Asianet Suvarna News Asianet Suvarna News

ಸಂಸತ್ ವೀಕ್ಷಿಸಿ ವಾವ್ ಎಂದ ಸುಧಾಮೂರ್ತಿಗೆ ಎಂಪಿ ಆಗೋದು ಯಾವಾಗ ಕೇಳಿದ ನೆಟ್ಟಿಗರು..!

ಇನ್‌ಫೋಸಿಸ್ ಪ್ರತಿಷ್ಠಾನದ ಸ್ಥಾಪಕಿ, ಲೇಖಕಿ, ಕೊಡುಗೈ ದಾನಿ ಸುಧಾಮೂರ್ತಿ ಅವರು ಹೊಸದಾಗಿ ಸ್ಥಾಪಿತವಾದ ಸಂಸತ್ ಭವನಕ್ಕೆ ಇಂದು  ಭೇಟಿ ನೀಡಿದ್ದು, ಹೊಸ ಸಂಸತ್‌ನ ಸೌಂದರ್ಯಕ್ಕೆ, ಘನತೆಗೆ ವಾಸ್ತುಶಿಲ್ಪಕ್ಕೆ ಅವರು ಭಾವುಕರಾಗಿದ್ದು, ಇದರ ಸೌಂದರ್ಯ ವರ್ಣಿಸಲು ಪದಗಳೇ ಇಲ್ಲ ಎಂದು ಹೇಳಿದ್ದಾರೆ.  

Loksabha Election 2023 what Infosys Sudhamurthy said while asking Her about entering In active Politics akb
Author
First Published Dec 8, 2023, 6:10 PM IST

ನವದೆಹಲಿ: ಇನ್‌ಫೋಸಿಸ್ ಪ್ರತಿಷ್ಠಾನದ ಸ್ಥಾಪಕಿ, ಲೇಖಕಿ, ಕೊಡುಗೈ ದಾನಿ ಸುಧಾಮೂರ್ತಿ ಅವರು ಹೊಸದಾಗಿ ಸ್ಥಾಪಿತವಾದ ಸಂಸತ್ ಭವನಕ್ಕೆ ಇಂದು  ಭೇಟಿ ನೀಡಿದ್ದು, ಹೊಸ ಸಂಸತ್‌ನ ಸೌಂದರ್ಯಕ್ಕೆ, ಘನತೆಗೆ ವಾಸ್ತುಶಿಲ್ಪಕ್ಕೆ ಅವರು ಭಾವುಕರಾಗಿದ್ದು, ಇದರ ಸೌಂದರ್ಯ ವರ್ಣಿಸಲು ಪದಗಳೇ ಇಲ್ಲ ಎಂದು ಹೇಳಿದ್ದಾರೆ.  

ಸಂಸತ್ ಒಳಾಂಗಣವನ್ನು ಭಾರತದ ವಿವಿಧ ರಾಜ್ಯಗಳ ಪರಂಪರೆ ಸಂಸ್ಕೃತಿ, ಕಲೆಗಳನ್ನು ಹಿನ್ನೆಲೆಯಲ್ಲಿರಿಸಿ ಅಲಂಕರಿಸಲಾಗಿದ್ದು, ಸುಧಾಮೂರ್ತಿ ಇವೆಲ್ಲವನ್ನೂ ನೋಡಿ ವಿಸ್ಮಯರಾಗಿದ್ದಾರೆ. ಸಂಸತ್‌ಗೆ ಭೇಟಿ ನೀಡಿದ ಬಳಿಕ ಸಂಸತ್ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಸುಂದರವಾಗಿದೆ. ಜಸ್ಟ್ ಬ್ಯೂಟಿಫುಲ್, ಇದನ್ನು ವರ್ಣಿಸಲು ಪದಗಳಿಲ್ಲ, ಇದನ್ನು ನಾನು ಬಹಳ ಹಿಂದಿನಿಂದಲೂ ಒಮ್ಮೆ ನೋಡಬೇಕು ಎಂದು ಆಸೆ ಪಟ್ಟಿದ್ದೆ. ಹಾಗೂ ಇಂದು ನನ್ನ ಬಹುದಿನಗಳ ಕನಸು ನನಸಾಗಿದೆ. ಇದು ತುಂಬಾ ಸುಂದರವಾಗಿದೆ ಎಂದು ಸುಧಾಮೂರ್ತಿ ಹೇಳಿದ್ದಾರೆ.

ಅವರು ವಾರಕ್ಕೆ 80 - 90 ಗಂಟೆ ವರ್ಕ್‌ ಮಾಡ್ತಾರೆ: 70 ಗಂಟೆ ಕೆಲಸ ಸೂತ್ರದ ಬಗ್ಗೆ ಪತಿ ಹೇಳಿಕೆಗೆ ಸುಧಾಮೂರ್ತಿ ಪ್ರತಿಕ್ರಿಯೆ

