ಬಾಬಾ ಸಿದ್ದಿಕಿ ಹತ್ಯೆ ಬಳಿಕ ಲಾರೆನ್ಸ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಈ ಬಿಗ್ ಬಾಸ್ ಖ್ಯಾತಿಯ ಕಾಮಿಡಿಯನ್!
ಬಾಬಾ ಸಿದ್ದಿಕಿ ಹತ್ಯೆ ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗಾಗಲೇ ನಟ ಸಲ್ಮಾನ್ ಖಾನ್‌ಗೆ ಎಚ್ಚರಿಕೆ ನೀಡಿದೆ. ಆದರೆ ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಾಮಿಡಿಯನ್ ಹೆಸರೂ ಇದೆ ಎಂದು ತನಿಖಾ ಮೂಲಗಳು ಹೇಳುತ್ತಿದೆ.
ಮುಂಬೈ(ಅ.15) ಮಾಜಿ ಸಚಿವ, ಬಾಲಿವುಡ್ ಸೆಲೆಬ್ರೆಟಿಗಳ ಆಪ್ತ ಬಾಬಾ ಸಿದ್ದಿಕಿ ಹತ್ಯೆ ಇದೀಗ ಹಲವರ ಆತಂಕ ಹೆಚ್ಚಿಸಿದೆ. ಕಾರಣ ಈ ಹತ್ಯೆ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಈ ಹತ್ಯೆ ಬೆನ್ನಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೊಮ್ಮೆ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆ. ಈಗಾಗಲೇ ಸಲ್ಮಾನ್ ಮನೆ ಬಳಿ ಬಿಷ್ಣೋಯ್ ಗ್ಯಾಂಗ್ ಶೂಟೌಟ್ ನಡೆಸಿತ್ತು. ಆದರೆ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಲಾರೆನ್ಸ್ ಬಿಷ್ಣೋಯ್ ಟಾರ್ಗೆಟ್ ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್ ಮಾತ್ರವಲ್ಲ, ಹಿಂದಿ ಬಿಗ್ ಬಾಸ್ ವಿನ್ನರ್, ಕಾಮಿಡಿಯನ್ ಮುನಾವರ್ ಫಾರೂಖಿ ಕೂಡ ಇದ್ದಾನೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಬಾಬಾ ಸಿದ್ದಿಕಿ ಹತ್ಯೆ ಬಳಿಕ ಇದೀಗ ಗುಪ್ತರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಮುಂಬೈ ಪೊಲೀಸರು ಹಲವು ಸೆಲೆಬ್ರೆಟಿಗಳ ಭದ್ರತ ಹೆಚ್ಚಿಸಲಾಗಿದೆ. ಇದೀಗ ಮುನಾವರ್ ಫಾರೂಖಿ ಕೂಡ ಬಿಷ್ಣೋಯ್ ಗ್ಯಾಂಗ್ ಟಾರ್ಗೆಟ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇಷ್ಟೇ ಅಲ್ಲ ಸೆಪ್ಟೆಂಬರ್ ತಿಂಗಳಲ್ಲಿ ಫಾರೂಖಿ ಹತ್ಯೆಗೆ ಪ್ರಯತ್ನ ನಡೆದಿತ್ತು ಅನ್ನೋ ಮಾಹಿತಿಯೂ ಹೊರಬಿದ್ದಿದೆ.
ಸಲ್ಮಾನ್ ಖಾನ್‌ಗೆ ನೆರವು ನೀಡಿದರೆ ಇದೇ ಗತಿ, ಸಿದ್ದಿಕ್ಕಿ ಹತ್ಯೆ ಬಳಿಕ ಲಾರೆನ್ಸ್ ಗ್ಯಾಂಗ್ ಎಚ್ಚರಿಕೆ!
ಮುನಾವರ್ ಫಾರೂಖಿ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪ್ರಯತ್ನಿಸುತ್ತಿದೆ ಅನ್ನೋ ಮಾಹಿತಿ ಮುಂಬೈ ಪೊಲೀಸರ ಕೈಸೇರಿದೆ. ಆದರೆ ಈ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಇದಕ್ಕೆ ಪೂರಕವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಮುನಾವರ್ ಫಾರೂಖಿ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಯತ್ನಿಸಿತ್ತು ಅನ್ನೋ ಆತಂಕವೂ ಹೊರಬಿದ್ದಿದೆ. ಮೂಲಗಳ ಪ್ರಕಾರ ಫಾರೂಖಿ ದೆಹಲಿಯಲ್ಲಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದ ವೇಳೆ ಹತ್ಯೆಗೆ ಪ್ಲಾನ್ ಮಾಡಲಾಗಿತ್ತು. ಪಾರೂಖಿ ಉಳಿದಿಕೊಂಡಿರುವ ಹೊಟೆಲ್‌ನಲ್ಲಿ ಬಿಷ್ಣೋಟ್ ಗ್ಯಾಂಗ್ ಹಂತಕರು ಉಳಿದುಕೊಂಡಿದ್ದರು ಎನ್ನಲಾಗಿದೆ. ಆದರೆ ಅಂತಿಮ ಕ್ಷಣದಲ್ಲಿ ಪಾರೂಖಿ ಹೊಟೆಲ್‌ನಿಂದ ಸ್ಥಳಾಂತರಗೊಂಡಿದ್ದರು. ಇದು ಗುಪ್ತಚರ ಇಲಾಖೆ ಮಾಹಿತಿ ಅಧರಿಸಿ ಮುಂಬೈ ಪೊಲೀಸರು ಪಾರೂಖಿಯನ್ನು ಸ್ಥಳಾಂತರ ಮಾಡಿದ್ದರು ಅನ್ನೋ ಮಾಹಿತಿಯೂ ಇದೆ. ಆದರೆ ಸ್ಪಷ್ಟತೆ ಲಭ್ಯವಾಗಿಲ್ಲ.
ಹಿಂದೂ ಭಾವನೆಗಳಿಗೆ ಮುನಾವಾರ್ ಫಾರೂಖಿ ಧಕ್ಕೆ ತರುತ್ತಿದ್ದಾರೆ. ಮುನಾವರ್ ಹೇಳಿಕೆ ವಿರುದ್ದ ಈಗಾಗಲೇ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಮುನಾವರ್ ತಮ್ಮ ಶೋ ಒಂದರಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪವಿದೆ. ಇದೇ ಕಾರಣದಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮುನಾವರ್ ಹಿಂದೆ ಬಿದ್ದಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಸದ್ಯ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಿದ್ದಾರೆ. ಇತ್ತ ಮುನಾವಾರ್ ಫಾರೂಖಿ ಸೇರದಂತೆ ಇತರ ಕೆಲ ಸೆಲೆಬ್ರೆಟಿಗಳೂ ಸೂಚನೆ ನೀಡಿದ್ದಾರೆ. ಭದ್ರತೆಯನ್ನೂ ಹೆಚ್ಚಿಸಿದೆ. ಈ ಮೂಲಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿಯಿಂದ ರಕ್ಷಣೆ ನೀಡಲು ಎಲ್ಲಾ ಪ್ರಯತ್ನ ಮಾಡುತ್ತಿದೆ.
ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದು ಕೊನೆಯ ಇನ್‌ಸ್ಟಾ ಪೋಸ್ಟ್ ಹಾಕಿದ ಬೆನ್ನಲ್ಲೇ ಸಿದ್ದಿಕಿ ಹತ್ಯೆ!