ಮೊದಲ ಹಂತದ ಚುನಾವಣೆ ಮಗಿದಿದೆ. ಇನ್ನು 6 ಹಂತದ ಚುನಾವಣೆ ಬಾಕಿ ಇದೆ. ಫಲಿತಾಂಶ ಜೂನ್ 4ರಂದು ಘೋಷಣೆಯಾಗಲಿದೆ. ಆದರೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮುನ್ನಡೆ ಸಾಧಿಸಿದೆ. ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೂರತ್(ಏ.22) ಲೋಕಸಭಾ ಚುನಾವಣೆ ಪ್ರಚಾರ ನಡೆಯುತ್ತಿದೆ.ಮೊದಲ ಹಂತದ ಚುನಾವಣೆ ಮುಗಿದಿದ್ದು, ಇನ್ನೂ 6 ಹಂತದ ಚುನಾವಣೆ ಬಾಕಿ ಇದೆ. ಮೊದಲ ಹಂತದ ಚುನಾವಣೆ ಬಳಿಕ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಡುವೆ ವಾಕ್ಸಮರ ಹೆಚ್ಚಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಜನ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಬಿಜೆಪಿ ಹೇಳಿಕೊಂಡರೆ, ಇಂಡಿಯಾ ಒಕ್ಕೂಟ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಚುನಾವಣಾ ಫಲಿತಾಂಶಕ್ಕೂ ಮೊದಲೇ ಬಿಜೆಪಿ ಭರ್ಜರಿ ಗೆಲುವು ಸಿಕ್ಕಿದೆ. ಸೂರತ್ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೂರತ್ ಕ್ಷೇತ್ರದಿಂದ ಒಟ್ಟು 9 ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಈ ಬೈಕಿ ಬಿಜೆಪಿಯಿಂದ ಮುಕೇಶ್ ದಲಾಲ್ ಹಾಗೂ ಕಾಂಗ್ರೆಸ್‌ನಿಂದ ನಿಲೇಶ್ ಕುಂಭಾನಿ ಪ್ರಮುಖರಾಗಿದ್ದರು. ಇವರಿಬ್ಬರ ನಡುವೆ ನೇರಾನೇರ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ನಿಲೇಶ್ ಕುಂಭಾನಿ ನಾಮಪತ್ರ ತರಿಸ್ಕೃತಗೊಂಡಿತ್ತು. ಸಹಿ ಮಿಸ್‌ಮ್ಯಾಚ್ ಸೇರಿದಂತೆ ಇತರ ಕೆಲ ಕಾರಣದಿಂದ ನಿಲೇಶ್ ಕುಂಭಾನಿ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು.
ಅರುಣಾಚಲ ಚುನಾವಣೆ, ಫಲಿತಾಂಶಕ್ಕೂ ಮೊದಲೇ ಸಿಎಂ ಪೇಮಾ ಖಂಡು ಸೇರಿ 10 ಸ್ಥಾನ ಗೆದ್ದ ಬಿಜೆಪಿ!
ನಿಲೇಶ್ ಕುಂಭಾನಿ ಜೊತೆಗೆ ಇತರ 8 ಅಭ್ಯರ್ಥಿಗಳು ನಾಪತ್ರ ಸಲ್ಲಿಸಿದ್ದರು. ಇವರೆಲ್ಲರ ನಾಮಪತ್ರವನ್ನು ಚುನಾವಣಾ ಆಯೋಗ ಪುರಸ್ಕರಿಸಿತ್ತು. ಆದರೆ ಎಂಟೂ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಹೀಗಾಗಿ ಕಣದಲ್ಲಿ ಬಿಜೆಪಿಯ ಮುಕೇಶ್ ದಲಾಲ್ ಒಬ್ಬರೆ ಸ್ಪರ್ಧೆಯಲ್ಲಿದ್ದರು. ನಾಮಪತ್ರ ಪರಿಶೀಲನೆ ಬಳಿಕ ಮುಕೇಶ್ ದಲಾಲ್ ಒಬ್ಬರೇ ಕಣದಲ್ಲಿರುವ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೂರತ್ ಲೋಕಸಭಾ ಕೇತ್ರಕ್ಕೆ ಇನ್ನೂ ಚುನಾವಣೆಯೇ ನಡೆದಿಲ್ಲ. ಕೇವಲ ನಾಮಪತ್ರ ಸಲ್ಲಿಕೆ, ಹಿಂಪಡೆಯುವಿಕೆ, ಪರೀಶೀಲನೆ ಮುಗಿದಿದೆ. ಮೇ. 7 ರಂದು ಸೂರತ್ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ.ಆದರೆ ಚುನಾವಣೆಗೂ ಮೊದಲು ಬಿಜೆಪಿ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ. ಮುಕೇಶ್ ದಲಾಲ್ ಗೆಲುವಿಗೆ ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಗುಜರಾತ್‌ನಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಸೂರತ್ ಸೇರಿದಂತೆ 26 ಕ್ಷೇತ್ರಗಳ ಗುಜರಾತ್‌ನಲ್ಲಿ ಮೇ 7 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೂ ಮೊದಲೇ ಬಿಜೆಪಿ ಗೆಲುವಿನ ನಾಗಾಲೋಟ ಆರಂಭಿಸಿದೆ.
ಇತ್ತೀಚೆಗೆ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಪೇಮಾ ಖಂಡು ಸೇರಿದಂತೆ 10 ಶಾಸಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಮೂಲಕ ಬಿಜೆಪಿ ವಿಧಾನಸಭಾ ಚುನಾವಣೆಗೂ ಮೊದಲೇ ದಾಖಲೆ ಬರೆದಿತ್ತು.