ಈ ವೇಳೆ ಹೊಸ ಬಿಲ್ಡಿಂಗ್ ನಿಮಗೆ ಇಷ್ಟವಾಯ್ತೆ ಎಂದು ಮಾಧ್ಯಮದವರು ಸುಧಾಮೂರ್ತಿಯವರನ್ನು ಪ್ರಶ್ನಿಸಿದ್ದು, ತುಂಬಾ ಇಷ್ಟವಾಯ್ತು ಎಂದು ಉತ್ತರಿಸಿದ್ದಾರೆ.  ಇದೇ ವೇಳೆ ಒಳಗೆ ಏನೆಲ್ಲಾ ಇದೆ ಎಂದು ಕೇಳಿದ್ದು, ಇದಕ್ಕೆ ಉತ್ತರಿಸಿದ ಸುಧಾಮೂರ್ತಿ, ನಮ್ಮ ಕಲೆ, ಸಂಸ್ಕೃತಿಗಳು ಸೇರಿದಂತೆ ಎಲ್ಲವೂ ಇಲ್ಲಿವೆ. ಇಲ್ಲಿ ಎಲ್ಲವನ್ನು ಸುಂದರವಾಗಿ ಚಿತ್ರಿಸಲಾಗಿದೆ. ಕಡಿಮೆ ಸಮಯದಲ್ಲಿ ಇದೆಲ್ಲವನ್ನೂ ನಿರ್ಮಿಸಲಾಗಿದೆ. ನಾನು ಇದೆಲ್ಲವನ್ನೂ ನೋಡುವುದಕ್ಕೆ ಒಂದು ಇಡೀ ದಿನ ಬೇಕು ಎಂದು ಸುಧಾಮೂರ್ತಿ ಹೇಳಿದರು.

ಇದೇ ವೇಳೆ ಅಧಿಕೃತವಾಗಿ ಸಂಸತ್ ಪ್ರವೇಶಿಸುವ ಯೋಜನೆ ಇದೆಯೇ ಎಂದು ವರದಿಗಾರರು ಸುಧಾಮೂರ್ತಿಯವರನ್ನು ಪ್ರಶ್ನಿಸಿದ್ದು, ಇದಕ್ಕೆ ನಗುತ್ತಲೇ ಕೈ ಮುಗಿದ ಈಗ ನನ್ನ ಬಳಿ ಏನಿದೆಯೋ ಅದರಲ್ಲೇ ಸಂತಸವಾಗಿದ್ದೇನೆ ಎಂದು ಕೈ ಮುಗಿದರು. ಹಾಗಾದರೆ ಏನು ಪ್ಲಾನ್ ಇಲ್ಲವೇ ಎಂದು ಮತ್ತೆ ಪ್ರಶ್ನಿಸಿದ ವರದಿಗಾರರಿಗೆ ಮತ್ತೆ ಕೈ ಮುಗಿದ ಸುಧಾಮೂರ್ತಿ ನಾನು ಇರುವುದರಲ್ಲೇ ಈಗಾಗಲೇ ಖುಷಿಯಾಗಿದ್ದೇನೆ ಎಂದು ಹೇಳಿ ಧನ್ಯವಾದ ಸಲ್ಲಿಸಿದರು. 

Sudha Murthy: ಸುಧಾ ಮೂರ್ತಿ ಅಗ್ಗದ ಸೀರೆ ಖರೀದಿ ಮಾಡೋದೇಕೆ?

ಪ್ರಸ್ತುತ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಸಂಸತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹಲವು ವಿಚಾರಗಳ ಚರ್ಚೆ ನಡೆಯುವ ವೇಳೆಯ ಸುಧಾಮೂರ್ತಿ ಭೇಟಿ ನೀಇನ್‌ಫೋಸಿಸ್ ಪ್ರತಿಷ್ಠಾನದ ಸ್ಥಾಪಕಿ, ಲೇಖಕಿ, ಕೊಡುಗೈ ದಾನಿ ಸುಧಾಮೂರ್ತಿ ಅವರು ಹೊಸದಾಗಿ ಸ್ಥಾಪಿತವಾದ ಸಂಸತ್ ಭವನಕ್ಕೆ ಇಂದು  ಭೇಟಿ ನೀಡಿದ್ದು, ಹೊಸ ಸಂಸತ್‌ನ ಸೌಂದರ್ಯಕ್ಕೆ, ಘನತೆಗೆ ವಾಸ್ತುಶಿಲ್ಪಕ್ಕೆ ಅವರು ಭಾವುಕರಾಗಿದ್ದು, ಇದರ ಸೌಂದರ್ಯ ವರ್ಣಿಸಲು ಪದಗಳೇ ಇಲ್ಲ ಎಂದು ಹೇಳಿದ್ದಾರೆ.  ಡಿದ್ದು ಕಾಕಾತಾಳೀಯವಾಗಿತ್ತು. ಇತ್ತೀಚೆಗಷ್ಟೇ ಸುಧಾಮೂರ್ತಿಯವರಿಗೆ ಭಾರತ ಸರ್ಕಾರವೂ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಪುತ್ರಿ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಕೂಡ ಭಾಗಿಯಾಗಿದ್ದರು. 

ಕಳೆದ ಮೇ. ತಿಂಗಳಲ್ಲಿ ದೇಶದ ನೂತನ ಸಂಸತ್ ಭವನವನ್ನು ಉದ್ಘಾಟಿಸಲಾಗಿತ್ತು. ಈ ಹಿಂದೆ ಬಾಲಿವುಡ್ ನಟ ಶಾರೂಖ್ ಖಾನ್ ಕೂಡ ಸಂಸತ್ ಭವನದ ನೂತನ ಕಟ್ಟಡಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. 2020ರಲ್ಲಿ ಸಂಸತ್ ಭವನಕ್ಕೆ ಅಡಿಪಾಯ ಹಾಕಲಾಗಿತ್ತು, ಕೇವಲ 2 ವರ್ಷಗಳಲ್ಲಿ ಒಪ್ಪ ಓರಣವಾಗಿ ದೇಶದ ಸಂಸ್ಖೃತಿ ಪರಂಪರೆ ಎಲ್ಲವೂ ಮೇಳೈಸುವ ಸಂಸತ್ ಭವನ ಎದ್ದು ನಿಂತಿತ್ತು. 
 

 

 

Follow Us:
Download App:
  • android
  • ios