೆ ಇನ್ನೂ ಕಾರಣ ತಿಳಿದಿಲ್ಲ. ಆದರೆ, ಭಾರತೀಯ ನೌಕಾಪಡೆ ಇದರ ಮೇಲೆ ತೀವ್ರ ನಿಗಾ ಇರಿಸಿದೆ. ಚೀನಾ ಇಂಥ 10 ಬೇಹುಗಾರಿಕಾ ಹಡಗನ್ನು ಹೊಂದಿದೆ. ಜಿಯಾಂಗ್ ಯಾಂಗ್ ಹಾಂಗ್ 03 ಅನ್ನು 2016 ರಲ್ಲಿ ತಯಾರಿಸಲಾಗಿದ್ದು,  ಇವು ಸಮುದ್ರ ಸಮೀಕ್ಷೆ ಮತ್ತು ಸಂಶೋಧನೆ ಉದ್ದೇಶಿತ ಹಡಗುಗಳಾಗಿವೆ. ಇದರ ಉದ್ದ 100 ಮೀಟರ್ ಮತ್ತು ಕಿರಣವು 18 ಮೀಟರ್.

ಭಾರತದ ವಿರೋಧವಿದ್ದರೂ ಲಂಕಾಗೆ ಬರಲಿದೆ ಚೀನಿ ಗೂಢಚಾರಿಕೆ ಹಡಗು

 

Follow Us:
Download App:
  • android
  • ios